Sunday, 19th May 2024

10 ಸಾವಿರ ಜನರ ಪ್ರತಿಭಟನೆ: ಇಂದಿನಿಂದ ಕಸ ಸಂಗ್ರಹ ಸ್ಥಗಿತ

ಬೆಂಗಳೂರು: ನಗರದಲ್ಲಿ ಕಸ ಸಂಗ್ರಹ ಮಾಡುವ ಸುಮಾರು 10 ಸಾವಿರ ಜನರು ಪ್ರತಿಭಟನೆಗೆ ಮುಂದಾಗಿದ್ದು, ಶುಕ್ರವಾರದಿಂದ ಸೋಮವಾರದ ತನಕ ಕಸ ಸಂಗ್ರಹ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಿದ್ದಾರೆ.

ವೇತನ ಪಾವತಿಯಾಗದ ಕಾರಣ ಕಸ ಸಂಗ್ರಹ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ನಗರ ದಲ್ಲಿ ಕಸದ ರಾಶಿ ಕಾಣುವ ಸಾಧ್ಯತೆ ಇದೆ. ಒಂದು ದಿನ ಸುಮಾರು 4 ಮೆಟ್ರಿಕ್ ಟನ್ ಕಸ ಸಂಗ್ರಹ ವಾಗುತ್ತದೆ.

 

ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಶುಕ್ರವಾರದಿಂದ ಸೋಮವಾರದ ತನಕ ಕಸ ಸಂಗ್ರಹ ಸಂಪೂರ್ಣ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಕಸ ಸಂಗ್ರಹ ಮಾಡುವವರ ಸಂಘದ ಅಧ್ಯಕ್ಷ ಎಸ್. ಎನ್. ಬಾಲಸುಬ್ರಮಣ್ಯ, 10 ಸಾವಿರ ಎರಡನೇ ದರ್ಜೆಯ ಕಸ ಸಂಗ್ರಹಕಾರರು ಇದ್ದಾರೆ. ಒಂದು ವಾರ್ಡ್‌ಗೆ ಸುಮಾರು 60 ಜನರಿದ್ದಾರೆ. ಅವರಿಗೆ 14 ಸಾವಿರ ರೂ. ವೇತನ ನೀಡಲಾಗುತ್ತಿದೆ. ನಮ್ಮ ಕೆಲಸ ಬಹಳ ಸವಾಲಿನದ್ದು ಗಾಜಿನ ಚೂರುಗಳು, ವೈದ್ಯಕೀಯ ತ್ಯಾಜ್ಯ, ಕಬ್ಬಿಣದ ವಸ್ತುಗಳು, ಹಸಿ ಕಸವನ್ನು ನಾವು ಸಂಗ್ರಹ ಮಾಡುತ್ತೇವೆ. ಆದರೆ ವೇತನ ಪಾವತಿ ವಿಚಾರದಲ್ಲಿ ಕ್ರಮ ಕೈಗೊಂಡಿಲ್ಲ” ಎಂದು ದೂರಿದ್ದಾರೆ.

ಈ ಬಾರಿಯ ಹಣಕಾಸು ವರ್ಷದಲ್ಲಿ ಕಸ ಸಂಗ್ರಹ ಮಾಡಲು 626 ಕೋಟಿ ನೀಡಬೇಕಿದೆ. ಆದರೆ ಸೆಪ್ಟೆಂಬರ್ ಬಳಿಕ ಅನುದಾನ ಬಿಡುಗಡೆಯೇ ಆಗಿಲ್ಲ ಎಂದು ಗುತ್ತಿಗೆ ಮಾಡುವವರು ಆರೋಪಿಸಿದ್ದಾರೆ.

ಕಸ ಸಂಗ್ರಹ ಮಾಡುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ. ಜಿಪಿಎಸ್ ಟ್ರಾಕ್ ಸರಿ ಇಲ್ಲದ ವಾಹನಗಳಿಗೆ ವೇತನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗೊಂದಲ ಉಂಟಾಗಿದ್ದು, ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಸ ಸಂಗ್ರಹ ಮಾಡದಿದ್ದರೆ ನಗರದಲ್ಲಿ ಕಸದ ರಾಶಿಯೇ ಸಂಗ್ರಹವಾಗುವ ನಿರೀಕ್ಷೆ ಇದೆ.

error: Content is protected !!