Sunday, 19th May 2024

ನಾಳೆ ನಗರದಲ್ಲಿ ಮಾಂಸ ಮಾರಾಟ ನಿಷೇಧ !

ಬೆಂಗಳೂರು: ರಾಮನವಮಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಭಾನುವಾರ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶದಲ್ಲೂ ಏ.10ರಂದು ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಿದೆ.

ಈ ಮೊದಲು ಗಾಂಧಿ ಜಯಂತಿಯಂದು ಮಾಂಸ ಮಾರಾಟವನ್ನು ಅಧಿಕೃತ ವಾಗಿ ಬಂದ್ ಮಾಡಲಾಗುತ್ತಿತ್ತು. ಉಳಿದಂತೆ ವಿವಿಧ ಹಬ್ಬ ಹರಿದಿನಗಳಂದು ಅನೇಕ ಮಾಂಸದಂಗಡಿಗಳು ಸ್ವಯಂ ಆಗಿ ಬಂದ್ ಆಗುತ್ತಿದ್ದವು. ಇತ್ತೀಚೆಗೆ ಹಬ್ಬ ಹರಿದಿನಗಳಂದು ಸರಕಾರವೇ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಕಳೆದ ಮಹಾಶಿವರಾತ್ರಿ ಮತ್ತು ಗಣೇಶ ಚತುರ್ಥಿಯಂದೂ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿತ್ತು.

ದೆಹಲಿಯ ದಕ್ಷಿಣ ಮತ್ತು ಪೂರ್ವ ಭಾಗದ ಪ್ರದೇಶಗಳಲ್ಲಿ ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಮಾಂಸ ಮಾರಾಟ ನಿಷೇಧ ಹಾಕಲಾಗಿದೆ. ಏ.2ರಂದು ಆರಂಭ ಗೊಂಡಿರುವ ನಿಷೇಧ 11ನೇ ತಾರೀಖಿನವರೆಗೆ ಇರಲಿದೆ.

ದೆಹಲಿಯ ಆಮ್ ಆದ್ಮಿ ಸರಕಾರ ಮಾಂಸ ಮಾರಾಟ ನಿಷೇಧಿಸಿ ಯಾವುದೇ ಆದೇಶ ಹೊರಡಿಸಿಲ್ಲ. ಪಾಲಿಕೆ ಸಂಸ್ಥೆಗಳು ಮಾತ್ರವೇ ತಮ್ಮ ಅಧಿಕಾರ ಬಳಸಿ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾಂಸ ಮಾರಾಟ ನಿಷೇಧದ ಆದೇಶ ಹೊರಡಿಸಿವೆ.

ರಂಜಾನ್ ಹಬ್ಬದಂದು ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಕಾಲಘಟ್ಟದಲ್ಲಿ ಮುಸ್ಲಿಮರು ಆಹಾರ ಸೇವಿಸುವು ದಿಲ್ಲ. 

error: Content is protected !!