Sunday, 19th May 2024

ಮುರುಡೇಶ್ವರದ ಶಿವನ ವಿರೂಪ ವಿಗ್ರಹಕ್ಕೆ ಜನಪ್ರತಿನಿಧಿಗಳ ಆಕ್ರೋಶ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಪ್ರವಾಸಿ ತಾಣ ಮುರುಡೇಶ್ವರದ ಶಿವನ ವಿಗ್ರಹವನ್ನು ವಿರೋಪ ಗೊಳಿಸಿ ಐಸಿಸ್ ಮುಖವಾಣಿಯಲ್ಲಿ ಪ್ರಕಟಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿ ನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಮುರುಡೇಶ್ವರ ದೇವ ಸ್ಥಾನಕ್ಕೆ ಹೆಚ್ಚಿನ ಭದ್ರತೆ ಕೊಡುವ ಅವಶ್ಯಕತೆಯಿದೆ. ಹೆಚ್ಚಿನ ಎಚ್ಚರಿಕೆ ಗಮನಿಸಬೇಕಾದ ಅವಷ್ಯವಿದೆ. ಮುರುಡೇಶ್ವರದ ವಿಚಾರ ಬಹಳ ಸೂಕ್ಷ್ಮ ವಿಚಾರ, ಬಹಳ ಎಚ್ಚರಿಕೆ ವಹಿಸಬೇಕಾದ ವಿಚಾರ. ಗೃಹ ಇಲಾಖೆ ಗಮನಕ್ಕೆ ಬಂದಿದೆ. ಆಂತರಿಕವಾಗಿ ಏನೆಲ್ಲಾ ಕೆಲಸಗಳು ನಡೆಯಬೇಕು ನಿನ್ನೆಯಿಂದ ಆರಂಭವಾಗಿದೆ.

ಸರ್ಕಾರ ಗಂಭೀರವಾದಂತಹ ಎಚ್ಚರಿಕೆ ಹೆಜ್ಜೆ ಇಡುತ್ತೇವೆ , ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇವೆ ಮುಖ್ಯ ಮಂತ್ರಿಗಳ ಗಮನಕ್ಕೆ ಬಂದಿದೆ ಗೃಹ ಸಚಿವರಿಗೆ ಈ ಬಗ್ಗೆ ನಿನ್ನೆ ಮಾತನಾಡಲಾಗಿದೆ ಎಂದರು.

ಇನ್ನು ಈ ಕುರಿತು ಮಾತನಾಡಿದ ಹೊನ್ನಾವರ -ಕುಮಟಾ ಶಾಸಕ ದಿನಕರ್ ಶಟ್ಟಿ, ಅವರಿಗೆ ಈ ಕೆಲಸ ಬಿಟ್ಟರೆ ಬೇರೆ ಏನು ಬರುತ್ತದೆ. ಅವರಿಗೆ ಇದೇ ಕೆಲಸ. ಅವರು ನಮ್ಮ ಜಿಲ್ಲೆಗೆ ಕಾಲು ಇಡಲಿ ಆಗ ನೋಡಿಕೊಳ್ಳುತ್ತೇವೆ. ನಾವು ಹೇಡಿಗಳಲ್ಲ, ನಾವು ಎಲ್ಲದಕ್ಕೂ ರೆಡಿ ಇದ್ದೇವೆ,. ನಾವು ದೇಶ, ಧರ್ಮಕ್ಕಾಗಿ ತ್ಯಾಗ ಮಾಡುತ್ತೇವೆ. ಅಂತವರು ನೂರು ಮಂದಿ ಬಂದರೂ ನಾನೊಬ್ಬನೇ ಸಾಕು. ನಾವು ಶಾಂತಿ ಪ್ರಿಯರೂ ಹೌದು, ಅದಕ್ಕೆ ವಿರುದ್ಧವಾಗಿ ಏನು ನೆಡೆದುಕೊಳ್ಳಬೇಕು ಎಂದು ಗೊತ್ತಿದೆ. ನಮ್ಮ ಧರ್ಮ ಹಿಂದುತ್ವ ಮುಖ್ಯ ಎಂದರು.

error: Content is protected !!