London Fashion Week 2025: ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳಿಗೆ ಸಾಕ್ಷಿಯಾದ ಲಂಡನ್ ಫ್ಯಾಷನ್ ವೀಕ್ 2025
London Fashion Week 2025: ಸದಾ ಹೊಸತನ ಹಾಗೂ ಅಚ್ಚರಿ ಮೂಡಿಸುವ ಡಿಸೈನರ್‌ವೇರ್‌ಗಳಿಗೆ ಹೆಸರುವಾಸಿಯಾದ ಲಂಡನ್ ಫ್ಯಾಷನ್ ವೀಕ್‌ನಲ್ಲಿ ಎಂದಿನಂತೆ ಈ ಬಾರಿಯೂ ಮುಂಬರುವ ಸೀಸನ್‌ವೇರ್ಸ್, ನಾನ್‌ವೇರಬಲ್ ಉಡುಪುಗಳು ಹಾಗೂ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವು. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರ ಕೃಪೆ: ಲಂಡನ್ ಫ್ಯಾಷನ್ ವೀಕ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಂಡನ್ ಫ್ಯಾಷನ್ ವೀಕ್ ಎಂದಾಕ್ಷಣಾ ಫ್ಯಾಷನ್ ಪ್ರಿಯರು ಕಣ್ಣರಳಿಸಿ ಕಾಯುವುದುಂಟು. ಎಂದಿನಂತೆ ಅಚ್ಚರಿ ಮೂಡಿಸುವ ಡಿಸೈನರ್‌ವೇರ್‌ಗಳಿಗೆ ಹೆಸರುವಾಸಿಯಾದ ಲಂಡನ್ ಫ್ಯಾಷನ್ ವೀಕ್‌ನಲ್ಲಿ (London Fashion Week 2025) ಎಂದಿನಂತೆ ಮುಂಬರುವ ಸೀಸನ್‌ವೇರ್ಸ್, ನಾನ್‌ವೇರಬಲ್ ಉಡುಪುಗಳು ಹಾಗೂ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವು. ಆರತಿ ವಿಜಯ್ ಗುಪ್ತಾ ಅವರ ಕೈಚಳಕದಲ್ಲಿ ಸಿದ್ಧಗೊಂಡಿದ್ದ ಆರ್ಟ್ ಹಾಗೂ ಫ್ಯಾಷನ್‌ನ ಸಂಗಮ ಎನ್ನಬಹುದಾದ ಕಾಲಿಘಾಟ್ ಕಥಾನಕವನ್ನು ಬಿಂಬಿಸುವ ಡಿಸೈನರ್‌ವೇರ್‌ಗಳು ಈ ಬಾರಿ ಪ್ರದರ್ಶನಗೊಂಡವು. ಅಂದಹಾಗೆ, ಇದು ಅವರ ಎರಡನೇ ಬಾರಿಯ ಶೋ ಆಗಿತ್ತು.ಕೊಲ್ಕತ್ತಾ ಮೂಲದ ಜಾನಪದ ಲೋಕವನ್ನು ಬಿಂಬಿಸುವ ಡಿಸೈನ್‌ಗಳನ್ನು ಧರಿಸಿದ ಮಾಡೆಲ್‌ಗಳು ಭಾರತೀಯ ಡಿಸೈನರ್‌ವೇರ್‌ಗಳನ್ನು ಹೈಲೈಟ್ ಮಾಡಿದರು.

ನಾನ್‌ವೇರಬಲ್ ಡಿಸೈನ್‌ಗಳ ಅಬ್ಬರ
ಇನ್ನು, ಎಂದಿನಂತೆ ವಿಶ್ವಾದಾದ್ಯಂತ ಖ್ಯಾತಿಗಳಿಸಿರುವ ಡಿಸೈನರ್‌ಗಳು ತಮ್ಮ ಕ್ರಿಯೇಟಿವಿಟಿಯನ್ನು ಈ ವೇದಿಕೆ ಮೂಲಕ ತೆರೆದಿಟ್ಟರು. ಅವುಗಳಲ್ಲಿ ಒಂದಿಷ್ಟು ಡಿಸೈನರ್‌ಗಳು ಕ್ರಿಯೇಟಿವಿಟಿಗೆ ಒತ್ತು ಕೊಟ್ಟರೆ, ಮತ್ತೊಂದಿಷ್ಟು ಡಿಸೈನರ್‌ಗಳು ನಾನ್‌ವೇರಬಲ್ ಕೆಟಗರಿಗೆ ಪ್ರಾಮುಖ್ಯತೆ ನೀಡಿದ್ದರು.

ಕಣ್ಣರಳಿಸಿದ ವಿಭಿನ್ನ ಔಟ್‌ಫಿಟ್ಸ್
ಅವುಗಳಲ್ಲಿ ಒಂದಿಷ್ಟು ಮಂದಿ ಹುಬ್ಬೇರಿಸುವಂತಹ ದೇಹ ಪ್ರದರ್ಶಿಸುವ ಬಾಡಿಕಾನ್ ಹಾಟ್ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದ್ದರು. ಬಹುತೇಕ ಡಿಸೈನರ್‌ವೇರ್‌ಗಳು ಮಾಡೆಲ್‌ಗಳ ಬದಲಾಗಿ ಸ್ಥಳೀಯ ನಟ-ನಟಿಯರನ್ನೇ ಆಯ್ಕೆ ಮಾಡಿ ರ‍್ಯಾಂಪ್ ವಾಕ್ ಮಾಡಿಸಿದರು. ಇವುಗಳಲ್ಲಿ ಕೆಲವು ಡಿಸೈನರ್‌ವೇರ್‌ಗಳು ಬ್ರಿಟಿಷ್ ಕ್ಲಾಸಿ ಸಿಸ್ಟಂಗೆ ಚಾಲೆಂಜ್ ಹಾಕುವಂತಿದ್ದವು ಎನ್ನುತ್ತಾರೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದ ಫ್ಯಾಷನಿಸ್ಟಾ ಜೆನ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Star Saree Fashion 2025: ಸಿಂಪಲ್ ರೆಡ್ ಸೀರೆಯಲ್ಲಿ ಮಿನುಗಿದ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ