ಚಿಂತಾಮಣಿಯಲ್ಲಿ ದಾಖಲೆ ಬರೆದ ಮಾಜಿ ಸಚಿವ ಚೌಡರೆಡ್ಡಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ
ಕರ್ನಾಟಕ ರಾಜ್ಯದಲ್ಲೇ ಇದೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಮಟ್ಟದಲಿ ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿಗೊಳಿಸಿರುವುದು ಆಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಉನ್ನತ ಸ್ಥಾನ ಪಡೆದಿರುವ ಚಿಂತಾಮಣಿಯ ಚೌಡರೆಡ್ಡಿ ಅಭಿಮಾನಿ ಬಳಗ ಸಾವಿರಾರು ಜನರ ಜೀವ ಉಳಿಸುವಂತ ಸಾರ್ಥಕ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಚಾರ ವಾಗಿದೆ


ಒಂದೇ ದಿನದಲ್ಲಿ 3200 ಯೂನಿಟ್ ರಕ್ತ ಸಂಗ್ರಹದೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕಿರೀಟದ ಗರಿಮೆ
ಉನ್ನತ ಶಿಕ್ಷಣ ಸಚಿವರೂ ಸೇರಿ ನೂರಾರು ಗಣ್ಯರು ವಿದ್ಯಾರ್ಥಿಗಳು ನಾಗರೀಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ.
ಚಿಂತಾಮಣಿ: ಮಾಜಿ ಗೃಹಸಚಿವ ಎ.ಚೌಡರೆಡ್ಡಿ ಅವರ 88ನೇ ವರ್ಷದ ಜನ್ಮದಿನಾ ಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಮುಗಿ ದಿದ್ದು ಒಂದೇ ದಿನದಲ್ಲಿ ಒಂದೇ ಸ್ಥಳದಲ್ಲಿ 3200ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹದ ದಾಖಲೆಯೊಂದಿಗೆ ಈವರೆಗೆ ಇದ್ದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿದ್ದ ದಾಖಲೆ ಯನ್ನು ಮುರಿದು ಚಿಂತಾಮಣಿಗೆ ಅಗ್ರಸ್ಥಾನ ದೊರೆಯುವಂತೆ ಮಾಡಿದೆ. ನಗರದ ಕಿಶೋರ್ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಪ್ರಾರಂಭ ವಾದ ರಕ್ತದಾನ ಶಿಬಿರ ಸಂಜೆ 6ರವರೆಗೆ ಮುಂದುವರೆದಿತ್ತು. 7200 ಮಂದಿ ರಕ್ತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದು ಆ ಪೈಕಿ 3200 ಮಂದಿ ಸ್ವಯಂ ಪ್ರೇರಣೆಯಿಂದ ಬಂದು ರಕ್ತದಾನ ಮಾಡಿರುವುದು ಕರ್ನಾಟದ ಮಟ್ಟಿಗೆ ದಾಖಲೆಯೇ ಸರಿ.
ಇದನ್ನೂ ಓದಿ: Chikkaballapur News: ಕೃಷ್ಣಾ ನದಿ ನೀರು ಯೋಜನೆ ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆ
ಕರ್ನಾಟಕ ರಾಜ್ಯದಲ್ಲೇ ಇದೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಮಟ್ಟದಲಿ ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿಗೊಳಿಸಿರುವುದು ಆಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಉನ್ನತ ಸ್ಥಾನಪಡೆದಿರುವ ಚಿಂತಾಮಣಿಯ ಚೌಡರೆಡ್ಡಿ ಅಭಿಮಾನಿ ಬಳಗ ಸಾವಿರಾರು ಜನರ ಜೀವ ಉಳಿಸುವಂತ ಸಾರ್ಥಕ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಚಾರ ವಾಗಿದೆ.
ಮಾಜಿ ಸಚಿವ ಚೌಡರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಚಿಂತಾಮಣಿ ನಗರದ ಕಿಶೋರ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮೆಗಾ ಬ್ಲಡ್ ಡೊನೇಶನ್ ಕ್ಯಾಂಪ್‌ನಲ್ಲಿ ೩೨೦೦ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಚಿಂತಾಮಣಿಯ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸುವಂತಹ ಮಹೋನ್ನತ ಕಾರ್ಯ ನಡೆದಿದೆ.
*
ಈ ವೇಳೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್ ತಂದೆತಾಯಿ ದೇವರಿಗೆ ಸಮ. ಅವರು ತಮ್ಮ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡಿದ್ದಾರೆ ಎಂಬುದನ್ನು ಸ್ಮರಿಸಿದರೆ ಸಾಕು ಮಕ್ಕಳ ಪಾಲಿಗೆ ದೇವರಾಗುತ್ತಾರೆ.ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆಯಿರುವ ಬಗ್ಗೆ ಅಧ್ಯಕ್ಷ ಜಯರಾಮ್ ಅವರಿಂದ ಮಾಹಿತಿ ಪಡೆದೆ.ಅವತ್ತೇ ನಿರ್ಧಾರ ಮಾಡಿದಂತೆ ನಮ್ಮ ತಂದೆ ಯವರ 88ನೇ ಜನ್ಮದಿನಾಚರಣೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕ್ಷೇತ್ರದ ಜನತೆಯ ಬೆಂಬಲ,ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಮುಖಂಡರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಅಪಘಾತಗಳು ಆದಂ ತಹ ಸಮಯದಲ್ಲಿ ಸಕಾಲಕ್ಕೆ ರಕ್ತದೊರೆಯದೆ ಸಾವಾಗುವ ಸಂದರ್ಭಗಳು ಹೆಚ್ಚು.ಇದನ್ನು ತಪ್ಪಿಸಲು ಇಂತಹ ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು.ಚಿಂತಾಮಣಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ ಎಂದರು.
ಮಾಜಿ ಸಚಿವ ಚೌಡರೆಡ್ಡಿರವರ ಪುತ್ರರಾದ ಡಾ.ಎಂ.ಸಿ.ಬಾಲಾಜಿ, ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ರವರ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಬೆಳಗ್ಗೆ ೮ ಗಂಟೆಯಿAದಲೇ ರಕ್ತದಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದರು.ಎಲ್ಲರಿಗೂ ಕೂಡ ಅಚ್ಚುಕಟ್ಟಾಗಿ ನೀರು ನೆರಳು ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಕ್ತದಾನ ಮಾಡಲು ಬಂದ ಮಂದಿ ಸರತಿ ಸಾಲಿನಲ್ಲಿ ನಿಂತು ನಾಮುಂದು, ತಾ ಮುಂದು ಎಂದು ರಕ್ತದಾನ ಮಾಡುವ ಮೂಲಕ ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಿದ್ದ ದಾಖಲೆಯನ್ನು ಮುರಿದು ೩,೨೦೦ ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಸ್ವತ: ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಅಣ್ಣ ಡಾ.ಬಾಲಾಜಿ ಸಹ ರಕ್ತದಾನ ಮಾಡಿ ಗಮನ ಸೆಳೆದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿಲಾಗಿದ್ದ ಈ ರಕ್ತದಾನ ಶಿಬಿರದಲ್ಲಿ ೮ ರಕ್ತ ನಿಧಿ ಕೇಂದ್ರಗಳ ಸಿಬ್ಬಂದಿ ಭಾಗವಹಿಸಿದ್ದರು.
ಬೆಳಗ್ಗೆಯಿಂದಲೇ ಡಾ.ಎಂ.ಸಿ.ಸುಧಾಕರ್, ಡಾ.ಬಾಲಾಜಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧೀಕಾರಿ ಕುಶಾಲ್ ಚೌಕ್ಸೆ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಛೇರ್ಮನ್ ಎಂ.ಜಯ ರಾಮ್, ಡಾ.ಕೋಡಿರಂಗಪ್ಪ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಹಲವಾರು ಸಂಘ-ಸಂಸ್ಥೆಗಳ ಮುಖಂಡರು ಸಾರ್ವಜನಿಕರು ಇಂತಹ ಶಿಬಿರವನ್ನು ಆಯೋಜಿಸಿರುವ ಡಾ.ಸುಧಾಕರ್ ಮತ್ತು ಡಾ.ಬಾಲಾಜಿ ಅವರನ್ನು ಅಭಿನಂದಿಸಿದರು.