Sunday, 12th May 2024

ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಭಾನುವಾರ ಆರಂಭವಾಯ್ತು. ಕಾರ್ಯಕ್ರಮಕ್ಕೆ ಮೋದಿಯವರ ಆಗಮನವಾಗಲಿದ್ದು, ಕ್ಷೇತ್ರದ ಜನರ ಉದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿಯವರು ಬರಲು ಹಲವು ಘಂಟೆಗಳು ಇರುವಾಗಲೇ ಸಭಾ ವೇದಿಕೆ, ಸಭಿಕರ ವೇದಿಕೆಯೂ ತುಂಬಿ ತುಳುಕಿತ್ತು.

ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ಬಿಸಿಲಿನಲ್ಲಿ ಹೊರಗಡೆಯೇ ನಿಂತಿದ್ದು ಕಂಡುಬಂತು. ಯುವ ಮತದಾರರಿಗೆ ವಯೋ ವೃದ್ದರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಬರೋವರೆಗೂ ಎರಡು ತಾಸಿಗೂ ಅಧಿಕ ಅವಧಿಯಲ್ಲಿ ಜನ ಕಾದಿದ್ದರು. ಬಿಸಿಲಿನ ತಾಪಕ್ಕೆ ಜನ ಬಳಲಾರದಂತೆ ಸೂಕ್ತ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.

ವೇದಿಕೆಯ ಮೇಲೆ ಮಸಂಸದ ಜೋಶಿ, ಅಭ್ಯರ್ಥಿ ಕಾಗೇರಿ ಸೇರಿದಂತೆ ಜಿಲ್ಲಾಯ ಮಾಜಿ ಶಾಸಕರು, ವಿಪ ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ಹಸಲಿ ಶಾಸಕ ಶಿವರಾಮ ಹೆಬ್ಬಾರ್, ಸಂಸದ ಅನಂತ ಕುಮಾರ್ ಹೆಗಡೆ ಗೈರಾಗಿದ್ದು ಕಂಡು ಬಂತು.

*

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ‌ ಲಿಂಬಾಳ್ಕರ ಇಲ್ಲಿಗೆ ಬಂದು ಸುಳ್ಳು ಹೇಳುತ್ತಿದ್ದಾಳೆ. ಅವರು ಮಾಡಿದ ಕಾರ್ಯದ ಬಗ್ಗೆ ದಾಖಲೆ ಸಹಿತ ನೀಡಲಿ. ಅವರು ಮಾಡಿದ ಯಾವ ಕಾರ್ಯವೂ ಇಲ್ಲ.
– ಅರವಿಂದ ಪಾಟೀಲ್, ಮಾಜಿ ಶಾಸಕ, ಖಾನಾಪುರ

ಗೋವನ್ನು ಪೂಜಿಸುವ ನಾವು ಯಾವತ್ತೂ ಗೋ ಮಾಂಸವನ್ನು ತಿನ್ನುವುದಿಲ್ಲ. ನಾವು ಇರುವಂತ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿಲ್ಲ. ನಾವು ವರಷ್ಟು ಕೆಟ್ಟುಹೋಗಿ ಗೋ ಮಾಂಸ ತಿನ್ನುವ ಜನ ಅಲ್ಲ ನಾವು ನಮ್ಮ ಸಮುದಾಯದವರು. ನಮ್ಮ ಈ ಕ್ಷೇತ್ರಕ್ಕೆ ಸಂಸದ ಅನಂತ ಕುಮಾರ್ ಹೆಗಡೆಯವರ ಸಹಕಾರವೂ ಅಷ್ಟೇ ಇದೆ.

-ಶಾಂತಾರಾಮ ಸಿದ್ದಿ, ವಿಪ ಸದಸ್ಯ

ಬಿಜೆಪಿ ಗೆಲ್ಲದೇ ಇದ್ದಲ್ಲಿ ಮತ್ತೆ ನಮ್ಮ ಸ್ವತಂತ್ರ ಭಾರತದಲ್ಲಿ ಬ್ರಿಟಿಷ್ ಆಡಳಿಬಂದಂತೆ ಆಗಲಿದೆ. ದೇವಮಾನವರಾದ ಮೋದಿ ಅವರನ್ನು ನಾವು ಗೆಲ್ಲಿಸಲೇ ಬೇಕಿದೆ. ಅವರು ಗೆಲ್ಲ ಬೇಕಾದರೆ ನಮ್ಮ ಅಭ್ಯ ರ್ಥಿಗಳನ್ನು ನಾವು ಗೆಲ್ಲಿಸುವ ಕಾರ್ಯವಿದೆ.

-ರೂಪಾಲಿ ನಾಯ್ಕ, ಮಾಜಿ ಶಾಸಕಿ

*

ಮುಸ್ಲೀಂ ಓಲೈಕೆಯ ಕಾಂಗ್ರೆಸ್ ನಮಗೆ ಬೇಕಿಲ್ಲ. ಕಾಂಗ್ರೆಸ್ ಒಡೆದು ಆಳುವ ಕಾರ್ಯ ಮಾಡುತ್ತಿದೆ. ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವ ಕಾಂಗ್ರೆಸ್ ನಮಗೆ ಬೇಕಿಲ್ಲ. ಅಭಿವೃದ್ಧಿಯೇ ನನ್ನ ಗುರಿ. ಅಭಿವೃದ್ಧಿ ಆಗಿಲ್ಲ ನನ್ನ ಅವಧಿ ಆಗಿಲ್ಲ ಎನ್ನುವ ಕಾಂಗ್ರೆಸ್ ಕಣ್ಣು ಪರೀಕ್ಷಿಸಿಕೊಳ್ಳಬೇಕಿದೆ. ಕೊಂಕಣ ರೈಲ್ವೆ, ಧಾರವಾಡ ಕಿತ್ತೂರ ರೈಲ್ವೆ, ತಾಳಗುಪ್ಪ ರೈಲ್ವೆ ಯೋಜನೆ ಎಲ್ಲವನ್ನೂ ನಿಮ್ಮ ಜತೆಗೆ ಇದ್ದು ಕಾರ್ಯ ನಿರ್ವಹಿಸಿಕೊಳ್ಳಲಿದ್ದೇನೆ. ನಾನು ಹಾಗೂ ನಮ್ಮ. ಸರಕಾರ ಅರಣ್ಯ ವಾಸಿಗಳ ಪರವಾಗಿಯೇ ಇದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ.

Leave a Reply

Your email address will not be published. Required fields are marked *

error: Content is protected !!