ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ʻಪಾಕಿಸ್ತಾನ ಸೋಲಬೇಕೆಂದು ಮಾಟಮಂತ್ರ ಮಾಡಿಸಲಾಗಿದೆʼ: ಬಿಸಿಸಿಐ ವಿರುದ್ದ ಗಂಭೀರ ಆರೋಪ!

India vs Pakistan: ಪಾಕಿಸ್ತಾನ ವಿರುದ್ಧ ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದ ಫಲಿತಾಂಶದ ಬೆನ್ನಲ್ಲೆ ಪಾಕಿಸ್ತಾನದ ಮಾಧ್ಯಮವೊಂದರಿಂದ ಭಾರತದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲ್ಲಬೇಕೆಂದು ಮಾಟಮಂತ್ರ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕುಣಿಯಲಾರದವಳು ನೆಲ ಡೊಂಕೆಂದಳಂತೆ, ಹಾಗಾಯ್ತು ಪಾಕಿಸ್ತಾನದ ಕಥೆ!

Virat Kohli-Mohammad Rizwan

Profile Ramesh Kote Feb 24, 2025 8:16 PM

ನವದೆಹಲಿ: ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಸೆಮಿಫೈನಲ್‌ಗೆ ಟೀಮ್‌ ಇಂಡಿಯಾ ಬಹುತೇಕ ಅರ್ಹತೆ ಪಡೆದಿದೆ. ಆದರೆ, ಸೋತ ಆತಿಥೇಯ ಪಾಕಿಸ್ತಾನ ಟೂರ್ನಿಯ ನಾಕ್‌ಔಟ್‌ ರೇಸ್‌ನಿಂದ ಬಹುತೇಕ ಹೊರ ಬಿದ್ದಿದೆ. ಆದರೆ, ಪಂದ್ಯದ ಬಳಿಕ ಭಾರತದ ವಿರುದ್ಧ ಪಾಕಿಸ್ತಾನದ ಮಾಧ್ಯಮವೊಂದು ಗಂಭೀರ ಆರೋಪ ಮಾಡಿದೆ. ಮಾಟಮಂತ್ರ ಮಾಡಿಸಿದ್ದರಿಂದ ಭಾರತದ ವಿರುದ್ಧ ಪಾಕಿಸ್ತಾನ ಸೋತಿದೆ ಎಂದು ಆರೋಪ ಮಾಡಿದೆ.

ಪಾಕಿಸ್ತಾನದ ಟಿವಿವೊಂದರ ಚರ್ಚೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಫಲಿತಾಂಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಪಂದ್ಯಕ್ಕೂ ಮುನ್ನ ಭಾರತದಿಂದ 22 ಮಂದಿ ಪಂಡಿತರು ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಬೇಕೆಂದು ಮಾಟಮಂತ್ರ ಮಾಡಿದ್ದರು ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಒಬ್ಬರು ಗಂಭೀರ ಆರೋಪ ಮಾಡಿದ್ದರು.

IND vs PAK: ʻಬಾಬರ್‌ ಆಝಮ್‌ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ!

ಪಾಕಿಸ್ತಾನಕ್ಕೆ ಪಂಡಿತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕಾರಣದಿಂದಲೇ ಭಾರತ ತಂಡ ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದೆ ಎಂದು ಮತ್ತೊಬ್ಬರು ಆರೋಪ ಮಾಡಿದ್ದರು. ಪಂದ್ಯದ ಆರಂಭಕ್ಕೂ ಮುನ್ನ ಏಳು ಮಂದಿಯನ್ನು ಕ್ರೀಡಾಂಗಣಕ್ಕೆ ಕಳುಹಿಸಿ ಮಾಟಮಂತ್ರ ಮಾಡಿಸಲಾಗಿದೆ ಎಂದು ಈ ಚರ್ಚೆಯಲ್ಲಿ ದೂರಲಾಯಿತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್‌ ಆಗಿದೆ. ಇದಕ್ಕೆ ಕ್ರಿಕೆಟ್‌ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

2023ರಲ್ಲಿಯೂ ಆರೋಪ ಕೇಳಿ ಬಂದಿತ್ತು

ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಹಾಗೂ ಏಷ್ಯಾ ಆಯೋಜನೆಯ ಟೂರ್ನಿಗಳಲ್ಲಿ ಸಾಕಷ್ಟು ಬಾರಿ ಮುಖಾಮುಖಿಯಾಗಿವೆ. ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸಮಯದಲ್ಲಿಯೂ ಭಾರತದ ವಿರುದ್ಧ ಮಾಟ ಮಂತ್ರದ ಆರೋಪ ಮಾಡಲಾಗಿತ್ತು. ಪಾಕ್‌ ವಿರುದ್ದ ಪಂದ್ಯವನ್ನು ಗೆಲ್ಲಲು ಬಿಸಿಸಿಐ ಮಾಟ ಮಂತ್ರದ ಸಹಾಯವನ್ನು ಪಡೆದಿದೆ ಎಂದು ಪಾಕಿಸ್ತಾನ ಪತ್ರಕರ್ತರೊಬ್ಬರು ಆರೋಪ ಮಾಡಿದ್ದರು.



ಅಹಮದಾಬಾದ್‌ನಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 'ಮಾಟಮಂತ್ರ' ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು ಮತ್ತು ಬಾಬರ್ ಅಜಮ್ ನೇತೃತ್ವದ ತಂಡದ ಸೋಲಿಗೆ ಕಾರಣರಾಗಿದ್ದರು ಎಂದು ಪಾಕಿಸ್ತಾನಿ ಬರಹಗಾರ ಹರೀಮ್ ಶಾ ಆರೋಪ ಮಾಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದಿತ್ತು.

"ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ಮಾಟಮಂತ್ರ ತಜ್ಞರ ಸೇವೆಯನ್ನು ಪಡೆದುಕೊಂಡಿದ್ದಾರೆ ಮತ್ತು ಪಾಕಿಸ್ತಾನ ತಂಡದ ಮೇಲೆ ಮಾಟಮಂತ್ರ ಮಾಡಿಸಲು ಕಾರ್ತಿಕ್ ಚಕ್ರವರ್ತಿ ಅವರನ್ನು ನೇಮಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು, ಏಕೆಂದರೆ ಇದು ಸ್ವೀಕಾರಾರ್ಹವಲ್ಲ," ಎಂದು ಹರೀಮ್ ಶಾ ಟ್ವೀಟ್‌ ಮಾಡಿದ್ದರು.

IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ಪಾಕ್‌ ಅಭಿಮಾನಿಗಳು

ಈ ಪಂದ್ಯದಲ್ಲಿ ಸೊಗಸಾದ ಶತಕ ಸಿಡಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಇಸ್ಲಾಮಾಬಾದ್‌ನ ಕೆಲ ಅಭಿಮಾನಿಗಳು ಶ್ಲಾಘಿಸಿದ್ದಾರೆ. ವಿರಾಟ್‌ ಕೊಹ್ಲಿ ಈ ವಯಸ್ಸಿನಲ್ಲಿಯೂ‌ ಅತ್ಯುತ್ತಮ ಫಿಟ್‌ನೆಸ್ ಹೊಂದಿದ್ದಾರೆ ಹಾಗೂ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಿಸುತ್ತಿದ್ದಾರೆ. ಆದರೆ, ಪಾಕಿಸ್ತಾನ ತಂಡದ ಆಟಗಾರರು, ಕೊಹ್ಲಿಯನ್ನು ನೋಡಿ ಕಲಿಯಬೇಕೆಂದು ಆಗ್ರಹಿಸಿದ್ದಾರೆ. ಭಾನುವಾರ ವಿರಾಟ್‌ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ್ದರು.