Sunday, 19th May 2024

ಅರ್ಹ ಮತದಾರರ ಹೆಸರುಗಳ ಸೇರ್ಪಡೆಗೆ ಏ.10 ಕೊನೆ ದಿನ..!

ಧಾರವಾಡ : ಕರ್ನಾಟಕ ವಿಧಾನಸಭೆಗೆ ಭಾರತ ಚುನಾವಣಾ ಆಯೋಗವು ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ.

ಅದರಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏ.20 ಆಗಿದೆ ಎಂದು ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಅರ್ಹ ಮತದಾರರು, ಮತದಾರರ ಯಾದಿಯಲ್ಲಿ ಹೆಸರುಗಳ ಸೇರ್ಪಡೆಯಾಗಿರುವ ಬಗ್ಗೆ https://ceo.karnataka.gov.in, https://www.nvsp.in ವೆಬ್‌ಸೈಟ್‌ಗಳಲ್ಲಿ ಹಾಗೂ Voter Helpline ಆಪ್‌ನಲ್ಲಿ ಮತ್ತು ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲಿ ಸಿಕೊಳ್ಳಬಹುದಾಗಿದೆ.

ಒಂದು ವೇಳೆ ಮತದಾರರ ಯಾದಿಯಲ್ಲಿ ಅರ್ಹ ಮತದಾರರ ಹೆಸರುಗಳು ಸೇರ್ಪಡೆ ಯಾಗದೇ ಇದ್ದಲ್ಲಿ, ಅಂಥಹ ಅರ್ಹ ಮತದಾರರು ದಿನಾಂಕ:10.04.2023 ರೊಳಗೆ https://www.nvsp.in ವೆಬ್‌ಸೈಟ್‌ ನಲ್ಲಿ ಅಥವಾ Voter Helpline ಆಪ್‌ನಲ್ಲಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್ 10 ರ ನಂತರ ನಮೂನೆ-6 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಈ ಚುನಾವಣೆ ಮುಗಿದ ನಂತರ ಮತದಾರರ ಯಾದಿ ಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!