Narada Sanchara: ಅಪ್ಪಾ.. ಐ ಲವ್ ಯು ಪಾ..
ತಮ್ಮ ಸರಕಾರದ ಯೋಜನೆಗಳ ಪ್ರಯೋಜನವನ್ನು ಪಡೆದ ವಿದ್ಯಾರ್ಥಿಗಳು ತಮ್ಮನ್ನು ‘ಅಪ್ಪಾ’ ಎಂದು ಕರೆದಿದ್ದಕ್ಕೆ ತಮಗೆ ಯರ್ರಾಬಿರ್ರಿ ಸಂತೋಷವಾಗಿದ್ದನ್ನೂ ಸ್ಟಾಲಿನ್ ಮಹಾ ಶಯರು ವಿಧಾನಸಭೆಯಲ್ಲಿ ಹೇಳಿಕೊಂಡಿ ದ್ದರೂ, ಈ ‘ಅಡ್ಡಹೆಸರು’ ಆಗ ಹೆಚ್ಚು ಗಮನ ಸೆಳೆದಿರಲಿಲ್ಲ. ಆದರೀಗ ‘ಅಪ್ಪಾ’ ಎಂಬ ಆ ಉದ್ಗಾರವು ಸಾಮಾಜಿಕ ಮಾಧ್ಯಮಗಳಲ್ಲಿ ಬಿರು ಗಾಳಿಯಂತೆ ವ್ಯಾಪಿಸಿಕೊಂಡು ಬಿಟ್ಟು, ಅಲ್ಲಿನ ಬಳಕೆದಾರ ನೆಟ್ಟಿಗರು ಏನಾದರೊಂದು ನೆಪ ಮಾಡಿಕೊಂಡು ಆ ಪದವನ್ನು ಬಳಸುತ್ತಿದ್ದಾರಂತೆ

ಎಂ.ಕೆ.ಸ್ಟಾಲಿನ್

ತಮಿಳುನಾಡಿನ ಜನರು ತಮ್ಮ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಉದ್ದೇಶಿಸಿ, ‘ನಿನ್ನಂಥ ಅಪ್ಪಾ ಇಲ್ಲಾ... ಒಂದೊಂದು ಮಾತೂ ಬೆಲ್ಲಾ.." ಎಂಬ ಸಿನಿಮಾ ಹಾಡನ್ನು ತಮಿಳಿಗೆ ಭಾಷಾಂತರಿಸಿಕೊಂಡು ಹಾಡುತ್ತಿದ್ದಾರಂತೆ. ಈ ಗಾಯನ ವನ್ನು ಕೇಳಿಸಿಕೊಂಡು ನಖಶಿಖಾಂತವಾಗಿ ರೋಮಾಂಚನಗೊಂಡ ಸ್ಟಾಲಿನ್ ಅವರು ಇತ್ತೀಚೆಗೆ ಆಯೋಜಿಸ ಲಾಗಿದ್ದ ‘ಉಂಗಳಿಲ್ ಒರುವನ್’ (ನಿಮ್ಮಲ್ಲಿ ಒಬ್ಬ) ಎಂಬ ಕಾರ್ಯಕ್ರಮದ ಸಂದರ್ಭದಲ್ಲಿ ಈ ಕುರಿತು ಮಾತನಾಡುತ್ತಾ, “ಜನರು ನನ್ನನ್ನು ‘ಅಪ್ಪಾ’ ಅಂತ ಹೀಗೆ ಬಾಯ್ತುಂಬಿ ಕರೆ ಯೋದನ್ನ ಕೇಳಿಸಿಕೊಂಡ್ರೆ ಹುಚ್ಚಾಪಟ್ಟೆ ಸಂತೋಷ ಆಗುತ್ತೆ ಕಣ್ರೀ" ಎನ್ನುತ್ತಾ ಆನಂದ ಬಾಷ್ಪ ಸುರಿಸಿ, ಅದರಲ್ಲಿ ಮಿಕ್ಕಿದ್ದನ್ನು ಶಲ್ಯದ ಅಂಚಿ ನಲ್ಲಿ ಲಘುವಾಗಿ ಒರೆಸಿಕೊಂಡ ರಂತೆ.
ಇದನ್ನೂ ಓದಿ: Narada Sanchara: ನಿತೀಶ್ ಎಂಬ ಕಿಲಾಡಿ
ಇದಕ್ಕೂ ಮುನ್ನ ಜನವರಿಯಲ್ಲಿ, ತಮ್ಮ ಸರಕಾರದ ಯೋಜನೆಗಳ ಪ್ರಯೋಜನವನ್ನು ಪಡೆದ ವಿದ್ಯಾರ್ಥಿಗಳು ತಮ್ಮನ್ನು ‘ಅಪ್ಪಾ’ ಎಂದು ಕರೆದಿದ್ದಕ್ಕೆ ತಮಗೆ ಯರ್ರಾಬಿರ್ರಿ ಸಂತೋಷವಾಗಿದ್ದನ್ನೂ ಸ್ಟಾಲಿನ್ ಮಹಾಶಯರು ವಿಧಾನಸಭೆಯಲ್ಲಿ ಹೇಳಿಕೊಂಡಿ ದ್ದರೂ, ಈ ‘ಅಡ್ಡಹೆಸರು’ ಆಗ ಹೆಚ್ಚು ಗಮನ ಸೆಳೆದಿರಲಿಲ್ಲ. ಆದರೀಗ ‘ಅಪ್ಪಾ’ ಎಂಬ ಆ ಉದ್ಗಾರವು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ವ್ಯಾಪಿಸಿಕೊಂಡು ಬಿಟ್ಟು, ಅಲ್ಲಿನ ಬಳಕೆದಾರ ನೆಟ್ಟಿಗರು ಏನಾದರೊಂದು ನೆಪ ಮಾಡಿಕೊಂಡು ಆ ಪದವನ್ನು ಬಳಸುತ್ತಿದ್ದಾರಂತೆ.
ಅವರ ಪೈಕಿ ಒಬ್ಬರಂತೂ, “ಅಪ್ಪಾ, ಆಸ್ತಿಯಲ್ಲಿ ನನಗೂ ಪಾಲು ಸಿಗಬಹುದೇ? ದಯ ವಿಟ್ಟು ಖಾತ್ರಿಪಡಿಸುತ್ತೀರಾ?" ಎಂದು ‘ಇಂಡೆಂಟ್’ ಹಾಕಿದ್ದರೆ ಮತ್ತೊಬ್ಬರು, “ಅಪ್ಪಾ, ನನ್ನ ಮಕ್ಕಳಿಗಿನ್ನೂ ಮದುವೆಯಾಗಿಲ್ಲ, ಸರಿಯಾದ ಜೋಡಿಯನ್ನು ಹುಡುಕಿಕೊಡ್ತೀರಾ ಪ್ಲೀಸ್" ಎಂದು ‘ಅಪ್ಲಿಕೇಷನ್’ ಹಾಕಿದ್ದಾರಂತೆ!
ಇಂಥ ಸಂದರ್ಭದಲ್ಲಿ ತಾವ್ಯಾಕೆ ಸುಮ್ಮನಿರಬೇಕು ಎಂದುಕೊಂಡು ಪಂಚೆಯನ್ನು ಕೊಡವಿ ಕೊಂಡು ಮೇಲಕ್ಕೆದ್ದ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು, “ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗಿದ್ದರೂ, ಅವರ ಅಳಲಿಗೆ ಕಿವಿ ಯಾಗುವ ಬದಲು ‘ಅಪ್ಪಾ’ ಅವರು ಕಿವುಡರಾಗಿಬಿಟ್ಟಿದ್ದಾರೆ" ಎಂದು ಕೂರಂಬು ಬಿಟ್ಟಿದ್ದಾ ರಂತೆ...ಒಟ್ನಲ್ಲಿ, ‘ತೋಳ ಗುಂಡಿಗೆ ಬಿದ್ರೆ ಆಳಿಗೊಂದು ಕಲ್ಲು’ ಅನ್ನೋ ಮಾತು ನಿಜ ಕಣ್ರೀ!