Saturday, 14th December 2024

ವಿ.ಸೋಮಣ್ಣ ಕಪಾಳಮೋಕ್ಷ: ಸ್ಪಷ್ಟನೆ ನೀಡಿದ ಮಹಿಳೆ ಕೆಂಪಮ್ಮ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಮಹಿಳೆ ಕೆಂಪಮ್ಮ ನನಗೆ ಸಚಿವರು ಕಪಾಳಮೋಕ್ಷ ಮಾಡಿಲ್ಲ ಎಂದಿದ್ದಾರೆ.

ಮಹಿಳೆಗೆ ಗೌರವ ನೀವು ಕೊಡುವು ಹೀಗೇನಾ? ಎಂದು ವಿಪಕ್ಷಗಳು ಪ್ರಶ್ನೆ ಮಾಡಿದ್ದವು.

ಘಟನೆ ಬಗ್ಗೆ ಮಾತನಾಡಿದ ವಿ ಸೋಮಣ್ಣ, ಮಹಿಳೆ ಐದಾರು ಬಾರಿ ಕಾಲಿಗೆ ನಮಸ್ಕಾರ ಮಾಡಿದರು. ನಾಲ್ಕೂವರೆ ಸಾವಿರ ರೂಪಾಯಿ ಯಾರಿಗೋ ಕೊಟ್ಟಿದ್ದೀನಿ ಅಂದರು.

ನಾನು ಎಲ್ಲಾ ಹೆಣ್ಣು ಮಕ್ಕಳನ್ನು ಸೋದರಿಯ ಭಾವನೆಯಲ್ಲಿ ನೋಡುತ್ತೇನೆ. ಒಂದು ವೇಳೆ ಈ ಘಟನೆ ನಡೆದಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ಹೊಡೆದಿಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದರು.

ಮಹಿಳೆ ಮಾತನಾಡಿ, ನನ್ನ ಮೇಲೆ ಹಲ್ಲೆ ಆಗಿಲ್ಲ. ನಾನು ಕಾಲಿಗೆ ನಮಸ್ಕಾರ ಮಾಡಲು ಹೋದಾಗ ಸಚಿವರು ತಡೆದರು. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ನನಗೆ ಸಚಿವರು ಹೊಡೆದಿಲ್ಲ, ತಾನು ಭಾವುಕಳಾದಾಗ ಸಚಿವ ಸೋಮಣ್ಣ ನನ್ನನ್ನು ಸಮಾಧಾನಪಡಿಸಿ ದರು. ಪದೇಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಿಳಿಸಿದರು.

ಸಚಿವರು ಕೆಂಪಮ್ಮನನ್ನು ಸಮಾಧಾನಪಡಿಸಿ ನಿನಗೆ ವಸತಿ ಕಲ್ಪಿಸಿ ಕೊಡುತ್ತೇನೆ ಎಂದು ಸೂಚಿಸಿದರು. ಅವರು ತನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.