Sunday, 19th May 2024

ಚುನಾವಣೆ ಸಮೀಪಿಸಿದ್ದು, ಜಿಲ್ಲಾಧ್ಯಕ್ಷರಿಗೆ ಸಹಕರಿಸಿ: ಸಿ.ಸಿ.ಪಾಟೀಲ

ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಪದಗ್ರಹಣ
-ಕಣ್ಣು-ಕಿವಿ ಇಲ್ಲದವರು ಮಂತ್ರಿಗಳಾಗಿದ್ದರಿಂದ ಅಭಿವೃದ್ಧಿಗೆ ಹಿನ್ನಡೆ
-ಕಾಂಗ್ರೆಸ್‌ನ್ನು ಒದ್ದೊಡಿಸಬೇಕಿದೆ.
ಗದಗ: ಕಾರ್ಯಕರ್ತರಿಗೆ ಇಂದು ಬಿಜೆಪಿಯಲ್ಲಿ ಒತ್ತು ಕೊಡುವಷ್ಟು ಬೇರೆ ಯಾವುದೇ ಪಕ್ಷದಲ್ಲಿ ನೀಡುವುದಿಲ್ಲ. ಈ ಹಿನ್ನೆಲೆ ಯಲ್ಲಿ ಪಕ್ಷದ ಅಭಿವೃದ್ಧಿಗೆ  ಜನರ ಸೇವೆಯತ್ತ ನಮ್ಮ ಚಿತ್ತ ಇರಬೇಕು. ಮುಂಬರುವ ಚುನಾವಣೆ ಸಮಯದಲ್ಲಿ ನೂತನ ಜಿಲ್ಲಾ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಕರೆ ನೀಡಿದರು.
ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ನಡೆದ ಗದಗ ಜಿಲ್ಲಾ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಕಣ್ಣು ಕಾಣದಂತ ವರು ಮತ್ತು ಕಿವಿ ಕೇಳದವರು ಮಂತ್ರಿಗಳಾಗಿದ್ದರಿಂದ ಯಾವುದೇ ಕೆಲಸಗಳು ನಡೆಯು ತ್ತಿಲ್ಲ. ರಾಜ್ಯ ಮತ್ತು ದೇಶದಿಂದ ಕಾಂಗ್ರೆಸ್ ಸರಕಾರವನ್ನು ಒದ್ದೊಡಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಚುನಾವಣಾ ಅವಧಿಯಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇಂದ್ರ ಸರಕಾರದ ಸಾಧನೆ ಗಳನ್ನು ಮನವರಿಕೆ ಮಾಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ. ಬಿಜೆಪಿ ಹೆಚ್ಚು ಜನ ಬೆಂಬಲ ಇರುವ ಪಕ್ಷವಾ ಗಿದ್ದು, ಪ್ರಧಾನಿ ಮೋದಿ ಅವರು ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೂಯ್ಯುತ್ತಿದ್ದಾರೆ ಎಂದು ಹೇಳಿದರು.
ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಇಂದು ಗದಗ ಜಿಲ್ಲೆ ಅತೀ ವಿಸ್ತೀರ್ಣವಿರುವ ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಗದಗ ಕ್ಷೇತ್ರದಲ್ಲಿ ಜನ ಕಾಂಗ್ರೆಸ್ ಕೈ ಹಿಡಿದರು. ಬಿಜೆಪಿ ಕಾರ್ಯಕರ್ತರು, ನಮ್ಮ ಸ್ಥಳೀಯ ಮುಖಂಡರು, ಶಾಸಕರು ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷದ ಸಂಘಟನೆಯೊಂದಿಗೆ  ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡುವಲ್ಲಿ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿಯವರು ಪಕ್ಷದ ನೂತನ ಜಿಲ್ಕಾಧ್ಯಕ್ಷ ವೆಂಕನಗೌಡ(ಮುತ್ತಣ್ಣ) ಲಿಂಗನಗೌಡ್ರ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ರಾದ ಕಾಂತಿಲಾಲ್ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಲಿಂಗರಾಜಗೌಡ ಪಾಟೀಲ, ನಾರಾಯಣ ಜರ್ತಾರಕರ್, ಇರ್ಷಾದ್ ಮಾನ್ವಿ,ರಾಜು ಕುರುಡಗಿ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಇದ್ದರು.
ಇದೇ ವೇಳೆ ನೂತನವಾಗಿ ಆಯ್ಕೆಗೊಂಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮೇಶ ಮೊರಬದ ಹಾಗೂ ಗದಗ ಶಹರ ಘಟಕದ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಅವರಿಗೆ ಪಕ್ಷದ ಧ್ವಜ ನೀಡಿ ಅಭಿನಂದಿಸಲಾಯಿತು.
error: Content is protected !!