Roopa Gururaj Column: ಸಹಾಯ ಮಾಡಿದವರನ್ನು ಮರೆಯಬಾರದು
2007ರಲ್ಲಿ, ಅವನು ಖನ್ನಾ ಮತ್ತು ಅಯ್ಯರ್ ಅವರ ಛಾಯಾಗ್ರಾಹಕನಾಗಿ ಕೆಲಸ ಮಾಡು ತ್ತಾನೆ. ನಂತರ ಬ್ಲೂ (2009), ಇಂಗ್ಲಿಷ್ ವಿಂಗ್ಲಿಷ್ (2012), ಡಿಯರ್ ಜಿಂದಗಿ, ಹಿಂದಿ ಮೀಡಿಯಂ, ಮತ್ತು 102 ನಾಟ್ ಔಟ್ ನಂತಹ ಪ್ರಮುಖ ಬಾಲಿವುಡ್ ಚಿತ್ರಗಳಿಗೆ ಆತನ ಕೊಡುಗೆ ಅಪಾರ


ಒಂದೊಳ್ಳೆ ಮಾತು
ಹೆತ್ತವರನ್ನು ಕಳೆದುಕೊಂಡ ಆ ಬಾಲಕ ತನ್ನ ಹಳ್ಳಿಯನ್ನು ತೊರೆದು ಮುಂಬೈಗೆ ತೆರಳು ತ್ತಾನೆ. ಜೀವನೋಪಾಯಕ್ಕೆ ಶಿವಾಜಿ ಪಾರ್ಕ್ ಬಳಿ ವಡಾ ಪಾವ್ ಮಾರಾಟ ಮಾಡಲು ಪ್ರಾರಂಭಿಸುತ್ತಾನೆ. ಬಾಲಿವುಡ್‌ನ ನೆಲೆಯಾದ ಮುಂಬೈ ಮಹಾನಗರಿಯಲ್ಲಿ ಆಗಾಗ ತೆರೆ ಕಾಣುತ್ತಲಿದ್ದ ಸಿನಿಮಾಗಳ ಬಗ್ಗೆ ಕುತೂಹಲ ಮೂಡಿಸಿಕೊಳ್ಳುತ್ತಾನೆ. ಒಂದು ದಿನ ಪುರಸಭೆ ಯವರು ಈ ಬಾಲಕನ ವಡಾ ಪಾವ್ ಅಂಗಡಿಯನ್ನೂ ತೆರವುಗೊಳಿಸುತ್ತಾರೆ. ಮುಂದೇನು ಮಾಡಬೇಕೆಂಬುದು ಆತನಿಗೆ ತೋಚುವುದಿಲ್ಲ. ಅದೇ ಸಮಯದಲ್ಲಿ, ಎಡಿಟಿಂಗ್ ಸ್ಟುಡಿ ಯೋದಲ್ಲಿ ಪ್ಯೂನ್ ಕೆಲಸಕ್ಕಾಗಿ ಪತ್ರಿಕೆಯಲ್ಲಿ ಜಾಹೀರಾತನ್ನು ಕೊಡಲಾಗಿರುತ್ತದೆ. ಅದನ್ನು ಗಮನಿಸಿದ ಈ ಬಾಲಕ ಅಲ್ಲಿ ಕೆಲಸ ಗಿಟ್ಟಿಸಿ ಕೊಳ್ಳುತ್ತಾನೆ. ಕ್ಯಾಮೆರಾ ಅಟೆಂಡೆಂ ಟ್‌ಗಳ ಕೊರತೆಯಿಂದಾಗಿ, ಸಿಬ್ಬಂದಿ ಕ್ರಮೇಣ ಇವನನ್ನು ಕ್ಯಾಮೆರಾ ಕಾರ್ಯಾಚರಣೆ ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Roopa Gururaj Column: ಜ್ಞಾನದ ಅಪಾತ್ರದಾನ ಆಗಬಾರದು
ಈಗ ಕ್ಯಾಮೆರಾ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾನೆ. ನಂತರ ಮುಖ್ಯ ಕ್ಯಾಮೆರಾ ಅಟೆಂಡೆಂಟ್, ಸಹಾಯಕ ಕ್ಯಾಮೆರಾಮನ್ ಮತ್ತು ಅಂತಿಮವಾಗಿ ಪೂರ್ಣ ಪ್ರಮಾಣದ ಕ್ಯಾಮೆರಾಮನ್ ಆಗುತ್ತಾನೆ. ಆಂಥೋನಿ ಡಿ’ಸೋಜಾ ಅವರ ಪ್ರಚಾರದ ವೀಡಿಯೊವನ್ನು ಚಿತ್ರೀಕರಿಸುವ ಅವಕಾಶವನ್ನು ಪಡೆದಾಗ ಅವನಿಗೆ ದೊಡ್ಡ ಬ್ರೇಕ್ ಸಿಕ್ಕಿಬಿಡುತ್ತದೆ, ಇದು ರಾಜಸ್ಥಾನದಲ್ಲಿ ಅವನ ಮೊದಲ ಸಂಗೀತ ವೀಡಿಯೊ ಚಿತ್ರೀಕರಣಕ್ಕೆ ಕಾರಣವಾಯಿತು.
2007ರಲ್ಲಿ, ಅವನು ಖನ್ನಾ ಮತ್ತು ಅಯ್ಯರ್ ಅವರ ಛಾಯಾಗ್ರಾಹಕನಾಗಿ ಕೆಲಸ ಮಾಡು ತ್ತಾನೆ. ನಂತರ ಬ್ಲೂ (2009), ಇಂಗ್ಲಿಷ್ ವಿಂಗ್ಲಿಷ್ (2012), ಡಿಯರ್ ಜಿಂದಗಿ, ಹಿಂದಿ ಮೀಡಿಯಂ, ಮತ್ತು 102 ನಾಟ್ ಔಟ್ ನಂತಹ ಪ್ರಮುಖ ಬಾಲಿವುಡ್ ಚಿತ್ರಗಳಿಗೆ ಆತನ ಕೊಡುಗೆ ಅಪಾರ.
ನಿರ್ದೇಶನಕ್ಕೆ ಪದಾರ್ಪಣೆ: ಮುಂದೆ 2013ರಲ್ಲಿ ಮರಾಠಿ ಚಿತ್ರ ತಪಾಲ್ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಾನೆ, ನಂತರ ಲಾಲ್ಬೌಗ್ಚಿ ರಾಣಿ (2016) ಚಿತ್ರ. 2019 ರಲ್ಲಿ, ಲಿವ್-ಇನ್ ಸಂಬಂಧದ ಮೇಲೆ ಹೆಣೆದ ಲುಕಾ ಚುಪ್ಪಿ ಎಂಬ ತನ್ನ ಮೊಟ್ಟ ಮೊದಲ ಹಿಂದಿ ಚಲನ ಚಿತ್ರವನ್ನು ನಿರ್ದೇಶಿಸುತ್ತಾನೆ. ಈ ಚಿತ್ರ ಸುಪರ್ ಹಿಟ್ ಚಿತ್ರವಾಗಿ ಹೊರ ಹೊಮ್ಮುತ್ತದೆ. 2021 ರಲ್ಲಿ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ ಮಾಲಾ ಆಯ್ ವ್ಯಾಯ್ಚಾಯ್ ನ ಹಿಂದಿ ರಿಮೇಕ್ ಮಿಮಿ ಚಿತ್ರವನ್ನು ನಿರ್ದೇಶಿಸುತ್ತಾನೆ. ಇದರ ನಂತರ 2023 ರಲ್ಲಿ ಜರಾ ಹಟ್ಕೆ ಜರಾ ಬಚ್ಕೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. 2024ರಲ್ಲಿ, ಅವನು ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ ಚಿತ್ರದೊಂದಿಗೆ ಚಲನಚಿತ್ರ ನಿರ್ಮಾ ಣಕ್ಕೂ ಕಾಲಿಡುತ್ತಾನೆ.
ಸದ್ಯ, ಮರಾಠಾ ಸಾಮ್ರಾಜ್ಯದ ಅಪ್ರತಿಮ ವೀರ ಸಂಭಾಜಿ ಕುರಿತಾದ ಚಲನಚಿತ್ರ ‘ಛಾವ’ ವನ್ನು ನಿರ್ದೇಶಿಸಿ ಹೆಸರುಮಾಡಿದ್ದಾರೆ. ಛಾವ ಚಲನಚಿತ್ರ ಬಿಡುಗಡೆಯಾಗಿ ಒಂದೇ ವಾರ ದಲ್ಲಿ ರು.220 ಕೋಟಿಗಳನ್ನು ಗಳಿಸಿದೆ. ಈಗಲೂ ಗಳಿಕೆಯಲ್ಲಿ ಮುಂದಿದೆ. ಆರಂಭ ದಲ್ಲಿ ಹೇಳಿದ ಆ ಬಾಲಕನೇ ಛಾವಾ ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿಯಶಸ್ವಿಯಾಗಿರುವ ಇವರ ಬದುಕು ಸ್ಪೂರ್ತಿದಾಯಕ. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಯಾವುದೇ ಕನಸನ್ನು ನನಸಾಗಿಸಿ ಕೊಳ್ಳಬಹುದು ಎಂಬುದಕ್ಕೆ ಲಕ್ಷ್ಮಣ್ ಉಟೇಕರ್ ಅವರ ಸಾಧನೆಯು ಮಾದರಿ ಎನಿಸಿದೆ.