Drugs Case: ಶಿರಸಿಯಲ್ಲಿ ಅಕ್ರಮ ಗಾಂಜಾ ಸಾಗಾಟ; ಇಬ್ಬರು ಯುವಕರ ಬಂಧನ
ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3:00 ಗಂಟೆಗೆ ಬಂಧಿಸಿದ್ದಾರೆ. ಆರೋಪಿಗಳನ್ನು ವಿಕ್ರಮ್ ರಾಮಕೃಷ್ಣ ಭಟ್ (28) ಹಾಗೂ ಕಶ್ಯಪ್ ಮಂಜುನಾಥ ಹೆಗಡೆ (27) ಎಂದು ಗುರುತಿಸಲಾಗಿದ್ದು, ಇನ್ನೋವಾ ಕಾರ್‌ನಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಶಿರಸಿ ಕಡೆಗೆ ಸಾಗಿಸುತ್ತಿದ್ದರು


ಶಿರಸಿ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ (Drugs Case) ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3:00 ಗಂಟೆಗೆ ಬಂಧಿಸಿದ್ದಾರೆ. ಆರೋಪಿಗಳನ್ನು ವಿಕ್ರಮ್ ರಾಮಕೃಷ್ಣ ಭಟ್ (28) ಹಾಗೂ ಕಶ್ಯಪ್ ಮಂಜುನಾಥ ಹೆಗಡೆ (27) ಎಂದು ಗುರುತಿಸಲಾಗಿದ್ದು, ಇನ್ನೋವಾ ಕಾರ್‌ನಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಶಿರಸಿ ಕಡೆಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಿಡಮಾವಿನಕಟ್ಟೆ ಹತ್ತಿರ ಬರೂರ್ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿ ವಶಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ ಸುಮಾರು 4,500 ರೂ ಮೌಲ್ಯದ 80 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ 5 ಲಕ್ಷದ ಇನ್ನೋವಾ ಕಾರು (ನೋಂದಣಿ ಸಂಖ್ಯೆ ಕೆ.ಎ 09 -ಎಮ್ ಎ -0713) ಜಪ್ತಿಪಡಿಸಿಕೊಂಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(ii)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿರಸಿ ಉಪವಿಭಾಗದ ಉಪಾಧೀಕ್ಷಕರಾದ ಗೀತಾ ಪಾಟೀಲ, ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ್ ಎಮ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ಜಿ, ರಾಮ ಕುದ್ರಗಿ,ಮೀರಾಶಿ, ರವಿ, ದವಲ್ ಸಾಬ್ ಹಾಗೂ ಮಾರುತಿ ಗೌಡ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಗ್ರಾಮೀಣ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಎಂ ನಾರಾಯಣ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜೂನ್ 13 ರಂದು ಶಿರಸಿ ನಗರದ ನಿಲೇಕಣಿ ನಾಕಾದಲ್ಲಿ ವಾಹನ ತಪಾಸಣೆ ವೇಳೆ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಅನುರಾಗ (23) ಮತ್ತು ಸೋಹನ್ (23) ಎಂದು ಗುರುತಿಸಲಾಗಿದ್ದು, ಇವರು ಕುಮಟಾದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕೆ ತೆರಳುತ್ತಿದ್ದರು. ಪೊಲೀಸರು ಆರೋಪಿಗಳಿಂದ ಸುಮಾರು 5,000 ರೂ. ಮೌಲ್ಯದ 101 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ 10,000 ರೂ. ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ (ಕೆಎ-31-ಇಎ-2301) ವಶಪಡಿಸಿಕೊಂಡಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(ii)(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Drug mafia: ಬೆಂಗಳೂರಿನಲ್ಲಿ ಗಾಂಜಾಮಿಶ್ರಿತ ಜೆಲ್ಲಿ ಚಾಕೊಲೇಟ್ ಪತ್ತೆ, ಗ್ಯಾಂಗ್‌ನ ಇಬ್ಬರ ಬಂಧನ
ಶಿರಸಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ನೇತೃತ್ವದಲ್ಲಿ ಹನುಮಂತ ಕಬಾಡಿ, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ, ಅರುಣ ಲಮಾಣಿ, ಪ್ರವೀಣ ಎನ್. ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.