'ಗುಜರಾತ್ ಐಟಿ/ಐಟಿಇಎಸ್ ನೀತಿ 2022-27 ರೋಡ್‌ಷೋ'ದಲ್ಲಿ ಗಣೇಶ್ ಹೌಸಿಂಗ್ನ ದೂರದೃಷ್ಟಿಯ ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ ಅನಾವರಣ
ಗಣೇಶ್ ಹೌಸಿಂಗ್‌ನ ಪ್ರಮುಖ ಯೋಜನೆ ಯಾಗಿರುವ ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ-ಯನ್ನು ಬೆಂಗ ಳೂರಿನ ತಂತ್ರಜ್ಞಾನ ಸಂಪರ್ಕ ಜಾಲಕ್ಕೆ ಪರಿಚಯಿಸುವ ಸಂದರ್ಭದಲ್ಲಿ ಗುಜರಾತ್‌ನ ಪರಿವರ್ತನೆಯ ಉಪಕ್ರಮಗಳು ಮತ್ತು ನೀತಿಗಳನ್ನು ಪ್ರದರ್ಶಿಸಲಾಯಿತು


ಬೆಂಗಳೂರು: ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್, ಗುಜರಾತ್ ಸರ್ಕಾರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ಗುಜರಾತ್ ಐಟಿ/ಐಟಿಇಎಸ್ ನೀತಿ ಗಾಗಿ ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ ಎರಡನೇ ರೋಡ್‌ಷೋ ಯಶಸ್ವಿಯಾಗಿ ನಡೆ ಯಿತು.
ಭಾರತದ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ರೋಡ್ಷೋಗೆ ಅಸಾಧಾರಣ ಪ್ರತಿಕ್ರಿಯೆ ಲಭ್ಯವಾಯಿತು. ಭಾರತದಾದ್ಯಂತದ 200ಕ್ಕೂ ಹೆಚ್ಚು ಪ್ರಮುಖ ಐಟಿ ಮತ್ತು ಐಟಿಇಎಸ್ ಕಂಪನಿಗಳನ್ನು ಆಕರ್ಷಿಸಿತು. ಗಣೇಶ್ ಹೌಸಿಂಗ್‌ನ ಪ್ರಮುಖ ಯೋಜನೆ ಯಾಗಿರುವ ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ-ಯನ್ನು ಬೆಂಗಳೂರಿನ ತಂತ್ರಜ್ಞಾನ ಸಂಪರ್ಕ ಜಾಲಕ್ಕೆ ಪರಿಚಯಿಸುವ ಸಂದರ್ಭದಲ್ಲಿ ಗುಜರಾತ್‌ನ ಪರಿವರ್ತನೆಯ ಉಪಕ್ರಮಗಳು ಮತ್ತು ನೀತಿಗಳನ್ನು ಪ್ರದರ್ಶಿಸಲಾಯಿತು.
ಇದನ್ನೂ ಓದಿ: Harish Kera Column: ಶಾಲೆಗೆ ನೂರು, ನೆನಪುಗಳು ನೂರಾರು
Ganesh Housing's visionary Million Minds Tech City unveiled at 'Gujarat IT/ITES Policy 2022-27 Roadshow'
ಈ ಸಮಾರಂಭದಲ್ಲಿ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೋನಾ ಖಂಧರ್, ಗುಜರಾತ್ ಇನ್ಫಾರ್ಮ್ಯಾಟಿಕ್ಸ್ ಲಿಮಿಟೆಡ್ನ ವ್ಯವಸ್ಥಾ ಪಕ ನಿರ್ದೇಶಕ ತುಷಾರ್ ವೈ. ಭಟ್ ಹಾಗೂ ಉದ್ಯಮ ಪ್ರಮುಖರು, ನೀತಿ ನಿರೂಪಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಗುಜರಾತ್ ಐಟಿ/ಐಟಿಇಎಸ್ ನೀತಿ 2022-27ರ ಅಡಿ ಯಲ್ಲಿ ನೀಡಲಾಗುತ್ತಿರುವ ವಿವಿಧ ಉತ್ತೇಜನಾ ಕ್ರಮಗಳ ಕುರಿತು ನಡೆದ ಸಮಾಲೋಚನಾ ಸಭೆಗಳು ಒಳನೋಟಗಳನ್ನು ಒದಗಿಸಿದವು. ಗುಜರಾತ್ ರಾಜ್ಯವನ್ನು ಪ್ರವರ್ಧಮಾನಕ್ಕೆ ಬರು ತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಪ್ರಸ್ತುತಪಡಿಸಲಾಯಿತು.
ಗುಜರಾತ್‌ನ ತಂತ್ರಜ್ಞಾನದ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಯ ಭರವಸೆ ನೀಡಿರುವ ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ - ಮಿಲಿಯನ್ ಮೈಂಡ್ಸ್ ಟೆಕ್ ಸಿಟಿಯ ಅನಾವರಣವು ಈ ರೋಡ್‌ಷೋನ ಪ್ರಮುಖ ಆಕರ್ಷಣೆ ಯಾಗಿತ್ತು.
ರೋಡ್ಷೋ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ, ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕ ಅನ್ಮೋಲ್ ಪಟೇಲ್ ಅವರು, “ಚೆನ್ನೈನಲ್ಲಿ ನಡೆದ ರೋಡ್ಷೋದ ಯಶಸ್ಸಿನ ಹಿನ್ನೆಲೆ ಯಲ್ಲಿ ಬೆಂಗಳೂರಿನಲ್ಲಿ ನಮಗೆ ದೊರೆತಿರುವ ಅಗಾಧ ಪ್ರತಿಕ್ರಿಯೆಯಿಂದ ನಾವು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇವೆ. ಐಟಿ/ಐಟಿಇಎಸ್ ವಲಯವನ್ನು ಮುನ್ನಡೆಸುವ ಗುಜರಾತ್‌ನ ಅಪಾರ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸುತ್ತದೆ.
ಗುಜರಾತ್ ಸರ್ಕಾರ ಮತ್ತು ಐಟಿ/ಐಟಿಇಎಸ್ ನೀತಿಯ ಬೆಂಬಲದ ನೆರವಿನಿಂದ, ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ-ಗೆ ಸಂಬಂಧಿಸಿದ ನಮ್ಮ ದೂರದೃಷ್ಟಿಯು ಮತ್ತೊಂದು ಟೌನ್‌ಶಿಪ್ ಅಭಿವೃದ್ಧಿ ಪಡಿಸುವುದಕ್ಕೆ ಸೀಮಿತವಾಗಿರದೆ, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ನಿರ್ಮಾಣಕ್ಕೂ ನೆರವಾಗಲಿದೆ. ಇದು ನಾವೀನ್ಯತೆ, ಐಷಾರಾಮಿ ಮತ್ತು ಸಮುದಾಯವು ಒಂದೆಡೆ ಸೇರುವ ಸ್ಥಳ ವಾಗಿರಲಿದೆ.
ಆರು ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್‌ಗಳು, ಉನ್ನತ-ದರ್ಜೆಯ ನಿವಾಸಗಳು, ಸಮಾನ ಮನಸ್ಕರ ಸಹ ಜೀವನ ಸ್ಥಳ, ಪ್ರೀಮಿಯಂ ಹೋಟೆಲ್ ಮತ್ತು ವಿಶಾಲವಾದ ಶಾಪಿಂಗ್ ಮಾಲ್‌ಗಳಿಗೆ ನೆಲೆ ಯಾಗಿರಲಿದೆ. ಇದು ಗುಜರಾತ್ ಮತ್ತು ದೇಶದ ಭವಿಷ್ಯ ರೂಪಿಸುವ ನಮ್ಮ ಬದ್ಧತೆಯ ಪ್ರತೀಕ ವಾಗಿದೆʼ ಎಂದು ಹೇಳಿದ್ದಾರೆ.
"ಬೆಂಗಳೂರಿನಲ್ಲಿ ಈ ರೋಡ್‌ಷೋಗೆ ದೊರೆತಿರುವ ಅಗಾಧ ಪ್ರತಿಕ್ರಿಯೆಯಿಂದ ನಾವು ಉತ್ತೇಜಿತ ರಾಗಿದ್ದೇವೆ" ಎಂದು ಗಣೇಶ್ ಹೌಸಿಂಗ್ನ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವೀರೇನ್ ಮೆಹ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.
ʼಗುಜರಾತ್ ಮತ್ತು ಕರ್ನಾಟಕದ ಐಟಿ ಕ್ಷೇತ್ರದ ಪ್ರಮುಖರನ್ನು ಒಂದೆಡೆ ಸೇರಿಸುವ ಮೂಲಕ, ಗುಜರಾತ್ ರಾಜ್ಯವನ್ನು ಐಟಿ ಹೂಡಿಕೆಗಳಿಗೆ ಮೊದಲ ಆಯ್ಕೆಯನ್ನಾಗಿ ಮಾಡುವ ಕಾರ್ಯತಂತ್ರದ ಉಪಕ್ರಮಗಳ ಮೇಲೆ ಬೆಳಕು ಚೆಲ್ಲುವಲ್ಲಿ ಈ ರೋಡ್ಷೋ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರಿನ ಉತ್ಸಾಹಿ ತಂತ್ರಜ್ಞಾನ ಸಮುದಾಯದ ತೀವ್ರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯು ಐಟಿ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದರ ಬಗೆಗಿನ ನಮ್ಮ ದೃಢ ವಿಶ್ವಾಸವನ್ನು ಪುನರು ಚ್ಚರಿಸುತ್ತದೆ. ಅದರಲ್ಲೂ ವಿಶೇಷವಾಗಿ ಎ-ದರ್ಜೆಯ ವಾಣಿಜ್ಯ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಈ ವಲಯದ ಭವಿಷ್ಯವನ್ನು ರೂಪಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೋನಾ ಖಂಧರ್ ಅವರು, "ಗುಜರಾತ್ ಐಟಿ/ಐಟಿಇಎಸ್ ನೀತಿ 2022-27- ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಡಿಜಿಟಲ್ ಪರಿವ ರ್ತನೆ ಜೊತೆಗೆ ಪರಿಪೂರ್ಣವಾಗಿ ಸಂಯೋಜನೆಗೊಳ್ಳುವ ಚೈತನ್ಯದಾಯಕ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಕೈಗಾರಿಕಾ ವಾತಾವರಣ ನಿರ್ಮಾಣ ಮಾಡುವ ನಮ್ಮ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ.
ಧೋಲೆರಾದಲ್ಲಿ ಸೆಮಿಕಂಡಕ್ಟರ್ ಕೇಂದ್ರ ಸ್ಥಾಪನೆ, ಜಾಗತಿಕ ಪಾಲುದಾರಿಕೆ, ಕೌಶಲ ವೃದ್ಧಿ ಹಾಗೂ ಸಂಶೋಧನೆಗೆ ಒತ್ತು ನೀಡುವ ಮೂಲಕ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ನಾವು ಉದ್ಯಮಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ. ಅಹ್ಮದಾ ಬಾದ್ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ʼಮಿಲಿಯನ್ ಮೈಂಡ್ಸ್ ಟೆಕ್ ಸಿಟಿʼ-ಯಂತಹ ಯೋಜ ನೆಗಳು ನಮ್ಮ ಪ್ರಗತಿಯ ಮಹತ್ವಾಕಾಂಕ್ಷೆ ಜೊತೆ ಹೊಂದಿಕೊಳ್ಳುವ ಜಾಗತಿಕ ಮಟ್ಟದ ಮೂಲ ಸೌಲಭ್ಯಗಳನ್ನು ಒದಗಿಸಿ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಗುಜರಾತ್ ಆದ್ಯತೆಯ ರಾಜ್ಯವನ್ನಾ ಗಿಸಲು ನೆರವಾಗಲಿವೆ. ಗುಜರಾತ್ ರಾಜ್ಯವು ಕೇವಲ ಸ್ಥಳೀಯ ಬೆಳವಣಿಗೆ ಮಾತ್ರ ಆದ್ಯತೆ ನೀಡದೆ 2047ರ ವೇಳೆಗೆ ಭಾರತವು ಅಭಿವೃದ್ಧಿ ದೇಶವಾಗಲು ಮಹತ್ವದ ಪಾತ್ರ ನಿರ್ವಹಿಸಲಿದೆʼ ಎಂದು ಹೇಳಿದರು.
"ಗುಜರಾತ್ ಐಟಿ/ಐಟಿಇಎಸ್ ನೀತಿ 2022-27 -ಯು ಗುಜರಾತ್ ಅನ್ನು ತಂತ್ರಜ್ಞಾನ ಮತ್ತು ನಾವೀ ನ್ಯತೆಗಳ ಜಾಗತಿಕ ಕೇಂದ್ರವಾಗಿ ಸ್ಥಾಪಿಸುವ ನಮ್ಮ ದೂರದೃಷ್ಟಿಗೆ ನಿದರ್ಶನವಾಗಿದೆ" ಎಂದು ಗುಜರಾತ್ ಇನ್ಫಾರ್ಮ್ಯಾಟಿಕ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ತುಷಾರ್ ವೈ. ಭಟ್ ಅವರು ಹೇಳಿದರು. "ಕ್ಯಾಪೆಕ್ಸ್- ಒಪೆಕ್ಸ್ನಂತಹ ಸರಿಸಾಟಿಯಿಲ್ಲದ ಪ್ರೋತ್ಸಾಹ, ಐಟಿ ಪಾರ್ಕ್, ನವೋ ದ್ಯಮಗಳಿಗೆ ಒದಗಿಸಲಿರುವ ವಿಶೇಷ ನೆರವಿನ ಕಾರಣಕ್ಕೆ ಈ ನೀತಿಯು ಮಹತ್ವದ್ದಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಬ್ಲಾಕ್ಚೇನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ನಂತಹ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಅವಕಾಶಗಳನ್ನು ತ್ವರಿತವಾಗಿ ಒದಗಿಸುವುದಕ್ಕೆ ಬುನಾದಿ ಹಾಕಲಿದ್ದೇವೆ. ಸುಸ್ಥಿರ ಬೆಳವಣಿಗೆ ಉತ್ತೇಜಿಸಲು, ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಸಲು ಮತ್ತು ಭಾರತದ ತಂತ್ರಜ್ಞಾನ ವಿಕಾಸದಲ್ಲಿ ಹೊಸ ಮಾನದಂಡಗಳನ್ನು ರೂಪಿಸುವು ದಕ್ಕೆ ಸಂಬಂಧಿಸಿದಂತೆ ಗುಜರಾತ್ನ ಅಚಲ ಬದ್ಧತೆಗೂ ಈ ನೀತಿಯು ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.
"ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನದ ಪರಸ್ಪರ ಸಹಯೋಗದ ಫಲವಾಗಿ ಪ್ರಮುಖ ಐಟಿ ಕೇಂದ್ರವಾಗಿ ಅಹ್ಮದಾಬಾದ್ ಬೆಳೆಯುತ್ತಿರುವುದರ ಮಹತ್ವವನ್ನು ಈ ರೋಡ್‌ಷೋ ಪ್ರದರ್ಶಿಸಿತು. ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ನಗರಗಳಿಗೆ ಹೋಲಿಸಿ ದರೆ ಅಹ್ಮದಾಬಾದ್ನಲ್ಲಿ ನಿರ್ವಹಣಾ ವೆಚ್ಚವು ಕಡಿಮೆ ಇದೆ. ರಿಯಲ್ ಎಸ್ಟೇಟ್ ಬೆಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕೈಗೆಟುಕುವ ದರದಲ್ಲಿವೆ. ಈ ಅಗ್ಗದ ಬೆಲೆಯು ನಗರದ ವಿಶಾಲವಾದ ಪರಿಣತ ತಂತ್ರಜ್ಞಾನ ಪ್ರತಿಭೆ ಮತ್ತು ಅಹ್ಮದಾಬಾದ್ ಮೆಟ್ರೊದಂತಹ ವಿಶ್ವದರ್ಜೆಯ ಮೂಲಸೌಲಭ್ಯಗಳ ಅಭಿವೃದ್ಧಿಗಳೊಂದಿಗೆ ಅಹ್ಮದಾಬಾದ್ ನಗರವನ್ನು ಐಟಿ ಹೂಡಿಕೆಗಳು ಮತ್ತು ನಾವೀನ್ಯತೆಗೆ ಒಂದು ಪ್ರಮುಖ ತಾಣವನ್ನಾಗಿ ಮುಂದುವರೆಸಿವೆ.