Monday, 13th May 2024

ಕಲಬುರಗಿ ವಿವಿಗೆ ಬಸವಣ್ಣನ ಹೆಸರಿಡಲು ಸರ್ಕಾರ ಸಿದ್ಧತೆ?

ಕಲಬುರಗಿಯ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯಕುಮಾರ್ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ಹಯ್ಯ ಕುಮಾರ್ ವಾಗ್ದಾಳಿ

ಕಲಬುರಗಿ:
ಗುಲ್ಬರ್ಗಾ ವಿಶ್ವವಿದ್ಯಾಾನಿಲಯದ ವಿಶ್ವೇಶರಯ್ಯ ಭವನದಲ್ಲಿನ ತಮ್ಮ ಉಪನ್ಯಾಾಸ ರದ್ದುಗೊಳಿಸಿದ ಕುಲಪತಿಗಳ ಕ್ರಮಕ್ಕೆೆ ಕನ್ಹಯ್ಯಕುಮಾರ್ ತೀವ್ರ ಆಕ್ರೋೋಶ ವ್ಯಕ್ತಪಡಿಡಿದ್ದಾರೆ.

ಕಲಬುರಗಿಯ ಶ್ರೀನಿವಾಸಗುಡಿ ಮೆಮೋರಿಯಲ್ ಟ್ರಸ್‌ಟ್‌ ಹಾಗೂ ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಸಂಜೆ ನಗರದ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಸಂವಿಧಾನದ ರಕ್ಷಣೆ ಮತ್ತು ಯುವ ಜನತೆಯ ಹೊಣೆ ವಿಷಯ ಕುರಿತು ವಿಶೇಷ ಉಪನ್ಯಾಾಸ ನೀಡಿದ ಅವರು, ‘ದೇಶದಲ್ಲಿ ಹಿಂದು, ಮುಸ್ಲಿಿಮರು ಮಾತ್ರ ಸಂಕಷ್ಟದಲ್ಲಿ ಇಲ್ಲ. ಇಡೀ ಹಿಂದುಸ್ತಾಾನವೇ ಸಂಕಷ್ಟದಲ್ಲಿದೆ. ಅಧಿಕಾರಿಗಳು ಸರಕಾರದ ಗುಲಾಮಗಿರಿ ಮಾಡಿದ್ದಕ್ಕಾಾಗಿಯೇ ಹಿಂದೆ ಭಾರತ ಬ್ರಿಿಟಿಷ್‌ರ ಆಡಳಿತಕ್ಕೆೆ ಒಳಪಟ್ಟಿಿತ್ತು. ಇದೀಗ ವಿವಿ ಕುಲಪತಿಗಳು ಸಹ ಅದೇ ರೀತಿ ಸರಕಾರದ ಪರವಾಗಿ ಕೆಲಸ ಮಾಡಿ ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸರಕಾರ ನನ್ನ ಉಪನ್ಯಾಾಸವನ್ನು ರದ್ದುಗೊಳಿಸಬಹುದು. ಆದರೆ, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಸಂಶೋಧನೆ ವಿಷಯದ ಮೇಲೆ ನಾ ಮಾತನಾಡಲಾರೆ ಎಂದು ಅನುಮತಿ ನಿರಾಕರಿಸಲಾಗಿದೆ. ಆದರೆ, ನಾನು ಸಂಶೋಧನೆ ಮಾಡಿಯೇ ಪಿಎಚ್‌ಡಿ ಮುಗಿಸಿದ್ದೇನೆ, ಆದರೆ ನಮ್ಮ ದೇಶ ಆಳುವವರು ಮಾತಾಡ್ತಾಾರೆ ಹೊರತು ತೇರ್ಗಡೆಯಾಗುವುದಿಲ್ಲ’ ಎಂದು ಕುಹಕವಾಡಿದರು.

ದೇಶದಾದ್ಯಂತ ನಿರುದ್ಯೋೋಗ ತಾಂಡವವಾಡುತ್ತಿಿದೆ. ರೈತರ ಆತ್ಮಹತ್ಯೆೆ ನಡೆದಿವೆ. ಇದೆಲ್ಲದಕ್ಕೆೆ ನಿಮ್ಮಲ್ಲಿ ಉತ್ತರವೇನಿದೆ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಪ್ರಶ್ನಿಿಸಿದ ಅವರು, ವಿಚಾರವಾದಿಗಳ ಕೊಲೆಗೆ ಇನ್ನೂ ಸ್ಪಷ್ಟತೆ, ನ್ಯಾಾಯ ದೊರಕಿಲ್ಲ. ಯಾಕೆ? ಎಂದರು.

ಆಡಳಿತ ನಿಮ್ಮ ಕೈಯಲ್ಲಿ ಇದೆ ಎಂದು ನೀವು ಏನು ಮಾಡಿದರೂ ನಡೆಯುತ್ತದೆ. ಪರಂಪರೆ ಹೆಸರಿನಲ್ಲಿ ನೀವು ಮಾಡ ಹೊರಟಿರುವುದು ಏನು? ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ. ಸತ್ಯ ಮತ್ತು ಸತ್ಯದ ಮಾತುಗಳನ್ನು ಯಾರಿಂದಲೂ ಮುಚ್ಚಿಿಡಲು, ಬಚ್ಚಿಿಡಲು ಸಾಧ್ಯವಿಲ್ಲ. ಒಂದಿಲ್ಲ ಒಂದು ದಿನ ಅದು ಮತ್ತೆೆ ಚಿಗುರೊಡೆದು ಬೆಳೆದೇ ಬೆಳೆಯುತ್ತದೆ. ನಾವು ಇ.ಡಿ, ಸಿಬಿಐಗಳ ಸುಳ್ಳು ಮೊಕದ್ದಮೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.

ಮಂಗಳ, ಚಂದ್ರನ ಅಂಗಳದಲ್ಲಿ ಕಾಲಿಡುವ ಈ ದೇಶದಲ್ಲಿ ಗಟಾರದಲ್ಲಿ ಇಳಿದು ಸ್ವಚ್ಛ ಮಾಡಿ ಬದುಕುವ ಜನರಿದ್ದಾರೆ ಎಂಬುದನ್ನು ಆಡಳಿತ ನಡೆಸುವರು ನೆನಪಿಡಬೇಕು ಎಂದರು.

ಇಡೀ ಹಿಂದುಸ್ತಾಾನವೇ ಸಂಕಷ್ಟದಲ್ಲಿದೆ. ಅಧಿಕಾರಿಗಳು ಸರಕಾರದ ಗುಲಾಮಗಿರಿ ಮಾಡಿದ್ದಕ್ಕಾಾಗಿಯೇ, ಹಿಂದೆ ಭಾರತ ಬ್ರಿಿಟಿಷ್ ರ ಆಡಳಿತಕ್ಕೆೆ ಒಳಪಟ್ಟಿಿತ್ತು. ಇದೀಗ ವಿವಿ ಕುಲಪತಿಗಳು ಸಹ ಅದೇ ರೀತಿ ಸರಕಾರದ ಪರವಾಗಿ ಕೆಲಸ ಮಾಡಿದ್ದು, ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಆದರೆ ಯಾರು ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ.
ಕನ್ಹಯ್ಯ ಕುಮಾರ್

Leave a Reply

Your email address will not be published. Required fields are marked *

error: Content is protected !!