ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ananya Prasad: ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರದಲ್ಲಿ 3 ಸಾವಿರ ಕಿ.ಮೀ. ರೋವಿಂಗ್; ಜಿ.ಎಸ್.ಶಿವರುದ್ರಪ್ಪ ಮೊಮ್ಮಗಳು ಅನನ್ಯ ಪ್ರಸಾದ್‌ಗೆ ಸನ್ಮಾನ

Ananya Prasad: ಅಟ್ಲಾಂಟಿಕ್ ಮಹಾಸಾಗರವನ್ನ ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ರಾಷ್ಟ್ರಕವಿ ಜಿ.ಎಸ್‌ .ಶಿವರುದ್ರಪ್ಪ ಅವರ ಮೊಮ್ಮಗಳು, ಬೆಂಗಳೂರು ಮೂಲದ ಅನನ್ಯ ಪ್ರಸಾದ್ ಅವರ ಸಾಧನೆಯನ್ನು ಗೌರವಿಸಿ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಲಾಯಿತು.

ಜಿ.ಎಸ್.ಶಿವರುದ್ರಪ್ಪ ಮೊಮ್ಮಗಳು ಅನನ್ಯ ಪ್ರಸಾದ್‌ಗೆ ಸನ್ಮಾನ

ಅನನ್ಯ ಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು.

Profile Ramesh B Mar 15, 2025 8:50 PM

ಬೆಂಗಳೂರು: ಅಟ್ಲಾಂಟಿಕ್ ಮಹಾಸಾಗರವನ್ನ ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ರಾಷ್ಟ್ರಕವಿ ಜಿ.ಎಸ್‌ .ಶಿವರುದ್ರಪ್ಪ ಅವರ ಮೊಮ್ಮಗಳು, ಬೆಂಗಳೂರು ಮೂಲದ ಅನನ್ಯ ಪ್ರಸಾದ್ (Ananya Prasad) ಅವರ ಸಾಧನೆಯನ್ನು ಗೌರವಿಸಿ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಲಾಯಿತು. ಬೆಂಗಳೂರಿನ ಭಾರತ್ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತಿತರರು ಸನ್ಮಾನಿಸಿದರು. 34 ವರ್ಷದ ಬೆಂಗಳೂರಿನ ಮೂಲದವರಾದ ಅನನ್ಯ ಪ್ರಸಾದ್, ಸದ್ಯ​ ಇಂಗ್ಲೆಂಡ್​ನ ಶೆಫಿಲ್ಡ್​ನಲ್ಲಿ ನೆಲೆಸಿದ್ದಾರೆ. ಏನಿವರ ಹಿನ್ನೆಲೆ? ಇಲ್ಲಿದೆ ವಿವರ.

ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಅನನ್ಯ ಅಟ್ಲಾಂಟಿಕ್​ ಮಹಾಸಾಗರದಲ್ಲಿ ಏಕಾಂಗಿಯಾಗಿ 3 ಸಾವಿರ ಕಿ.ಮೀ. ದೂರವನ್ನು ಹಾಯಿದೋಣಿ ಮೂಲಕ ಕ್ರಮಿಸಿ ವಿಶ್ವಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದರು. ಬುದ್ದಿಮಾಂದ್ಯ ಮಕ್ಕಳಿಗೆ ನೆರವು ನೀಡುವ ಮತ್ತು ಭಾರತದಲ್ಲಿನ ಅವರ ಚಿಕ್ಕಪ್ಪನ ಅನಾಥಾಶ್ರಮಕ್ಕಾಗಿ ಹಣವನ್ನು ಸಂಗ್ರಹಿಸುವ ಸಲುವಾಗಿ ಅವರು ಈ ಸಾಹಸಕ್ಕೆ ಕೈ ಹಾಕಿದ್ದರು. ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಇಷ್ಟು ದೂರ ರೋವಿಂಗ್ ಮಾಡಿದ ವಿಶ್ವದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಅವರು ತನ್ನ ಪ್ರಯಾಣವನ್ನು 2024ರ ಡಿ. 11ರಂದು ಸ್ಪ್ಯಾನಿಷ್ ದ್ವೀಪದಿಂದ ಆರಂಭಿಸಿ 2025ರ ಫೆ. 1ರಂದು ಆಂಟಿಗುವಾಕ್ಕೆ ತಲುಪಿದ್ದರು.



ಈ ಸುದ್ದಿಯನ್ನೂ ಓದಿ: DK Shivakumar: 2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ರೆಡಿ ಮಾಡಿ: ಡಿಕೆಶಿ

ಅನನ್ಯ ಹೇಳಿದ್ದೇನು?

ʼʼಈ ಒಂದು ಸಾಹಸಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದ್ದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ಆದರೆ ಈ ಯಾತ್ರೆ ಅಷ್ಟು ಸುಲಭವಾಗಿರಲ್ಲ. ದೈಹಿಕವಾಗಿ ಸಿದ್ಧಗೊಳಿಸಲು 60ರಿಂದ 80 ದಿನಗಳವರೆಗೆ ಮಾನಸಿಕವಾಗಿ ತಯಾರಿ ನಡೆಸಿದೆ. ಇದು ದೊಡ್ಡ ಸವಾಲಾಗಿತ್ತು. ಪ್ರಯಾಣದ ಮೊದಲು ವಿಶೇಷವಾಗಿ ನಿರ್ಮಿಸಲಾದ 25 ಅಡಿ ಸಾಗರ ರೋಯಿಂಗ್ ಬೋಟ್‌ನ ಪ್ರತಿ ನಟ್ ಮತ್ತು ಬೋಲ್ಟ್ ಅನ್ನು ಮಾಸ್ಟರಿಂಗ್ ಮಾಡುತ್ತಿದ್ದೆ. ಎಲ್ಲ ತಯಾರಿ ಬಳಿಕ ನಾನು ಏಕಾಂಗಿಯಾಗಿ ಸಮದ್ರಕ್ಕಿಳಿದು ಗುರಿ ತಲುಪಿದೆʼʼ ಎಂದು ತಮ್ಮ ಸಾಹಸ ಕಥೆಯನ್ನು ಅನನ್ಯ ಪ್ರಸಾದ್ ನೆನಪಿಸಿಕೊಂಡಿದ್ದರು.

5 ವರ್ಷದ ಮಗುವಾಗಿದ್ದಾಗ ಪೋಷಕರೊಂದಿಗೆ ಇಂಗ್ಲೆಂಡ್‌ಗೆ ತೆರಳಿದ ಅವರು ಸಾಹಸವನ್ನೇ ಮೈಗೂಡಿಸಿಕೊಂಡಿದ್ದಾರೆ. ಅತ್ಯಂತ ಕ್ಲಿಷ್ಟದ ರೋಯಿಂಗ್‌ ಸ್ಪರ್ಧೆಗಳಲ್ಲಿ, ವಿವಿಧ ಸಾಹಸ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

ಈ ಹಿಂದೆ ಮುಖುಮಂತ್ರಿ ಸಿದ್ದರಾಮಯ್ಯ ಅವರೂ ಅನನ್ಯ ಅವರ ಅಪರೂಪದ ಸಾಧನೆಯನ್ನು ಕೊಂಡಾಡಿದ್ದರು. ʼʼಅಟ್ಲಾಂಟಿಕ್ ಮಹಾಸಾಗರವನ್ನ ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ದಾಖಲೆಗೈದ ನಮ್ಮ ಬೆಂಗಳೂರು ಮೂಲದ ಅನನ್ಯ ಪ್ರಸಾದ್ ಅವರ ಸಾಧನೆ ಇಡೀ ದೇಶ ಹೆಮ್ಮೆಪಡುವಂತದ್ದು. ಈ ಸಾಧನೆಯ ಶಿಖರವನ್ನೇರಿದ ಯುವತಿ ಕನ್ನಡದ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಎನ್ನುವುದು ಇನ್ನಷ್ಟು ಖುಷಿಯ ವಿಷಯ.

ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಚಾಮರಾಜನಗರ - ರಾಮಸಮುದ್ರದ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಅನನ್ಯ ಪ್ರಸಾದ್‌ಗೆ ಅಭಿನಂದನೆಗಳು. ಇಂತಹ ನಿಸ್ವಾರ್ಥ ಆಲೋಚನೆಗಳು ನಿಮ್ಮನ್ನು ಜೀವನದಲ್ಲಿ ಮತ್ತಷ್ಟು ಎತ್ತರೆತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.