Bengaluru Power Cut: ಫೆ. 25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Bengaluru Power Cut: 66/11 ಕೆ.ವಿ. ಸುಬ್ರಹ್ಮಣ್ಯಪುರ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.25 ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: 66/11 ಕೆ.ವಿ. ಸುಬ್ರಹ್ಮಣ್ಯಪುರ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.25 ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಎಂದು ಬೆಸ್ಕಾಂ ಮಾಹಿತಿ ನೀಡಿದೆ. ನಗರದ ಗುಬ್ಬಲಾಲ, ಉತ್ತರಹಳ್ಳಿ ಭಾಗಶಃ, ಇಸ್ರೋ ಲೇಔಟ್, ಇಂಡಸ್ಟ್ರೀಯಲ್ ಏರಿಯಾ, ಆದರ್ಶ ಅಪಾರ್ಟ್‌ಮೆಂಟ್, 1ನೇ & 2ನೇ ಮಂತ್ರಿ ಟ್ರಾನ್‌ಕ್ವಿಲ್ ಅಪಾರ್ಟ್‌ಮೆಂಟ್, ಮಾರುತಿ ಲೇಔಟ್, ಭಾರತ್ ಲೇಔಟ್, ದೊಡ್ಡಕಲ್ಲಸಂದ್ರ, ಇಂಡಸ್ಟ್ರಿಯಲ್ ಏರಿಯಾ, ಆಗರ, ಕುಮಾರಸ್ವಾಮಿ ಲೇಔಟ್, ವಿಠ್ಠಲ ನಗರ, ಯದಲಂ ನಗರ, ಮಾರುತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ತುಮಕೂರು: ಫೆ. 24, ಫೆ. 27, ಫೆ. 28ರಂದು ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ
ತುಮಕೂರು: ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿ ಬೆಸ್ಕಾಂ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ಫೆ. 24, ಫೆ. 27 ಹಾಗೂ ಫೆ. 28ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ವಿದ್ಯುತ್ ಪೂರೈಕೆಯಲ್ಲಿ ಇನ್ನಷ್ಟು ಸುಧಾರಣೆ ತರುವ ಉದ್ದೇಶದಿಂದ ಅಟಲ್ ಭೂ ಜಲ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ನಗರ ಫೀಡರ್ ಮೂಲಕವೇ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ತುಮಕೂರು ಹೊರ ವಲಯದಲ್ಲಿ ಬರುವ ಕೆಲವು ಹಳ್ಳಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಕೆಳಗಿನ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ವಿದ್ಯುತ್ ವ್ಯತ್ಯಯ ಆಗಲಿದೆ.
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್ ಕುಂಟಮ್ಮನತೋಟ, ದಿಬ್ಬೂರು, ಬಿ.ಎಚ್. ಪಾಳ್ಯ, ಹಾರೋನಹಳ್ಳಿ ಹಾಗೂ ಹೊನ್ನೆನಹಳ್ಳಿಯಲ್ಲಿ ಫೆ. 24 ಹಾಗೂ ಫೆ. 27ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಲೇ ಲಗ್ಗೆ ಇಟ್ಟ ಪೈನಾಪೋರ್ ಔಟ್‌ಫಿಟ್ಸ್!
ಫೆ. 28ರಂದು ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆಣೆತೋಟ, ಜಗನ್ನಾಥ ನಗರ, ಶಾರದಾದೇವಿ ನಗರ, ಗಣೇಶನಗರ ಹಾಗೂ ನಿರ್ವಾಣಿ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ನಿರ್ಹವಣೆ ಕಾಮಗಾರಿ ಕೆಲವೇ ಪ್ರದೇಶಗಳಿಗೆ ಸೀಮಿತಗೊಂಡಿರುವುದರಿಂದ ತುಮಕೂರು ನಗರ ಹಾಗೂ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.