ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Physical Abuse: ಬೆಂಗಳೂರಲ್ಲಿ ಮತ್ತೊಂದು ಹೀನ ಕೃತ್ಯ; ದೂರು ನೀಡಲು ಹೋದ ಬಾಲಕಿ ಮೇಲೆ ಕಾನ್‌ಸ್ಟೇಬಲ್‌ ಲೈಂಗಿಕ ದೌರ್ಜನ್ಯ!

Physical Abuse: ಬೆಂಗಳೂರು ಹೊರವಲಯದ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬೊಮ್ಮನಹಳ್ಳಿಯ ಠಾಣೆಯ ಪೊಲೀಸ್ ಪೇದೆ ಸೇರಿ ಇಬ್ಬರ ಬಂಧನವಾಗಿದೆ.

ದೂರು ನೀಡಲು ಹೋದ ಬಾಲಕಿ ಮೇಲೆ ಕಾನ್‌ಸ್ಟೇಬಲ್‌ ಲೈಂಗಿಕ ದೌರ್ಜನ್ಯ!

Profile Prabhakara R Feb 24, 2025 7:09 PM

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಸಾರ್ವಜನಿಕರ ರಕ್ಷಣೆ ಆರಕ್ಷಕರ ಕರ್ತವ್ಯವಾಗಿದೆ. ಆದರೆ, ದೂರು ನೀಡಲು ಹೋದ ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕಿ ಮೇಲೆಯೇ ಕಾನ್‌ಸ್ಟೇಬಲ್‌ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬೊಮ್ಮನಹಳ್ಳಿಯ ಠಾಣೆಯ ಪೊಲೀಸ್ ಪೇದೆ ಸೇರಿ ಇಬ್ಬರ ಬಂಧನವಾಗಿದೆ. ಸಹಾಯ ಮಾಡುವ ನೆಪದಲ್ಲಿ ಬಾಲಕಿಯ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಪೇದೆ ಸೇರಿ ಇಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಬೆಂಗಳೂರು ಹೊರವಲಯದ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೇದೆ ಅರುಣ್ ಎಂಬಾತ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೆರಮನೆಯ ವಿಕ್ಕಿ ಎಂಬಾತ ಮದುವೆಯಾಗುವುದಾಗಿ ನಂಬಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ದೂರು ನೀಡಲು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತಾಯಿ, ಸಂತ್ರಸ್ತ ಬಾಲಕಿ ತೆರಳಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಪಿಸಿ ಅರುಣ್, ಅವರಿಗೆ ಸಹಾಯ ಮಾಡುವುದಾಗಿ ಹೇಳಿದ್ದ. ನ್ಯಾಯ ಕೊಡಿಸುತ್ತೇನೆ, ಅಲ್ಲದೇ ಬಾಲಕಿಗೆ ಕೆಲಸ ಕೊಡುವುದಾಗಿಯೂ ನಂಬಿಸಿದ್ದ ಪೇದೆ, ಬಾಲಕಿಯನ್ನು ಡಿಸೆಂಬರ್‌ನಲ್ಲಿ ಓಯೋ ರೂಮಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಪಾನೀಯದಲ್ಲಿ ಮತ್ತು ಬರಿಸುವಂತ ಔಷಧ ನೀಡಿ, ಬಾಲಕಿ ಮೇಲೆ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ತಮ್ಮಿಬ್ಬರ ಖಾಸಗಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಬಾಲಕಿ ಈ ವಿಷಯ ಯಾರಿಗೂ ತಿಳಿಸಿಲ್ಲ.

ಈ ಸುದ್ದಿಯನ್ನೂ ಓದಿ | Road Accident: ಅಥಣಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗಳ ದುರ್ಮರಣ

ಇಂದು ಸಂತ್ರಸ್ತ ಬಾಲಕಿ ಹಾಗೂ ತಾಯಿ ಮೈಕೋ ಲೇಔಟ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಬಾಲಕಿ ನೆರೆಮನೆಯ ವಿಕ್ಕಿ ಹಾಗೂ ಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಪೇದೆ ಅರುಣ್ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾಡಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿ ಅಂಗೈ ಛಿದ್ರ, ಮತ್ತೊಬ್ಬನಿಗೆ ಗಂಭೀರ ಗಾಯ

ಮಂಡ್ಯ: ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯ ನಡೆಸುವಾಗ ನಾಡಬಾಂಬ್​ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ (Mandya News) ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯ ಬೆಟ್ಟದಲ್ಲಿ ನಡೆದಿದೆ. ಹರಿಯಂತ್ ಪಾಟೀಲ್, ಪಾರ್ಥ ಗಾಯಾಳುಗಳು. ಇವರು ಜೈನಬಸದಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಬೆಟ್ಟದ ಮೇಲಿನ ದೇವಸ್ಥಾನ ಸ್ವಚ್ಛಗೊಳಿಸಲು ಭಾನುವಾರ ತೆರಳಿದ್ದರು. ಸ್ವಚ್ಛತೆ ಮಾಡುವಾಗ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಹಾಕುತ್ತಿದ್ದಂತೆ ನಾಡ ಬಾಂಬ್​ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಒಬ್ಬನ ಅಂಗೈ ಛಿದ್ರಗೊಂಡಿದೆ. ಮತ್ತೊಬ್ಬನ ಮುಖದ ಭಾಗಕ್ಕೆ ಗಾಯವಾಗಿದೆ. ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Car Accident: ಮಂಗಳೂರಿನಲ್ಲಿ ಭೀಕರ ಕಾರು ಅಪಘಾತ; ಸಿಂಧನೂರು ಶಾಸಕರ ಸೋದರಳಿಯ ಸಾವು