Australian Open: ಸಿನ್ನರ್ ಆಸ್ಟ್ರೇಲಿಯನ್ ಓಪನ್ ವಿನ್ನರ್
27 ವರ್ಷದ ಜ್ವೆರೇವ್‌ಗೆ ಇದು 3ನೇ ಗ್ರಾಂಡ್ ಸ್ಲಾಂ ಫೈನಲ್ ಆಗಿತ್ತು. ಈ ಹಿಂದಿನ 2 ಫೈನಲ್ಗಳಲ್ಲಿ (2020ರ ಯುಎಸ್ ಓಪನ್, 2024ರ ಫ್ರೆಂಚ್ ಓಪನ್) ಅವರು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮೂರನೇ ಬಾರಿಗೂ ಅವರು ರನ್ನರ್ ಅಪ್‌ಗೆ ತೃಪ್ತಿಪಟುವಂತಾಯಿತು.

Jannik Sinner

ಮೆಲ್ಬರ್ನ್: ಅಗ್ರ ಶ್ರೇಯಾಂಕಿತ, ಇಟಲಿಯ ಜನ್ನಿಕ್ ಸಿನ್ನರ್(Jannik Sinner) ಅವರು ಆಸ್ಟ್ರೇಲಿಯಾ ಓಪನ್(Australian Open) ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಸಿನ್ನರ್, 2ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್(Alexander Zverev) ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಗ್ರಾಂಡ್ ಸ್ಲಾಂ ಟ್ರೋಫಿಗೆ ಮುತ್ತಿಕ್ಕಿದರು.
23 ವರ್ಷದ ಸಿನ್ನರ್ ಆರ್ಭಟದ ಮುಂದೆ ಜ್ವೆರೇವ್ ಪರಾಕ್ರಮ ನಡೆಯಲಿಲ್ಲ. ಸೋಲಿನ ಹತಾಶೆಯಲ್ಲಿ ಜೆರೆವ್ ರ‍್ಯಾಕೆಟ್ ನೆಲಕ್ಕೆ ಬಡಿದು ತಮ್ಮ ಸಿಟ್ಟನ್ನು ಹೊರಹಾಕಿದರು. ಮೊದಲ ಸೆಟ್‌ನಲ್ಲಿ ಸಿನ್ನರ್ ಆರಾಮವಾಗಿ ಗೆದ್ದು ಮುನ್ನಡೆ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಟೈ ಬ್ರೇಕರ್ ತನಕ ಸಾಗಿದರೂ ಜ್ವೆರೇವ್‌ಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೂರನೇ ಸೆಟ್‌ನಲ್ಲಿ ಸಂಪೂರ್ಣ ಆತ್ಮವಿಶ್ವಾಸ ಕಳೆದುಕೊಂಡು ಶರಣಾದರು.
The Journey. The destination. The company.@janniksin • #AO2025 pic.twitter.com/9wRkw8Vtmm
— #AusOpen (@AustralianOpen) January 26, 2025
ಮತ್ತೆ ರನ್ನರ್ ಅಪ್‌ಗೆ ತೃಪ್ತಿಪಟ್ಟ ಜ್ವೆರೇವ್
27 ವರ್ಷದ ಜ್ವೆರೇವ್‌ಗೆ ಇದು 3ನೇ ಗ್ರಾಂಡ್ ಸ್ಲಾಂ ಫೈನಲ್ ಆಗಿತ್ತು. ಈ ಹಿಂದಿನ 2 ಫೈನಲ್ಗಳಲ್ಲಿ (2020ರ ಯುಎಸ್ ಓಪನ್, 2024ರ ಫ್ರೆಂಚ್ ಓಪನ್) ಅವರು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮೂರನೇ ಬಾರಿಗೂ ಅವರು ರನ್ನರ್ ಅಪ್‌ಗೆ ತೃಪ್ತಿಪಟುವಂತಾಯಿತು. ಜ್ವೆರೇವ್ ಅವರು ಸೆಮಿಫೈನಲ್ ಪಂದ್ಯದಲ್ಲಿ ಜೋಕೋವಿಕ್ ಗಾಯಗೊಂಡು ಅರ್ಧದಿಂದಲೇ ಪಂದ್ಯದಿಂದ ಹೊರ ನಡೆದ ಕಾರಣ ವಾಕ್ ಓವರ್ ಲಭಿಸಿ ಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ Australian Open: ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ಕೀಯ್ಸ್
Jannik Sinner has now won three straight hardcourt major titles 🏆🏆 🏆
— ESPN (@espn) January 26, 2025
New hardcourt king 🙌 pic.twitter.com/FpVISpjNhL
ನಡಾಲ್ ದಾಖಲೆ ಸರಿಗಟ್ಟಿದ ಸಿನ್ನರ್
ಸಿನ್ನರ್ ಈ ಪ್ರಶಸ್ತಿ ಗೆಲ್ಲುವ ಮೂಲಕ ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನ ಬಳಿಕ ಅದೇ ಟೂರ್ನಿಯಲ್ಲಿ ಮರುವರ್ಷವೂ ಪ್ರಶಸ್ತಿ ಗೆದ್ದ ದಿಗ್ಗಜ ರಾಫೆಲ್ ನಡಾಲ್ ಅವರ ದಾಖಲೆಯನ್ನು ಸರಿಗಟ್ಟಿದರು. ಅದರು ಕೂಡ 20 ವರ್ಷಗಳ ಬಳಿಕ. ರಾಫೆಲ್ ನಡಾಲ್ 2005 ಮತ್ತು 2006ರ ಫ್ರೆಂಚ್ ಓಪನ್ನಲ್ಲಿ ಈ ಸಾಧನೆ ಮಾಡಿದ್ದರು. ಸಿನ್ನರ್ ಕಳೆದ ವರ್ಷಾಂತ್ಯದಲ್ಲಿ ಯುಎಸ್ ಓಪನ್ ಕೂಡ ಗೆದ್ದಿದ್ದರು.