ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Anand Mahindra: ಪಾಕ್‌ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿಯನ್ನು ಶ್ಲಾಘಿಸಿದ ಆನಂದ್‌ ಮಹೀಂದ್ರ

ಪಾಕಿಸ್ತಾನದ ವಿರುದ್ಧ ಫೆ. 23ರಂದು ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟ್ಸ್‌ಮ್ಯಾನ್‌ ವಿರಾಟ್‌ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದಾರೆ. ಇದು ಕೊಹ್ಲಿಯ 4ನೇ ಶತಕವಾಗಿದ್ದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದೀಗ‌ ವಿರಾಟ್ ಕೊಹ್ಲಿ ಅವರ ಆಟಕ್ಕೆ ಮಹೀಂದ್ರ ಗ್ರೂಪ್ಸ್ ಅಧ್ಯಕ್ಷ ಆನಂದ್ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಶತಕವನ್ನು ಸಂಭ್ರಮಿಸಿದ ಆನಂದ್ ಮಹೀಂದ್ರ ಪೋಸ್ಟ್ ವೈರಲ್

Virat Kohli

Profile Pushpa Kumari Feb 24, 2025 4:11 PM

ನವದೆಹಲಿ: ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಹೊಸ ದಾಖಲೆ ಬರೆದಿದ್ದಾರೆ. ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹೆಮ್ಮೆಯ ಆಟಗಾರ ಕಿಂಗ್ ವಿರಾಟ್ ಕೊಹ್ಲಿ ಶತಕ ಭಾರಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಭಾರತದ ಕೀರ್ತಿಪತಾಕೆ ಮೆರೆಯುವಂತೆ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧ ಇದು ಕೊಹ್ಲಿಯ ನಾಲ್ಕನೇ ಶತಕ. ಅವರ ಸೆಂಚುರಿ ಹೊಡೆತವನ್ನು ಕ್ರಿಕೆಟ್ ಅಭಿಮಾನಿಗಳು ಭರ್ಜರಿಯಾಗಿಯೇ ಸಂಭ್ರಮಿಸಿದ್ದಾರೆ. ಇದೀಗ‌ ಹೆಮ್ಮೆಯ ಆಟಗಾರ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್‌ಗೆ ಮಹೀಂದ್ರ ಗ್ರೂಪ್ಸ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶತಕ ಸಿಡಿಸಿದ ಕೊಹ್ಲಿಯನ್ನು ಶ್ಲಾಘಿಸಿದ ಅವರ ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮ್ಯಾನ್‌ ವಿರಾಟ್‌ ಕೊಹ್ಲಿ 111 ಎಸೆತಗಳಲ್ಲಿ 100 ರನ್‌ ಗಳಿಸುವ ಮೂಲಕ ಶತಕ ಸಿಡಿಸಿ ಪಾಕಿಸ್ತಾನದ ವಿರುದ್ಧ ಭಾರತ ತಂಡಕ್ಕೆ ಆರು ವಿಕೆಟ್‌ಗಳ ಸ್ಮರಣೀಯ ಗೆಲುವು ತಂದು ಕೊಟ್ಟರು. ಇದಕ್ಕೂ ಹಿಂದೆ ನಡೆದ ಮ್ಯಾಚ್‌ನಲ್ಲಿ ವಿರಾಟ್ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಬದ್ಧ ವಿರೋಧಿ ಬಣದ ವಿರುದ್ಧ ಅಸಲಿ ಮ್ಯಾಚ್ ಏನೆಂದು ವಿರಾಟ್ ಕೊಹ್ಲಿ ತೋರಿಸುವ ಮೂಲಕ ಭಾರತ ತಂಡದ ವಿಜಯಕ್ಕೆ ಪ್ರಮುಖ ಕಾರಣರಾಗಿದ್ದರು.



ಇದೀಗ ಕೊಯ್ಲಿಯ ಸಾಧನೆ ಭಾರತೀಯರು ಹೆಮ್ಮೆ ಪಡುವಂತಾಗಿದೆ. ಇದೀಗ ಉದ್ಯಮಿ ಆನಂದ್‌ ಮಹೀಂದ್ರ ಅವರು ಕೊಹ್ಲಿ ಶತಕವನ್ನು ಶ್ಲಾಘಿಸಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ನೀವು ಆಯ್ಕೆ ಮಾಡಲ್ಪಟ್ಟವರು, ನಿಮ್ಮ ಮ್ಯಾಚ್ ಮತ್ತು ವಿನ್ನಿಂಗ್ ಸ್ಟ್ರೋಕ್ ಕೂಡ ನಿಮಗೆ ನಿಖರವಾದ ಶತಕವನ್ನೇ ತಂದು ಕೊಟ್ಟಿದೆ ಎಂದು ಆನಂದ್‌ ಮಹೀಂದ್ರ ತಮ್ಮ ಎಕ್ಸ್‌ ಖಾತೆಯಲ್ಲಿ ಕೊಹ್ಲಿ ಚಿತ್ರವನ್ನು ಹಂಚಿಕೊಂಡು ಬರೆದಿದ್ದಾರೆ. ಈ ಪಂದ್ಯದಲ್ಲಿ ನಿಮ್ಮ ಶತಕ ಕಂಡರೆ ನಿಖರವಾಗಿ ನೀವು ಗೆಲುವಿಗಾಗಿಯೇ ಆಯ್ಕೆ ಆದವರು ಎಂದು ಸಾಬೀತಾಗಿದ್ದು ಭಾರತದ ಓರ್ವ ಹೆಮ್ಮೆಯ ಆಟಗಾರ ಎಂದು ವಿರಾಟ್ ಅವರನ್ನು ಆನಂದ್ ಮಹೀಂದ್ರ ಪ್ರಶಂಸಿದ್ದಾರೆ.

ಇದನ್ನು ಓದಿ: Sports Budget: ಬಜೆಟ್‌ನಲ್ಲಿ ಕ್ರೀಡೆಗೆ 3794 ಕೋಟಿ ರೂ ನೀಡಿದ ಕೇಂದ್ರ ಸರ್ಕಾರ!

ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ವ್ಯೂವ್ಸ್‌ ಪಡೆದಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಕೆಲವು ನೆಟ್ಟಿಗರು ಅದೃಷ್ಟ ಶಾಲಿ ಆಟಗಾರನಿಂದ ಭಾರತಕ್ಕೆ ಗೆಲು ವಾಗಿದೆ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನು ಕೆಲವು ನೆಟ್ಟಿಗರು ವಿರಾಟ್ ಕೊಹ್ಲಿ ಅವರು ನಮ್ಮ ದೇಶ ಕಂಡ ಅದ್ಭುತ ಆಟಗಾರ ಎಂದು ಪ್ರಶಂಸಿದ್ದಾರೆ.