Monday, 13th May 2024

ಪದವೀಧರರ ಸಮಸ್ಯೆ ನಿವಾರಣೆ ನನ್ನ ಗುರಿ: ಡಾ.ಕೆ.ಎಂ.ಸುರೇಶ್

ಶಿರಾ: ಪದವಿಧರರ ಸಮಸ್ಯೆಗಳು ಸದನದ ಒಳಗೆ ಮತ್ತು ಹೊರಗೆ ಚರ್ಚೆಯಾಗಬೇಕು. ಸಮಸ್ಯೆ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಜನಪ್ರತಿನಿಧಿಯಾದರೆ ಮಾತ್ರ ಇದು ಸಾಧ್ಯ ಎನ್ನುವ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ. ಕೆ.ಎಂ. ಸುರೇಶ್ ನುಡಿದರು.

ನಗರದ ಹೊರವಲಯದ ಖಾಸಗಿ ಸ್ಥಳವೊಂದರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಅಥವಾ ಮೇಲ್ಮನೆ ಎಂದರೆ, ಬುದ್ದಿವಂತರ ಸದನ, ಚಿಂತಕರ ಚಾವಡಿ ಎಂದು ಕರೆಯುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರವನ್ನು ಬಂಡವಾಳಶಾಹಿಗಳು ಪ್ರತಿನಿಧಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಇಂತಹ ವ್ಯವಸ್ಥೆ ಯನ್ನು ಬದಲಾವಣೆ ಮಾಡುವ ಕಾಲ ಈಗ ಬಂದಿದೆ ಎಂದರು.

ಸರಕಾರದಲ್ಲಿ ಖಾಲಿ ಇರುವ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯ ಮಾಡುವುದು, ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ನೇಮಕಾತಿಯಲ್ಲಿ ಆಗುವ ಅಕ್ರಮಗಳ ವಿರುದ್ಧ ಹೋರಾಟ ನಡೆಸುವುದು, ಅಕ್ರಮ ಗಳನ್ನು ತಡೆಯಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯ ಪ್ರತಿಭಾನ್ವಿತರಿಂದ ತುಂಬಿದ್ದರೂ ಭಾಷಾ ಸಮಸ್ಯೆಯಿಂದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಪೂರ್ಣಗೊಳಿಸ ಲಾಗುತ್ತಿಲ್ಲ. ಆದರೆ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಆದಲ್ಲಿ ಪ್ರತಿ ವರ್ಷವೂ 150ರಷ್ಟು ಐಎಎಸ್ ಅಧಿಕಾರಿಗಳು ಕರ್ನಾಟಕದಿಂದ ಹೊಮ್ಮಲಿದ್ದಾರೆ. ಇದಕ್ಕಾಗಿ ಕನ್ನಡ ಸಾಹಿತಿಗಳು ಮತ್ತು ನಾಯಕರುಗಳ ನೇತೃತ್ವದಲ್ಲಿ ನಿಯೋಗವನ್ನು ಕೊಂಡೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತೇನೆ.

ವಿಧಾನಪರಿಷತ್ ಸದಸ್ಯನಾದರೆ ನನಗೆ ನೀಡುವ ಗೌರವಧನದಲ್ಲಿ 1 ರೂಪಾಯಿ ಮಾತ್ರ ಪಡೆದು ಉಳಿದ ಹಣವನ್ನು ಪುಸ್ತಕ ಖರೀದಿ ಹಾಗೂ ಸಾರ್ವಜನಿಕ ಗ್ರಂಥಾಲಯಕ್ಕೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನಕ್ಕೆ ನೀಡುತ್ತೇನೆ. ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಪರ್ಧಾಭವನ ನಿರ್ಮಾಣ ಮಾಡಿ 24/7 ಗ್ರಂಥಾಲಯ ಸೌಲಭ್ಯ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾ ಗಾರ ಕೌಶಲ್ಯಾಭಿವೃದ್ದಿ ತರಬೇಡಿ ನೀಡಿ ಗ್ರಾಮೀಣ ಭಾಗದ ಪ್ರತಿಭಾವಂತ ಪದವೀಧರರಿಗೆ ಸ್ವ ಉದ್ಯೋಗ ಹೊಂದುವಂತೆ ಮಾಡುತ್ತೇನೆ.

ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಜ್ಯೋತಿ ಸಂಜೀವಿನಿ ವೈದ್ಯಕೀಯ ಸೌಲಭ್ಯ ವಿಸ್ತರಿ ಸುವಂತೆ ಸರ್ಕಾರಕ್ಕೆ ಕೋರುತ್ತೇನೆ. ಮತ್ತು ಸರ್ಕಾರದ ಸವಲತ್ತುಗಳನ್ನು ಶಿಕ್ಷಕರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಸಮಸ್ಯೆಯಾಗಿದ್ದು, ಇದಕ್ಕೆ ಸಂಬಂಧಿ ಸಿದ ಸಿ ಅಂಡ್ ಆರ್ ರೂಲ್ಸ್ ಬದಲಾವಣೆಗೂ ಕೂಡ ಶ್ರಮಿಸುತ್ತೇನೆ. ಆಯ್ಕೆಯಾದ ಮೊದಲ ಅಧಿವೇಶನದಲ್ಲೇ ಈ ಬಗ್ಗೆ ಸದನ ದಲ್ಲಿ ಚರ್ಚಿಸುತ್ತೇನೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ 50:50 ಅನುಪಾತದಲ್ಲಿ ಬಡ್ತಿ ಮತ್ತು ನೇರ ನೇಮಕಾತಿಗೆ ಸಂಬಂಧಿ ಸಿದಂತೆ ಸರ್ಕಾರದ ಮೇಲೆ ಒತ್ತಾಯ ಹೇರುತ್ತೇನೆ ಎಂದು ತಮ್ಮ ಪ್ರಣಾಳಿಕೆಯನ್ನು ಬಿಚ್ಚಿಟ್ಟರು.

ಸುದ್ದಿಗೋಷ್ಟಿ ನಂತರತಾಲ್ಲೂಕಿನ ಅನೇಕ ಪದವಿಧರರೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದರು. ಅತಿಥಿ ಉಪನ್ಯಾಸಕ ಗಿಡಗನಹಳ್ಳಿ ಶಿವರಾಜು ಸೇರಿದಂತೆ ಹಲವಾರು ಪದವೀಧರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!