ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Kohli: ಪಾಕ್ ಸೊಲ್ಲಡಗಿಸಿದ ವಿರಾಟ್ ಕೊಹ್ಲಿಯ ಫೆವರೇಟ್‌ ಫುಡ್ ಸ್ಪಾಟ್ಸ್ ಯಾವುದು?

ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ನಿಂತರೆ ಎದುರಾಳಿ ಬೌಲರ್‌ಗಳಿಗೆ ನಡುಕ ಶುರುವಾಗುತ್ತದೆ. ಇದು ಮತ್ತೊಮ್ಮೆ ಭಾನುವಾರದ ಪಾಕ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸಾಬೀತಾಗಿದೆ. ಇಂತಿಪ್ಪ ಕಿಂಗ್ ಕೊಹ್ಲಿಯ ಫೆವರಿಟ್ ಫುಡ್ ಸ್ಪಾಟ್ ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕಿಂಗ್ ಕೊಹ್ಲಿಗೆ ವಿಶ್ವಾದ್ಯಂತ ಇದೆ ಫೆವರಿಟ್ ಫುಡ್ ಸ್ಪಾಟ್ಸ್‌

ಸಾಂದರ್ಭಿಕ ಚಿತ್ರ

Profile Sushmitha Jain Feb 24, 2025 8:29 PM

ನವದೆಹಲಿ: ಕ್ರಿಕೆಟ್ ಪ್ರೇಮಿಗಳೆಲ್ಲರೂ (Cricket Fans) ಭಾನುವಾರ ನಡೆದ ಭಾರತ-ಪಾಕ್ ಕ್ರಿಕೆಟ್ ಸಮರದಲ್ಲಿ ಬ್ಲೂಬಾಯ್ಸ್ (Blue Boys) ಗೆಲುವಿನ ಕೇಕೆ ಹಾಕಿದ ಗುಂಗಿನಲ್ಲಿದ್ದಾರೆ. ಅದರಲ್ಲೂ ಫಾರ್ಮ್ ಲೆಸ್ ಕಿಂಗ್ ಕೊಹ್ಲಿ (Virat Kohli) ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧವೇ ಭರ್ಜರಿ ಅಜೇಯ ಶತಕ ಸಿಡಿಸಿ ತಮ್ಮ ತಂಡಕ್ಕೆ ಗಮನಾರ್ಹ ಗೆಲುವನ್ನು ತಂದುಕೊಟ್ಟಿದ್ದು ಮಾತ್ರವಲ್ಲದೇ ಭರ್ಜರಿ ಫಾರ್ಮ್ ಗೆ ಮರಳಿರುವುದರಿಂದ ಟಿಂ ಇಂಡಿಯಾ (Team india) ಅಭಿಮಾನಿಳಿಗೆ ಖುಷಿ ತಂದೆ. ಈ ಅವಿಸ್ಮರಣೀಯ ಗೆಲುವಿನ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೆಲವೊಂದು ದಾಖಲೆಗಳನ್ನೂ ಸಹ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 14 ಸಾವಿರ ರನ್ ಗಳನ್ನು ಗಳಿಸಿದ್ದು ಸೇರಿದಂತೆ ಒಂದಷ್ಟು ದಾಖಲೆಗಳು ಕೊಹ್ಲಿ ಹೆಸರಿಗೆ ರಿಜಿಸ್ಟರ್ಡ್ ಆಗಿದೆ.

ತನ್ನ ಅದ್ಭುತ ಬ್ಯಾಟಿಂಗ್ ಟ್ಯಾಲೆಂಟ್ ಮೂಲಕ ಕೊಹ್ಲಿ ಅವರು ಪಾಕ್ ವಿರುದ್ಧದ ಪಂದ್ಯದಲ್ಲಿ ದುಬೈ ಮೈದಾನದಲ್ಲಿ ರನ್ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಬ್ಯಾಟ್ ಹಿಡಿದು ಕ್ರೀಸ್‌ನಲ್ಲಿ ನಿಂತರೆ ರನ್ ಮೆಷಿನ್ ಆಗಿ ಬದಲಾಗುವ ಕೊಹ್ಲಿ, ಉಳಿದ ಸಮಯಗಳಲ್ಲಿ ಜಾಲಿ ಮೂಡ್‌ನಲ್ಲಿರುತ್ತಾರೆ. ಕೊಹ್ಲಿಗೆ ಫುಡ್ ಅಂದ್ರೆ ಪಂಚಪ್ರಾಣ. ಈ ಭರ್ಜರಿ ಗೆಲುವನ್ನು ಅವರು ಖಂಡಿತವಾಗ್ಲೂ ತಮ್ಮ ನೆಚ್ಚಿನ ಫುಡ್ ಸವಿದು ಎಂಜಾಯ್ ಮಾಡಿರುತ್ತಾರೆ ಎನ್ನುವುದು ಫ್ಯಾನ್ಸ್‌ ಅಂಬೋಣ. ಈ ಸಂದರ್ಭದಲ್ಲಿ ಕೊಹ್ಲಿ ಅವರ ಫೆವರಿಟ್ ರೆಸ್ಟೋರೆಂಟ್ ಗಳ (Restaurants) ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.

ಚೋಲೆ ಭಟೂರೆ (Chole Bhature) ಕೊಹ್ಲಿಯ ನೆಚ್ಚಿನ ಫುಡ್‌ಗಳಲ್ಲಿ ಒಂದು. ಕೊಹ್ಲಿ ಅವರು ರೆಸ್ಟೋರೆಂಟ್ ವ್ಯವಹಾರದಲ್ಲೂ ಕೈಯಾಡಿಸಿದ್ದು, ಒನ್ 8 ಎಂಬ ರೆಸ್ಟೊರೆಂಟಿನ ಮಾಲಕರಾಗಿದ್ದಾರೆ.

ಇಲ್ಲಿದೆ ವಿರಾಟ್ ಕೊಹ್ಲಿ ಅವರ ನೆಚ್ಚಿನ ರೆಸ್ಟೋರೆಂಟ್‌ಗಳ ಪಟ್ಟಿ

ಜಮಾವರ್, ಲಂಡನ್: ಲಂಡನ್‌ನಲ್ಲಿರುವ ಜಮಾವರ್ ರೆಸ್ಟೋರೆಂಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರ ನೆಚ್ಚಿನ ಫುಡ್‌ ಸ್ಪಾಟ್‌. ಕೊಹ್ಲಿ ಅವರು ತಾವು ಕುಟುಂಬ ಸಮೇತರಾಗಿ ಲಂಡನ್ ಗೆ ಭೇಟಿ ನೀಡಿದಾಗಲೆಲ್ಲ ಇಲ್ಲಿಗೆ ತೆರಳುತ್ತಾರೆ. ಇಲ್ಲಿನ ಶೆಫ್ ಸುರೇಂದರ್ ಮೋಹನ್ ಕೊಹ್ಲಿ ದಂಪತಿಯನ್ನು ಸ್ಪೆಶಲ್ ಫುಡ್ ಮೂಲಕ ವೆಲ್ ಕಂ ಮಾಡ್ತಾರೆ. ಇಲ್ಲಿಗೆ ಭೇಟಿ ನೀಡಿ ತಾವು ಸವಿದ ಹಲವಾರು ಡಿಶ್‌ಗಳೊಂದಿಗಿನ ಫೋಟೊಗಳನ್ನು ಇವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ.

ಡೆಲ್ಲಿ ಸೆ, ಮುಂಬೈ: ಡೆಲ್ಲಿ ಚೋಲೆ ಭಟೂರೆಯ ಪ್ಲೇವರನ್ನು ಮ್ಯಾಚ್ ಮೀರಿಸಲು ಕಷ್ಟವಾದ್ರೂ, ಮುಂಬೈಯಲ್ಲಿನ ಈ ಸ್ಥಳ ಮಾತ್ರ ಕೊಹ್ಲಿ ಅವರ ಫೆವರಿಟ್ ಫುಡ್ ಸ್ಪಾಟ್‌ಗಳಲ್ಲಿ ಒಂದಾಗಿದೆ. ಕೊಹ್ಲಿ ಮುಂಬೈಯಲ್ಲಿದ್ದರೆ ತನ್ನಿಷ್ಟದ ಚೋಲೆ ಭಟೂರೆಯನ್ನು ಸವಿಯಲು ಇಲ್ಲಿಗೆ ಬರೋದಂತು ಫಿಕ್ಸ್! ದಿಲ್ಲಿಯ ವೈವಿಧ್ಯಮಯ ಸ್ಟ್ರೀಟ್ ಫುಡ್ ಗಳು ಎಕ್ಸ್ಟ್ರಾ ಫ್ಲೇವರ್ ನೊಂದಿಗೆ ಇಲ್ಲಿ ಸವಿಯಲು ಲಭ್ಯ.

ಇದನ್ನೂ ಓದಿ: ಪತಿಯ ಶತಕ ಸಾಹಸಕ್ಕೆ ಮನಸೋತ ಪತ್ನಿ ಅನುಷ್ಕಾ; ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್‌

ಒನ್ 8 ಕಮ್ಯುನೆ, ಮುಂಬೈ: ಲೆಜಂಡರಿ ಸಿಂಗರ್ ಕಿಶೋರ್ ಕುಮಾರ್ ಅವರ ಐತಿಹಾಸಿಕ ಬಂಗ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ ರೆಸ್ಟೋರೆಂಟಿಗೆ ಮತ್ತು ವಿರಾಟ್ ಕೊಹ್ಲಿಗೆ ಒಂದು ಅವಿನಾಭಾವ ಸಂಬಂಧವಿದೆ. ಮನೆ ವಾತಾವರಣದಲ್ಲಿ ಗ್ಲೋಬಲ್ ಫುಡ್‌ಗಳನ್ನು ಸವಿಯುವ ಅವಕಾಶ ಇಲ್ಲಿದೆ. ಇಲ್ಲಿರುವ ಗೋಡೆಗಳಿಂದ ಹಿಡಿದು ಎಲೆಕ್ಟ್ರಿಕ್ ಮೆನುವರೆಗೆ ಎಲ್ಲವೂ ಸ್ಪೆಷಲ್ ಆಗಿದೆ. ಒಬ್ಬ ವೃತ್ತಿಪರ ಕ್ರಿಕೆಟರ್‌ನಿಂದ ವೃತ್ತಿಪರ ಬ್ಯುಸಿನೆಸ್ ಮ್ಯಾನ್ ಆಗಿ ಕೊಹ್ಲಿ ರೂಪಾಂತರಗೊಂಡಿರುವುದು ಇದೇ ರೆಸ್ಟೋರೆಂಟ್ ನ ಮಾಲಕನಾಗುವ ಮೂಲಕ.

ಟೆನ್ ಡ್ರಿಲ್, ಲಂಡನ್: ಲಂಡನ್‌ನ ಹೃದಯ ಭಾಗದಲ್ಲಿರುವ ಟೆನ್ ಡ್ರಿಲ್ ರೆಸ್ಟೋರೆಂಟ್ ಆರೋಗ್ಯಕರ ಆಹಾರ ಸೇವನೆಗಾಗಿರುವ ಪ್ರಶಸ್ತ ಸ್ಥಳಗಳಲ್ಲಿ ಒಂದು. ಈ ರೆಸ್ಟೋರೆಂಟ್ ಕೊಹ್ಲಿ ಮತ್ತು ಅನುಷ್ಕಾ ಇಬ್ಬರದ್ದೂ ಫೇವರಿಟ್ ಫುಡ್ ಸ್ಪಾಟ್ ಎನಿಸಿಕೊಂಡಿದೆ.

ಜಾಸ್ಮಿನ್ ಇಂಡಿಯನ್ ರೆಸ್ಟೋರೆಂಟ್, ಅಡಿಲೇಡ್: ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕೊಹ್ಲಿ ಮತ್ತು ಅವರ ಟೀಂ ಮೇಟ್‌ಗಳು ಆಗಾಗ್ಗೆ ವಿಸಿಟ್ ಮಾಡುವ ಪೆವರಿಟ್ ರೆಸ್ಟೋರೆಂಟ್‌ಗಳಲ್ಲಿ ಆಸ್ಟ್ರೇಲಿಯಾದ ಜಾಸ್ಮಿನ್ ಇಂಡಿಯನ್ ರೆಸ್ಟೋರೆಂಟ್ ಸಹ ಒಂದು. ಅಡಿಲೇಡ್‌ನಲ್ಲಿರುವ ಈ ಇಂಡಿಯನ್ ರೆಸ್ಟೋರೆಂಟ್ ಕಟ್ಟರ್ ಭಾರತೀಯ ಶೈಲಿಯ ಫುಡ್ ಮೇಕಿಂಗ್‌ಗೆ ಪ್ರಸಿದ್ಧ. ಸಚಿನ್ ತೆಂಡುಲ್ಕರ್ ಸಹಿತ ಹಲವು ಭಾರತೀಯ ಕ್ರಿಕೆಟ್ ಧಿಗ್ಗಜರ ಫೆವರೇಟ್‌ ರೆಸ್ಟೋರೆಂಟ್ ಇದು ಎನ್ನುವುದು ವಿಶೇಷ.