Monday, 20th May 2024

ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್: ಹಿಜಾಬ್ ಧರಿಸಿ ಬರೆದರು ಪರೀಕ್ಷೆ

ಬೆಂಗಳೂರು: ರಾಜ್ಯಾಧ್ಯಂತ ಸೋಮವಾರ ಹಿಜಾಬ್ ಸಂಘರ್ಷದ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.

ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂಬ ಆದೇಶ ಬಳಿಕವೂ ಶಿಕ್ಷಣ ಇಲಾಖೆ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯಗೊಳಿಸಿತ್ತು. ಈ ನಡುವೆಯೂ ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎನ್ನುವಂತೆ ಮೊದಲ ದಿನ ಪರೀಕ್ಷೆ ಯನ್ನು ಹಿಜಾಬ್ ಧರಿಸಿಯೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ.

ರಾಜ್ಯದ ಕೆಲ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಾಗ, ತರಗತಿ ಪ್ರವೇಶದ ನಂತ್ರ ಹಿಜಾಬ್ ತೆಗೆಸಲಾಗಿದೆ. ಆ ಬಳಿಕ ಪರೀಕ್ಷೆಗೆ ಅನುಮತಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಾಲಕಿಯ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರೌಢ ಶಾಲಾ ಪರೀಕ್ಷಾ ಕೇಂದ್ರ ನಿಗದಿ ಪಡಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಕ್ಕೆ ಶಾಲಾ ಸಮವಸ್ತ್ರದ ದುಪ್ಪಟ್ಟವನ್ನೇ ಹಿಜಾಬ್ ಆಗಿ ಹಾಕಿಕೊಂಡು ವಿದ್ಯಾರ್ಥಿ ನಿಯರು ಪರೀಕ್ಷೆ ಬರೆದಿದ್ದು ಕಂಡು ಬಂದಿತು.

ಬೆಂಗಳೂರಿನ ಶಿವಾಜಿನಗರದ ಬಳಿಯ ಸರ್ಕಾರಿ ವಿಕೆಓ ಶಾಲೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಆಗಮಿಸಿದ್ದಳು. ಈ ವೇಳೆ ಪರೀಕ್ಷಾ ಕೇಂದ್ರದ ಹೊರಗೆ ಪ್ರಶ್ನಿಸಿದಾಗ, ನಮಗೆ ಗೊತ್ತೇ ಇಲ್ಲ. ಹಿಜಾಬ್ ಅದಕ್ಕೆ ಹಾಕಿಕೊಂಡು ಬಂದಿದ್ದೇವೆ. ಪೋಷಕರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೇ ತೆಗೆದು ಬರೆಯುವಂತೆ ಹೇಳಿದ್ದಾರೆ ಎಂದಾಗ, ಹಿಜಾಬ್ ತೆಗೆದು ಪರೀಕ್ಷೆ ಬರೆಯೋದಕ್ಕೆ ಅವಕಾಶ ಮಾಡಿಕೊಡಲಾಯಿತು.

error: Content is protected !!