Monday, 13th May 2024

ಅಂಗವಿಕಲರಿಗೂ ಮೂಲಸೌಕರ್ಯಗಳ ಅತಿ ಅವಶ್ಯಕತೆಯಿದೆ: ಸಿದ್ದಣ್ಣ ದುರದುಂಡಿ

ಮೂಡಲಗಿ: ಅಂಗವಿಕಲರು ಈ ಸಮಾಜದಲ್ಲಿ ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗಳನ್ನು ಅವರಿಗೆ ಒದಗಿಸಿ ಕೊಡುವುದು ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.

ಅವರು ಸಮೀಪದ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಜನನಿ ಸಮಗ್ರ ಅಭಿವೃದ್ಧಿ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ, ಹಳ್ಳೂರ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ನೋವಿಲ್ಲದ ಮನಸೇ ಇಲ್ಲ ನಗುವಿಲ್ಲದ ಮುಖವಿಲ್ಲ ನಗುವ ಮುಖದ ಹಿಂದೆ ನೋವೆಂಬ ಮನಸು ಇದ್ದೆ ಇರುತ್ತೆ ಆದರೆ ಏನೇ ಆಗಲಿ, ನೀವು ಅಂಗವಿಕಲರ ನೋವಿಗೆ ದಾರಿ ದೀಪವಾಗಿ ಅವರ ಮುಖದಲ್ಲಿ ನಗು ಬೀರುವಂತೆ ಮಾಡಿ ಎಂದು ಸಂಘಗಳ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಚಿಕ್ಕನಂದಿಯ ಮಂಜುಳಾ ಗೊರಗುದ್ದಿ ಮಾತನಾಡಿ, ಸಮಾಜದಲ್ಲಿ ಇರುವ ಅಂಗವಿಕಲರ ಬಗ್ಗೆ ತಾರತಮ್ಯ ಕಾಣದೆ ಎಲ್ಲರನ್ನು ಒಂದೇ ಭಾವನೆಯಲ್ಲಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಯಲ್ಲಾಲಿoಗ ವಾಳದ, ಹಾಲಪ್ಪ ಗಡ್ಡೇಕಾರ ಮಾತನಾಡಿ, ನೆಹರು ಯುವ ಸಂಘಟನೆ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಸಂಘಟನೆ ಮಾಡುವ ಜೊತೆಗೆ ಅಂಗವಿಕಲರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅವರಿಗೂ ಒಂದು ಸಹಾಯ ಸಹಕಾರ ಮಾಡುತ್ತಿರು ಕಾರ್ಯ ಶ್ಘಾನೀಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸಪ್ಪ ಮುರಿ, ಶೀವಬಸು ಸುಳ್ಳನ್ನವರ, ಬಾಳವ್ವ ಪಟ್ಟಣಶೇಟ್ಟಿ, ರವಿ ಶಾಬಣ್ಣವರ, ಜಗದೀಶ ಹಿರೇಮಠ, ಬಂಗಾರೇಪ್ಪ ಸುಳ್ಳನ್ನವರ,ನಿಂಗವ್ವ ಕುಲಿಗೋಡ, ಈರವ್ವ ಚೌಲಗಿ, ಲಕ್ಷ್ಮೀಬಾಯಿ ಮಾದರ ಹಾಗೂ ಸಂಘಟನೆಯ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!