ಟೊಯೋಟಾ ಹ್ಯಾಕಥಾನ್ 2025 ಅನ್ನು ಮುಂಬೈನಲ್ಲಿ ಯಶಸ್ವಿಯಾಗಿ ಆಯೋಜಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ವಾರ್ಷಿಕ ಜಾಗತಿಕವಾಗಿ ರಸ್ತೆ ಅಪಘಾತದಿಂದ ಅತಿ ಹೆಚ್ಚು ಸಾವುಗಳು ಉಂಟಾಗುವ ದೇಶ ಎಂಬ ಹೆಸರಿ ಗೆ ಭಾರತ ಪಾತ್ರವಾಗಿದೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಿಂದ 1,50,000 ಕ್ಕೂ ಹೆಚ್ಚು ಸಾವು ನೋವುಗಳು ಉಂಟಾಗುತ್ತವೆ. ಅದರಲ್ಲೂ ವಿಶೇಷವಾಗಿ 5-29 ವರ್ಷ ವಯಸ್ಸಿನ ಜನರೇ ಹೆಚ್ಚಾಗಿ ಸಾವಿಗೆ ಈಡಾಗುತ್ತಿದ್ದಾರೆ


ಬೆಂಗಳೂರು: ಶಿಕ್ಷಣ ಮತ್ತು ರಸ್ತೆ ಸುರಕ್ಷತೆ ವಿಚಾರದಲ್ಲಿ ಮಹತ್ತರ ಕೆಲಸವನ್ನು ಮಾಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು 'ರಸ್ತೆ ಸುರಕ್ಷತಾ ಮಾಸಾಚರಣೆ' (ಜನವರಿ 18 - ಫೆಬ್ರವರಿ 17, 2025) ಪ್ರಯುಕ್ತ ಮುಂಬೈನ ವಡಾಲಾ (ಪೂರ್ವ)ದಲ್ಲಿರುವ ವಿದ್ಯಾ ಲಂಕರ್ ಇನ್ ಸ್ಟಿ ಟ್ಯೂಟ್ ನಲ್ಲಿ ತನ್ನ 24 ಗಂಟೆಗಳ ಟೊಯೋಟಾ ಹ್ಯಾಕಥಾನ್ 2025 ಅನ್ನು ಯಶಸ್ವಿಯಾಗಿ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಮುಂಬೈನ 100ಕ್ಕೂ ಹೆಚ್ಚು ಶಾಲೆಗಳ 400 ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಿಗೆ ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಸವಾಲುಗಳಿಗೆ ಅತ್ಯುತ್ತಮ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೇರೇಪಣೆ ನೀಡಲಾಯಿತು.
ಇದನ್ನೂ ಓದಿ: Vishweshwar Bhat Column: ವಿಚಿತ್ರ ಕಾನೂನುಗಳು
ಮಹಾರಾಷ್ಟ್ರ ಸರ್ಕಾರದ ಓಬಿಸಿ ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಗೌರವಾನ್ವಿತ ಸಚಿವರಾದ ಶ್ರೀ ಅತುಲ್ ಮೊರೇಶ್ವರ ಸಾವೆ, ಮರಾಠವಾಡ ಇಂಡಸ್ಟ್ರೀಸ್ ಮತ್ತು ಅಗ್ರಿಕಲ್ಚರ್ ಚೇಂಬರ್ ನ ಅಧ್ಯಕ್ಷರಾದ ಶ್ರೀ ಅರ್ಪ್ರಿತ್ ಸಾವೆ, ಟಿಕೆಎಂನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಕಂಟ್ರಿ ಹೆಡ್ ಶ್ರೀ ವಿಕ್ರಮ್ ಗುಲಾಟಿ, ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥರಾದ ಶ್ರೀ ಸುದೀಪ್ ದಳವಿ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ಜಾಗತಿಕವಾಗಿ ರಸ್ತೆ ಅಪಘಾತದಿಂದ ಅತಿ ಹೆಚ್ಚು ಸಾವುಗಳು ಉಂಟಾಗುವ ದೇಶ ಎಂಬ ಹೆಸರಿಗೆ ಭಾರತ ಪಾತ್ರವಾಗಿದೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಿಂದ 1,50,000 ಕ್ಕೂ ಹೆಚ್ಚು ಸಾವು ನೋವುಗಳು ಉಂಟಾಗುತ್ತವೆ. ಅದರಲ್ಲೂ ವಿಶೇಷವಾಗಿ 5-29 ವರ್ಷ ವಯಸ್ಸಿನ ಜನರೇ ಹೆಚ್ಚಾಗಿ ಸಾವಿಗೆ ಈಡಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಗುರುತಿಸಿರುವ ಟಿಕೆಎಂ ಶಾಲೆ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು 2018ರಲ್ಲಿ ಟೊಯೋಟಾ ಹ್ಯಾಕಥಾನ್ ಅನ್ನು ಪ್ರಾರಂಭಿಸಿತ್ತು. ಟೊಯೋಟಾ ಹ್ಯಾಕಥಾನ್ ಟಿಕೆಎಂ ಸಂಸ್ಥೆ ಯ ಸಮಗ್ರ ರಸ್ತೆ ಸುರಕ್ಷತಾ ಯೋಜನೆಯ ಮಹತ್ವದ ಭಾಗವಾಗಿದ್ದು, ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ರಸ್ತೆ ಸುರಕ್ಷತಾ ಶಿಕ್ಷಣವನ್ನು ಸಂಯೋಜಿಸುವ ಮೂಲಕ ಈ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಹೊಸತನ ಮತ್ತು ಜವಾಬ್ದಾರಿಯ ಪ್ರಜ್ಞೆ ಮೊಳೆಯಿಸುವ ಮೂಲಕ ಈ ಹ್ಯಾಕಥಾನ್ ಯುವಕರಿಗೆ ಪೂರ್ವಭಾವಿಯಾಗಿ ಪರಿಹಾರ ಕಂಡುಕೊಳ್ಳಲು ಮತ್ತು ಅವರ ನೆರೆಹೊರೆಗಳಲ್ಲಿ ಸಕಾರಾತ್ಮಕ ನಡವಳಿಕೆಯನ್ನು ಬೆಳೆಸುವ 'ಚೇಂಜ್ ಏಜೆಂಟ್' ಗಳಾಗಿ ರೂಪುಗೊಳ್ಳಲು ಪ್ರೇರೇಪಣೆ ನೀಡುತ್ತದೆ. ಶೂನ್ಯ ಟ್ರಾಫಿಕ್ ಸಾವುಗಳನ್ನು ಸಾಧಿಸುವ ಟೊಯೋಟಾ ದ ಜಾಗತಿಕ ದೃಷ್ಟಿಗೆ ಅನುಗುಣವಾಗಿ ಆಯೋಜನೆಗೊಂಡಿರುವ ಈ ಹ್ಯಾಕಥಾನ್ ಅಪಘಾತಗಳನ್ನು ಕಡಿಮೆ ಮಾಡುವ ಮತ್ತು ರಸ್ತೆಗಳನ್ನು ಸುರಕ್ಷಿತಗೊಳಿಸುವ ಸಂಸ್ಥೆಯ ರಸ್ತೆ ಸುರಕ್ಷತಾ ಕಾಳಜಿಯನ್ನು ಸಾರುತ್ತದೆ.
ಐದು ಹಂತಗಳಲ್ಲಿ ನಡೆದ ಹ್ಯಾಕಥಾನ್ ನ ಆರಂಭದಲ್ಲಿ ತಂಡದ ಆಯ್ಕೆ ಮತ್ತು ಪರಿಕಲ್ಪನೆ ಸಲ್ಲಿಕೆಯ ಹಂತ ನಡೆಯಿತು. ನಂತರ ಬೂಟ್ ನಡೆಯಿತು. ಈ 24 ಗಂಟೆಗಳ ಹ್ಯಾಕಥಾನ್ ನ ಫೈನಲ್ ನಲ್ಲಿ ನಗರದ ಅಗ್ರ ಐದು ವಿಜೇತರಿಗೆ ಇನ್ ಕ್ಯುಬೇಷನ್ ನೆರವು ಒದಗಿಸಲಾಯಿತು. ಆರಂಭಿಕ ಹಂತದಲ್ಲಿ 100 ತಂಡಗಳಿದ್ದು, ಅದರಲ್ಲಿ 28 ತಂಡಗಳು ಬೂಟ್ ಕ್ಯಾಂಪ್ ಗೆ ಆಯ್ಕೆ ಯಾದವು. ಅಂತಿಮ ಹಂತಕ್ಕೆ 10 ತಂಡಗಳ ಆಯ್ಕೆ ಮಾಡಲಾಗಿತ್ತು. ಕಡೆಗೆ 3 ತಂಡಗಳು ವಿಜೇತ ರಾಗಿ ಹೊರಹೊಮ್ಮಿದವು.
ಭಾಗವಹಿಸಿದ ತಂಡಗಳು ಈ ಕೆಳಗಿನ ರಸ್ತೆ ಸುರಕ್ಷತಾ ವಿಚಾರಗಳ ಕುರಿತ ಪರಿಕಲ್ಪನೆಗಳನ್ನು ಸಲ್ಲಿಸಿದರು:
- ರಸ್ತೆ ಸುರಕ್ಷತೆ ಕುರಿತ ಅರಿವು ಮತ್ತು ಶಿಕ್ಷಣ
- ರಸ್ತೆ ಸುರಕ್ಷತೆಗೆ ಸಮುದಾಯಗಳ ತೊಡಗಿಸಿಕೊಳ್ಳುವಿಕೆ
- ಶಾಲಾ ವಲಯದಲ್ಲಿ ರಸ್ತೆ ಸುರಕ್ಷತೆ
- ರಸ್ತೆ ಮೂಲಸೌಕರ್ಯ ಮತ್ತು ಮಾಲಿನ್ಯ
- ರಸ್ತೆ ಸುರಕ್ಷತೆಯಲ್ಲಿ ಐಓಟಿ/ ಐಸಿಟಿ
- ಸುಗಮ ಸಂಚಾರ ವ್ಯವಸ್ಥೆ
- ಎಲ್ಲರಿಗೂ ಸೇರಿರುವ ರಸ್ತೆ ರೂಪಿಸುವುದು
ಮುಂಬೈನಲ್ಲಿ ನಡೆದ ಹ್ಯಾಕಥಾನ್ ಯಶಸ್ಸಿನ ಆಧಾರದಲ್ಲಿ ಫೆಬ್ರವರಿ 14 ರಂದು ಬೆಂಗಳೂರಿನಲ್ಲಿ ಟೊಯೋಟಾ ಹ್ಯಾಕಥಾನ್ 2025 ನಡೆಯಲಿದೆ. 2024-25ನೇ ಶೈಕ್ಷಣಿಕ ವರ್ಷದಲ್ಲಿ ಟಿಕೆಎಂ ಪ್ರಮುಖ ನಗರಗಳ 300 ಸಂಸ್ಥೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ವಿಶೇಷವೆಂದರೆ ಈಗಾಗಲೇ 400ಕ್ಕೂ ಹೆಚ್ಚು ನವೀನ ಪರಿಕಲ್ಪನೆಗಳನ್ನು ಸಲ್ಲಿಸಲಾಗಿದೆ. ಸುಮಾರು 75 ತಂಡಗಳು ಕಾರ್ಯಕಾರಿ ಮೂಲಮಾದರಿಗಳನ್ನು ಪ್ರಸ್ತುತಪಡಿಸುವ ನಿರೀಕ್ಷೆಯಿದೆ. ಅಗ್ರ ಸ್ಥಾನ ಪಡೆಯು ತಂಡಗಳು ಇನ್ ಕ್ಯುಬೇಷನ್ ಬೆಂಬಲವನ್ನು ಪಡೆಯುತ್ತವೆ. ಈ ಯೋಜನೆಯು ಸುರಕ್ಷಿತ ಭವಿಷ್ಯವನ್ನು ಒದಗಿಸುವ ಟೊಯೋಟಾದ ಬದ್ಧತೆಯನ್ನು ಸಾರುತ್ತದೆ. ಜೊತೆಗೆ ಸಮಾಜದ ಸಮಸ್ಯೆಗಳಿಗೆ ನೂತನ ಪರಿಹಾರ ಕಂಡು ಹಿಡಿಯುವ ಅವಕಾಶವನ್ನು ಯುವಪೀಳಿಗೆಗೆ ನೀಡುತ್ತವೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ಸರ್ಕಾರದ ಓಬಿಸಿ ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಗೌರವಾನ್ವಿತ ಸಚಿವರಾದ ಶ್ರೀ ಅತುಲ್ ಮೊರೇಶ್ವರ ಸಾವೆ, "ಟೊಯೋಟಾ ಹ್ಯಾಕಥಾನ್ 2025 ಒಂದು ಮಹತ್ವದ ಯೋಜನೆ ಯಾಗಿದ್ದು, ಈ ಯೋಜನೆಯು ನಿಜವಾಗಿಯೂ ನಾವೀನ್ಯತೆ ಮತ್ತು ಸಹಯೋಗದ ಮನೋಭಾವ ವನ್ನು ಬೆಳೆಸುತ್ತದೆ. ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಮೂಲಕ ಮತ್ತು ರಸ್ತೆ ಸುರಕ್ಷತೆ ಸಮಸ್ಯೆಗಳನ್ನು ಪರಿಹರಿಸಲು ಅವರನ್ನು ಪ್ರೋತ್ಸಾಹಿಸುವ ಮೂಲಕ ಟೊಯೋಟಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದು ಮಾತ್ರವಲ್ಲದೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಈ ವಿದ್ಯಾರ್ಥಿಗಳು ನಮ್ಮ ರಸ್ತೆ ಸುರಕ್ಷತೆಯ ಕುರಿತಾ ದ ಶಾಶ್ವತ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವ ಪರಿಹಾರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡುವ ವಿಚಾರದಲ್ಲಿ ಮತ್ತು ವಿದ್ಯಾರ್ಥಿಗಲ ಐಡಿಯಾಗಳನ್ನು ಪ್ರಾಯೋಗಿಕ, ಜೀವ ಉಳಿಸುವ ಪರಿಹಾರಗಳಾಗಿ ಪರಿವರ್ತಿಸಲು ಬೇಕಾದ ಸಂಪನ್ಮೂಲಗಳು ಮತ್ತು ಮಾರ್ಗದರ್ಶನವನ್ನು ಒದಗಿಸುವ ಟೊಯೋಟಾದ ಬದ್ಧತೆ ಯನ್ನು ನೋಡುವುದು ಆನಂದದಾಯಕವಾಗಿದೆ. ಈ ಯೋಜನೆಯು ಸುರಕ್ಷಿತ, ಚುರುಕಾದ ಮತ್ತು ಹೆಚ್ಚು ಒಳಗೊಳ್ಳುವಿಕೆಯ ಭವಿಷ್ಯ ನಿರ್ಮಾಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿದರು.
ಮರಾಠವಾಡ ಇಂಡಸ್ಟ್ರೀಸ್ ಅಂಡ್ ಅಗ್ರಿಕಲ್ಚರ್ ಚೇಂಬರ್ ನ ಅಧ್ಯಕ್ಷರಾದ ಶ್ರೀ ಅರ್ಪ್ರಿತ್ ಸಾವೆ ಅವರು, "ಟೊಯೋಟಾ ಹ್ಯಾಕಥಾನ್ 2025 ಒಂದು ಮಹತ್ವದ ಯೋಜನೆಯಾಗಿದ್ದು, ನಮ್ಮ ಕಾಲದ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದಾದ ರಸ್ತೆ ಸುರಕ್ಷತೆಯನ್ನು ನಿಭಾಯಿಸಲು ಯುವಜನತೆಯನ್ನು ತೊಡಗಿಸಿಕೊಳ್ಳುವ ಮತ್ತು ಹೊಸ ಆಲೋಚನೆಗಳನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಸಮಾಜದಲ್ಲಿ ನಿಜವಾದ ಬದಲಾವಣೆಯನ್ನು ಉಂಟು ಮಾಡುವ ಪ್ರಾಯೋಗಿಕವಾದ, ಜೀವ ಉಳಿಸುವ ಪರಿಹಾರೋಪಾಯಗಳನ್ನು ಅಭಿವೃದ್ಧಿಪಡಿಸಲು ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳು