ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral News: ಮಹಿಳಾ IAS ಅಧಿಕಾರಿಯ ಫೇಸ್‌ಬುಕ್‌ ಪೋಸ್ಟ್‌ಗೆ ಕಾಮೆಂಟ್ ಮಾಡಿದವರ ಮೇಲೆ ಬಿತ್ತು ಕೇಸ್‌

ಕೆಲವೊಂದು ಪ್ರಕರಣಗಳು ನಮಗೆ ಆಶ್ಚರ್ಯವೆನಿಸುವಂತಿರುತ್ತದೆ. ಅಂತಹುದ್ದೇ ಒಂದು ಪ್ರಕರಣದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಫೇಸ್‌ಬುಕ್‌ ಪೋಸ್ಟ್‌ಗೆ ಕಾಮೆಂಟ್ ಮಾಡಿದವನ ಮೇಲೆ ಮತ್ತು ಆ ಕಾಮೆಂಟ್‌ಗೆ ಲಾಫಿಂಗ್ ಇಮೋಜಿ ಹಾಕಿದವನ ಮೇಲೆ ದೂರು ದಾಖಲಿಸಿದ್ದಾರೆ.

ಹಾಕಿದ್ದು ಲಾಫಿಂಗ್ ಇಮೋಜಿ; ಬಿದ್ದದ್ದು ಪೊಲೀಸ್ ಕೇಸ್!

Profile Sushmitha Jain Feb 24, 2025 4:01 PM

ದಿಸ್‌ಪುರ: ಇದೊಂದು ವಿಚಿತ್ರ ಪ್ರಕರಣ. ಐಎಎಸ್ (IAS) ಅಧಿಕಾರಿಯೊಬ್ಬರ ಫೇಸ್‌ಬುಕ್‌ ಪೋಸ್ಟ್‌ಗೆ (FB Post) ಹಾಕಿದ್ದ ಕಾಮೆಂಟ್‌ಗೆ ಸ್ಮೈಲಿ ಇಮೋಜಿ (Smily Emoji) ಹಾಕಿದ ಏಕೈಕ ಕಾರಣಕ್ಕೆ ಅಸ್ಸಾಂನ (Assam) ವ್ಯಕ್ತಿಯೊಬ್ಬರ ಮೇಲೆ ಕೇಸು ದಾಖಲಾಗಿರುವ ಘಟನೆ ವರದಿಯಾಗಿದೆ. ಅಸ್ಸಾಂನ ಧೇಕಾಯ್ಜುಲಿ (Dhekiajuli) ಪ್ರದೇಶದ ವ್ಯಕ್ತಿ ನಲ್ಬರಿಯ (Nalbari) ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮೇಲೆ ದಾಖಲಿಸಿದ್ದ ಪ್ರಕರಣಕ್ಕೆ ಜಾಮೀನು ಪಡೆದುಕೊಳ್ಳಲು ಬರೋಬ್ಬರಿ 200 ಕಿ.ಮೀ. ಪ್ರಯಾಣಿಸಿದ್ದು, ಈ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತನ್ನ ಫೇಸ್‌ಬುಕ್‌ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದ ವ್ಯಕ್ತಿಗಳ ಮೇಲೆ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಅವರು ದೂರು ದಾಖಲಿಸಿದ್ದಾರೆ. ಅಮಿತ್ ಚಕ್ರವರ್ತಿ, ನರೇಶ್ ಭರುವಾ ಹಾಗೂ ಅಬ್ದುಲ್ ಸುಬೂರ್ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಈ ಮೂವರು ಲೈಂಗಿಕ ಅವಹೇಳನಕಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆಂಬುದು ಈ ಅಧಿಕಾರಿಯ ಆರೋಪ.

ಇದೀಗ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಅಮಿತ್ ಚಕ್ರವರ್ತಿ ಸುಮಾರ 200 ಕಿ.ಮೀ. ದೂರವನ್ನು ಪ್ರಯಾಣಿಸಿ ಕೊಕ್ರಜರ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಇವರಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.

ಏನಿದು ಪ್ರಕರಣ?

2023ರಲ್ಲಿ ನರೇಶ್ ಭರುವಾ ಎಂಬಾತ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಅವರ ಫೇಸ್‌ಬುಕ್‌ ಪೋಸ್ಟ್ ಒಂದಕ್ಕೆ ಕಾಮೆಂಟ್ ಹಾಕಿದ್ದ. ಅದರಲ್ಲಿ ʼʼಇವತ್ತು ಮೇಕಪ್ ಹಾಕ್ಕೊಳ್ಳಿಲ್ವಾ ಮೇಡಂ?’ʼ ಎಂದು ಕೇಳಿದ್ದರು. ನರೇಶ್‌ನ ಈ ಕಾಮೆಂಟ್‌ಗೆ ಅಮಿತ್ ಲಾಫಿಂಗ್ ಇಮೋಜಿ ಮೂಲಕ ರಿಪ್ಲೈ ಮಾಡಿದ್ದ. ಇದಕ್ಕೆ ದೆಕಾ ಅವರು, ‘ʼನಿಮ್ಮ ಸಮಸ್ಯೆ ಏನು?ʼʼ ಎಂದು ರಿಪ್ಲೈ ಮಾಡಿದ್ದರು.

ಇದನ್ನೂ ಓದಿ: Israeli hostages: ಹಮಾಸ್‌ ಬಂಡುಕೋರರ ಹಣೆಗೆ ಮುತ್ತಿಟ್ಟು ಗುಡ್‌ಬೈ ಹೇಳಿದ ಇಸ್ರೇಲ್‌ ಒತ್ತೆಯಾಳು- ಈ ವಿಡಿಯೊ ಫುಲ್‌ ವೈರಲ್‌

ಇದಾದ ಬಳಿಕ ಆ ಐಎಎಸ್ ಅಧಿಕಾರಿ ಮೂವರ ಹೆಸರನ್ನು ಉಲ್ಲೇಖಿಸಿ ಕೊಕ್ರಜರ್ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ಈ ಪ್ರಕರಣದ ಭಾಗವಾಗಿ, ದೇಕಾ ಮತ್ತು ಆರೋಪಿಗಳ ನಡುವಿನ ಕಮೆಂಟ್ ಎಕ್ಸ್‌ಚೇಂಜ್‌ ಆಗಿರುವ ಸ್ಕ್ರೀನ್ ಶಾಟ್ ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪೋಸ್ಟ್‌ನಲ್ಲಿ ಆಕೆ ಚೌಧರಿಗೆ ಎಚ್ಚರಿಕೆ ನೀಡುತ್ತಾ, ‘ʼಐಪಿಸಿ ಸೆಕ್ಷನ್ 354 ಡಿ ಅಡಿಯಲ್ಲಿ ಸೈಬರ್ ಠಾಣೆಗೆ ದೂರು ನೀಡುತ್ತಿದ್ದೇನೆ. ಆ ಸೆಕ್ಷನ್ ನಡಿಯಲ್ಲಿ ನೀನು ತಪ್ಪಿತಸ್ಥನಾಗಿದ್ದೀಯಾ ಮತ್ತು ನಾನು ಸೈಬರ್ ಸೆಲ್‌ನಲ್ಲಿ ದೂರು ನೀಡುತ್ತಿದ್ದೇನೆ. ನನ್ನ ತಂಟೆಗೆ ಬರುವ ಬದಲು ನೀನು ನಿನ್ನ ಕೆಲಸ ಎಷ್ಟಿದೆಯೋ ಅಷ್ಟನ್ನು ನೋಡಿಕೊಳ್ಳಬೇಕಿತ್ತು’ʼ ಎಂದು ಆಕೆ ಎಚ್ಚರಿಕೆ ನೀಡಿದ್ದರು.

ಇನ್ನೊಂದು ಪೋಸ್ಟ್‌ನಲ್ಲಿ ಆಕೆ ಚಕ್ರವರ್ತಿಯನ್ನು ಟ್ಯಾಗ್ ಮಾಡಿ, ʼʼಇದೊಂದು ಅವಹೇಳನಕಾರಿ ಮತ್ತು ಲೈಂಗಿಕವಾಗಿ ಕೀಳು ಮಟ್ಟದ ಕಾಮೆಂಟ್. ಸೆಕ್ಷನ್ 354ಎ ಅಡಿಯಲ್ಲಿ ನಾನು ನಿನ್ನ ಮೇಲೆ ದೂರು ದಾಖಲಿಸುತ್ತಿದ್ದೆನೆ. ನೀನು ತಪ್ಪಿತಸ್ಥನಾಗಿದ್ದೀಯʼʼ’ ಎಂದು ಆಕೆ ಎಚ್ಚರಿಕೆ ನೀಡಿದ್ದರು.

ಕಳೆದ ಜನವರಿಯಲ್ಲಿ ಚಕ್ರವರ್ತಿಗೆ ಪೊಲೀಸ್ ಸಮನ್ಸ್ ಬಂದಿತ್ತು. ತನಗೆ ಬಂದ ಸಮನ್ಸ್ ಬಗ್ಗೆ ಆತ ವಿವರಗಳನ್ನು ಕೇಳಿದಾಗ, ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ ಎಂದಷ್ಟೇ ಹೇಳಲಾಗಿತ್ತು.