Sunday, 28th April 2024

ಗಾಂಧಿಯವರ ಮಾನವೀಯತೆ ಜೀವನ, ಸಂದೇಶಗಳನ್ನು ಸ್ಮರಿಸಬೇಕು

ಚಿಕ್ಕನಾಯಕನಹಳ್ಳಿ : ಕರ್ನಾಟಕ ಸರ್ವೋದಯ ಮಂಡಲ, ಕಸಾಪ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ, ಶೃಂಗಾರ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧಿಜಿ ಹುತಾತ್ಮ ದಿನವನ್ನು ಪಟ್ಟಣದ ಕನ್ನಡ ಸಂಘದ ಒಳ ಆವರಣದಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ಮಹಾತ್ಮಾ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಹತ್ಯೆ ಮಾಡಿದ ದಿನ ಇಂದು, ಆದ್ದರಿಂದ ಜನವರಿ 30 ನ್ನು ಹುತಾತ್ಮ ದಿನವೆಂದು ಕರೆಯಲಾಗುತ್ತದೆ. ಭಾರತದ ವಿಭಜನೆಯ ವಿಚಾರದಲ್ಲಿ ಗೋಡ್ಸೆೆ ಅವರು ಗಾಂಧಿಜಿ ಯವರ ತತ್ವ ಮತ್ತು ಅಭಿಪ್ರಾಯಗಳನ್ನು ಒಪ್ಪಿರಲಿಲ್ಲ, ಇದರಿಂದ ಹತ್ಯೆ ಮಾಡಿದ ಎನ್ನಲಾಗುತ್ತಿದೆ ಎಂದು ಸರ್ವೋದಯ ಮಂಡಲದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.

ಶೃಂಗಾರ ಪ್ರಕಾಶನದ ಟ್ರಸ್ಟಿ ಹಾಗು ಸಾಹಿತಿ ಎಂ.ವಿ.ನಾಗರಾಜ ರಾವ್ ಮಾತನಾಡಿ, ದೇಶದ ಪಿತಾಮಹ ಎಂದು ಕರೆಯಲ್ಪಡುವ ಮಹಾತ್ಮ ಗಾಂಧಿಯವರ ಶಾಂತಿ, ಅಹಿಂಸೆ, ಸರಳ, ಶುದ್ದ ಮಾನವೀಯತೆಯ ಜೀವನ ಮತ್ತು ಸಂದೇಶಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.

ಕಸಾಪ ಅಧ್ಯಕ್ಷೆ ಇಂದಿರಮ್ಮ, ಕನ್ನಡ ಸಂಘದ ಅಧ್ಯಕ್ಷ ರೇಣುಕಸ್ವಾಮಿ, ಕಾರ್ಯದರ್ಶಿ ಕೃಷ್ಣೇಗೌಡ, ಮಡಿವಾಳ ಸಂಘದ ಅಧ್ಯಕ್ಷ ನಾಗರಾಜು, ಸಂಪಾದಕರು ಮತ್ತು ವರದಿಗಾರರ ಸಂಘದ ಅಧ್ಯಕ್ಷ ಧನಂಜಯ್, ಉಪಾಧ್ಯಕ್ಷ ಕಾಶಿ ಪ್ರಜ್ವಲ್, ಖಜಾಂಚಿ ಸರ್ವಣ್ಣ, ಸ್ವಾಮಿನಾಥ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಮಂಜುನಾಥ ಅರಸ್, ಸಂಚಾಲಕ ಮಹಮದ್ ಜಾಕೀರ್ ಇದ್ದರು.

Leave a Reply

Your email address will not be published. Required fields are marked *

error: Content is protected !!