Viral Video: ಸಚಿವರ ಸೋದರಳಿಯ & ಹೂ ಅಂಗಡಿ ಮಾರಾಟಗಾರರನ ನಡುವೆ ಮಾರಾಮಾರಿ; ವಿಡಿಯೊ ವೈರಲ್
ಉತ್ತರ ಪ್ರದೇಶದ ಮೀರತ್‍ನಲ್ಲಿ ಸಚಿವ ಸೋಮೇಂದ್ರ ತೋಮರ್ ಸೋದರಳಿಯ ನಿಖಿಲ್ ತೋಮರ್ ಹಾಗೂ ಹೂ ಅಂಗಡಿಯ ಮಾಲೀಕನ ನಡುವೆ ಟ್ರಾಫಿಕ್ ವಿಚಾರಕ್ಕೆ ಜಗಳ ಶುರುವಾಗಿ ಇಬ್ಬರು ಕೈಕೈ ಮಿಲಾಯಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

car viral news

ಲಖನೌ: ಉತ್ತರ ಪ್ರದೇಶದ ಮೀರತ್‍ನಲ್ಲಿ ಉತ್ತರ ಪ್ರದೇಶದ ಸಚಿವ ಸೋಮೇಂದ್ರ ತೋಮರ್ ಸೋದರ ಸಂಬಂಧಿ ಹಾಗೂ ವರ್ತಕರ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಸಚಿವರ ಸೋದರಳಿಯ ನಿಖಿಲ್ ತೋಮರ್ ಶನಿವಾರ (ಫೆಬ್ರವರಿ 22) ಮಧ್ಯಾಹ್ನ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಜನದಟ್ಟಣೆಯ ಬೀದಿಯಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ವಿಡಿಯೊ ನೋಡಿ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದು, ನಾನಾ ರೀತಿಯ ಕಾಮೆಂಟ್ ವ್ಯಕ್ತವಾಗಿದೆ.
ವೈರಲ್ ವಿಡಿಯೊದಲ್ಲಿ ತೋಮರ್ ಹಾಗೂ ಹೂ ಅಂಗಡಿಯ ಮಾಲೀಕನ ನಡುವೆ ಮಾತುಕತೆ ನಡೆದಿರುವುದು ಕಂಡು ಬಂದಿದೆ. ಇಬ್ಬರು ಒಬ್ಬರ ಮೇಲೆ ಒಬ್ಬರು ಕೈಕೈ ಮಿಲಾಯಿಸಿದ್ದಾರೆ. ಅಲ್ಲಿದ್ದವರು ಇವರ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ. ನಂತರ ತೋಮರ್ ಮತ್ತು ಆತನ ಸಹಚರರು ತಮ್ಮ ಕಾರಿನಲ್ಲಿ ಹೊರಟುಹೋಗಿದ್ದಾರೆ. ಈ ಎಲ್ಲ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
UP BJP minister @isomendratomar’s nephew seen beating a poor flower vendor over a free bouquet.
— Manish RJ (@mrjethwani_) February 23, 2025
Ram Rajya! pic.twitter.com/UfWVjDtfmj
ಮಾಹಿತಿ ಪ್ರಕಾರ, ತೋಮರ್ ಆ ಮಾರ್ಗದ ಹೋಗುವಾಗ ಅಂಗಡಿಯ ಹೊರಗೆ ಇರಿಸಲಾಗಿದ್ದ ಹೂವಿನ ಪಾಟ್‌ಗಳು ಒಡೆಯುತ್ತದೆ ಎಂದು ಕಾರನ್ನು ನಿಲ್ಲಿಸುವಂತೆ ಮಾಲೀಕ ಕೇಳಿದ್ದಾನೆ. ಆದರೆ ತೋಮರ್ ಕಾರನ್ನು ಮುಂದೆ ಚಲಿಸಲು ಪ್ರಯತ್ನಿಸಿದ್ದಾನೆ. ಇದು ಆತ ಮತ್ತು ಹೂವಿನ ಮಾರಾಟಗಾರನ ನಡುವೆ ವಾಗ್ವಾದವನ್ನು ಹುಟ್ಟು ಹಾಕಿತು. ಕೂಡಲೇ ಅವರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೀರತ್ ಪೊಲೀಸರು, "ಈ ಪ್ರಕರಣದಲ್ಲಿ, ಎರಡೂ ಪಕ್ಷಗಳು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಪ್ರಕರಣದ ತನಿಖೆಯನ್ನು ಸರ್ಕಲ್ ಆಫೀಸರ್‌ಗೆ ವಹಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Road Accident: ಜೆಡಿಎಸ್ ಮುಖಂಡನ ಕಾರು ಅಪಘಾತ, ಮಹಿಳೆ ಸಾವು, ಇಬ್ಬರಿಗೆ ಗಾಯ
ತುಮಕೂರು ಜಿಲ್ಲೆಯ ಜೆಡಿಎಸ್ ಮುಖಂಡರೊಬ್ಬರ ಕಾರು ಅಪಘಾತಕ್ಕೀಡಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಜೆಡಿಎಸ್ ಮುಖಂಡ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್ ಸಮೀಪ ಆಕ್ಸಿಡೆಂಟ್ ಸಂಭವಿಸಿದೆ.
ಹೊಸದಾಗಿ ಖರೀದಿಸಿದ್ದ ಕಾರಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದ ಕುಟುಂಬ ಸದಸ್ಯರು ವಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿದೆ. ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಗಂಡ ಹೆಂಡತಿ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡವರು. ಮತ್ತೊಬ್ಬ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಪಾವಗಡ ಜೆಡಿಎಸ್ ಮುಖಂಡ ಶಿವಪ್ಪ ಕೆಲವು ದಿನಗಳ ಹಿಂದಷ್ಟೇ ಹೊಸ ಕಾರು ಖರೀದಿಸಿದ್ದರು. ಅದರಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಹೊಸ ಕಾರನ್ನು ಡೆಲಿವರಿ ಕೊಡುವಾಗ ಕಟ್ಟುವ ರಿಬ್ಬನ್ ಕೂಡ ತೆಗೆದಿರಲಿಲ್ಲ. ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ನೀರಿನ ಸಂಪ್‌ಗೆ ಗುದ್ದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಕಾರಿನ ಗಾಜಿನಿಂದ ಸೀದಾ ನೀರಿನ ತೊಟ್ಟಿಯೊಳಗೆ ಬಿದ್ದಿದ್ದಾರೆ.