ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

CCL 2025: ಸಿಸಿಎಲ್ ಪಂದ್ಯದಲ್ಲಿ ಗಲಾಟೆ: ತಾಳ್ಮೆ ಕಳೆದುಕೊಂಡ ಕಿಚ್ಚ ಸುದೀಪ್, ಏನು ಮಾಡಿದ್ರು?

ಕರ್ನಾಟಕ ಬುಲ್ಡೋಜರ್ಸ್ ಕೊನೆಯ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ವಿರುದ್ಧ 2 ರನ್ಗಳಿಂದ ಸೋತಿತ್ತು. ಆದರೆ, ಈ ಪಂದ್ಯದಲ್ಲಿ ಎಲ್ಲರ ಹುಬ್ಬೇರುವಂತಹ ಘಟನೆ ನಡೆಯಿತು. ಕಿಚ್ಚ ಸುದೀಪ್ ಎದುರಾಳಿ ತಂಡದ ವಿರುದ್ಧ ರೊಚ್ಚಿಗೆದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಿಸಿಎಲ್ ಪಂದ್ಯದಲ್ಲಿ ಗಲಾಟೆ: ತಾಳ್ಮೆ ಕಳೆದುಕೊಂಡ ಕಿಚ್ಚ ಸುದೀಪ್

Kichcha Sudeep CCL

Profile Vinay Bhat Feb 24, 2025 4:06 PM

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ (CCL) 2025ರ 11ನೇ ಆವೃತ್ತಿ ನಡೆಯುತ್ತಿದೆ. ಫೆಬ್ರುವರಿ 8ರಿಂದ ಪಂದ್ಯಾವಳಿ ಆರಂಭವಾಗಿದ್ದು, 8 ಚಿತ್ರರಂಗಗಳ ಒಂದು ಕಪ್​ಗಾಗಿ ಸೆಣೆಸಾಟ ನಡೆಸುತ್ತಿದೆ. ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಕೂಡ ಮಾಡಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಗೆದ್ದು ಬೀಗಿತ್ತು.

ಕರ್ನಾಟಕ ಈವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಮೂರು ಪಂದ್ಯದಲ್ಲಿ ಜಯ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ, ಫೆಬ್ರವರಿ 22 ರಂದು ನಡೆದ ಪಂಜಾಬ್ ದಿ ಶೇರ್ ವಿರುದ್ಧದ ರೋಚಕ ಪಂದ್ಯದಲ್ಲಿ 2 ರನ್​ಗಳಿಂದ ಸೋತಿತ್ತು. ಆದರೆ, ಈ ಪಂದ್ಯದಲ್ಲಿ ಎಲ್ಲರ ಹುಬ್ಬೇರುವಂತಹ ಘಟನೆ ನಡೆಯಿತು. ಕಿಚ್ಚ ಸುದೀಪ್ ಎದುರಾಳಿ ತಂಡದ ವಿರುದ್ಧ ರೊಚ್ಚಿಗೆದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಮೊದಲ 10 ಓವರ್​ನಲ್ಲಿ 121 ಹಾಗೂ ನಂತರದ 10 ಓವರ್​ನಲ್ಲಿ 94 ರನ್ ಗಳಿಸಿತು. ಕರ್ನಾಟಕ ಬುಲ್ಡೋಜರ್ಸ್ ಮೊದಲ 10 ಓವರ್​ನಲ್ಲಿ 91 ಹಾಗೂ ನಂತರದ 10 ಓವರ್​ನಲ್ಲಿ 122 ರನ್ ಗಳಿಸಿ 2 ರನ್​ಗಳಿಂದ ಗೆಲುವು ತಪ್ಪಿಸಿಕೊಂಡಿತು. ಈ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ಮಾಡುವಾಗ ಎರಡು ತಂಡಗಳ ಸದಸ್ಯರ ನಡುವೆ ಜಗಳ ನಡೆದಿದೆ.

ಪಂದ್ಯದ ಮಧ್ಯದಲ್ಲಿ ಪಂಜಾಬ್ ತಂಡದ ನಿಂಜಾ ಎನ್ಜೆ ಮತ್ತು ಕರ್ನಾಟಕದ ವಿಕೆಟ್ ಕೀಪರ್ ಕಿಚ್ಚ ಸುದೀಪ್ ನಡುವೆ ಜಗಳ ನಡೆಯಿತು. ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಕೆಲಕಾಲ ಪಂದ್ಯ ಕೂಡ ಸ್ಥಗಿತಗೊಂಡಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಒಬ್ಬರಿಗೊಬ್ಬರು ಎಚ್ಚರಿಕೆ ನೀಡಲು ಆರಂಭಿಸಿದರು. ಸ್ಥಿತಿ ಕೈ ಮೀರುತ್ತಿದೆ ಎಂದು ಅರಿತ ಅಂಪೈರ್‌ಗಳು ಆಟಗಾರರಿಗೆ ಶಾಂತವಾಗಲು ಹೇಳಿದರು.

ಕಿಚ್ಚ ಸುದೀಪ್​ ಅವರನ್ನು ಸಮಾಧಾನ ಪಡಿಸಲು ಗೋಲ್ಡನ್​ ಸ್ಟಾರ್​ ಗಣೇಶ್​ ಸೇರಿದಂತೆ ತಂಡದ ಸದಸ್ಯರು ಮಧ್ಯಪ್ರವೇಶಿಸಬೇಕಾಯಿತು. ಆದರೆ, ಪಂದ್ಯ ಮುಗಿದ ನಂತರ ಕಿಚ್ಚ ಸುದೀಪ್ ಸ್ವತಃ ಹೋಗಿ ತಾವು ಜಗಳ ಮಾಡಿದ್ದ ಆಟಗಾರ ನಿಂಜಾ ಜೊತೆ ಕೈಕುಲುಕಿದರು. ಅವರು ಕೂಡ ಸುದೀಪ್ ಅವರನ್ನು ಅಪ್ಪಿಕೊಂಡು ನಗುತ್ತಾ ಮಾತನಾಡಿದನು. ಪಂಜಾಬ್‌ನ ಇತರ ಆಟಗಾರರು ಸಹ ಕೈಕುಲುಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.



ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಕಿಚ್ಚ ಸುದೀಪ್ ನಾಯಕನಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕಾನಂದ, ತ್ರಿವಿಕ್ರಮ್ ಇದ್ದಾರೆ. ಈ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಪ್ರದೀಪ್ ಅನ್ನು ಮಿಸ್ ಮಾಡಿಕೊಂಡಿದೆ. ಇವರ ಜಾಗದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್-ಅಪ್ ತ್ರಿವಿಕ್ರಮ್ ಆಡುತ್ತಿದ್ದಾರೆ.

Bhagya Lakshmi Serial: ಇಂದು ಭಾಗ್ಯ ಲಕ್ಷ್ಮೀ ಮಹಾಸಂಚಿಕೆ: ಈ ಒಂದು ಎಪಿಸೋಡ್​ಗಾಗಿ ಕಾದು ಕುಳಿತಿದ್ದಾರೆ ವೀಕ್ಷಕರು