ದುಬೈನಲ್ಲಿ ಭಾರತ vs ಪಾಕ್ ನಡುವೆ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು? ಅಂಕಿಅಂಶ ಏನು ಹೇಳುತ್ತೆ?
IND vs PAK Head to Head Record in Dubai: ಬಹುನಿರೀಕ್ಷಿತ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾನುವಾರ (ಫೆಬ್ರವರಿ 23) ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಕಳೆದ ಒಂದು ದಶಕದಿಂದ ಭಾರತ ತಂಡ, ಪಾಕಿಸ್ತಾನ ವಿರುದ್ಧದ ಪಂದ್ಯಗನಳನ್ನು ದುಬೈನಲ್ಲಿ ಆಡಿವೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳ ನಡುವಣ ಮುಖಾಮುಖಿ ದಾಖಲೆಯನ್ನು ಇಲ್ಲಿ ವಿವರಿಸಲಾಗಿದೆ.

ಶುಭಮನ್ ಗಿಲ್-ಬಾಬರ್ ಆಝಮ್

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅತಿ ದೊಡ್ಡ ಪಂದ್ಯ ಫೆಬ್ರವರಿ 23 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಕದನದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ಭಾರತ ಕಾದಾಟ ನಡೆಸಲಿವೆ. ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಆಗಿದೆ. ಆದರೂ ಮೊಹಮ್ಮದ್ ರಿಝ್ವಾನ್ ಪಡೆ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದ್ದು, ಭಾರತದ ವಿರುದ್ಧದ ಪಂದ್ಯ ಅವರಿಗೆ ಮಾಡು ಇಲ್ಲವೇ ಮಡಿಯಂತಾಗಿದೆ. ಟೀಮ್ ಇಂಡಿಯಾ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ.
ಭಾರತ ತಂಡ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿ ರನ್ನರ್ ಅಪ್ ಆಗಿತ್ತು. ಇದೀಗ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಇದಾದ ನಂತರ, ಈ ಟೂರ್ನಿಯನ್ನು 8 ವರ್ಷಗಳ ನಂತರ ಆಯೋಜಿಸಲಾಗುತ್ತಿದೆ. ಭಾರತ ತಂಡ ರಾಜಕೀಯ ಕಾರಣಗಳಿಂದ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿಲ್ಲ. ಆದ್ದರಿಂದ ಟೀಮ್ ಇಂಡಿಯಾದ ಪಂದ್ಯಗಳು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಂದ ಹಾಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ದುಬೈ ಸ್ಟೇಡಿಯಂನಲ್ಲಿನ ಮುಖಾಮುಖಿ ದಾಖಲೆಯನ್ನು ಇಲ್ಲಿ ವಿವರಿಸಲಾಗಿದೆ.
IND vs BAN: ಶುಭಮನ್ ಗಿಲ್ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!
ದುಬೈನಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿ ದಾಖಲೆ
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಒಟ್ಟು 28 ಪಂದ್ಯಗಳನ್ನು ಆಡಿದೆ. ಈ 28 ಪಂದ್ಯಗಳಲ್ಲಿ ಭಾರತ 19 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 50 ಓವರ್‌ಗಳ ಸ್ವರೂಪದಲ್ಲಿ ಉಭಯ ತಂಡಗಳ ಈ ದಾಖಲೆಯನ್ನು ನೋಡಿದರೆ, ಭಾರತ ತಂಡವು ಮೇಲುಗೈ ಸಾಧಿಸಿದೆ. ಇದರಿಂದಾಗಿ ಈ ಪಂದ್ಯವನ್ನು ಗೆಲ್ಲುವುದು ಪಾಕಿಸ್ತಾನ ತಂಡಕ್ಕೆ ಅಷ್ಟೊಂದು ಸುಲಭವಾಗಿಲ್ಲ.
IND vs BAN: ಕಳಪೆ ಕೀಪಿಂಗ್ ನಡೆಸಿದ ರಾಹುಲ್ ವಿರುದ್ಧ ಕೊಹ್ಲಿ ಆಕ್ರೋಶ; ವಿಡಿಯೊ ವೈರಲ್
ಭಾರತದ ವಿರುದ್ದ ಪಾಕ್ ಸೋತರೆ ಟೂರ್ನಿಯಿಂದ ಔಟ್
ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ಚಾಂಪಿಯನ್ಸ್ ಟ್ರೋಫಿ ನಾಕ್‌ಔಟ್ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ, ಭಾನುವಾರ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ೊಂದು ವೇಳೆ ಟೀಮ್ ಇಂಡಿಯಾ ಎದುರು ಸೋತರೆ, ಪಾಕಿಸ್ತಾನ ತಂಡದ ಸೆಮಿಫೈನಲ್ಸ್ ಹಾದಿ ಬಂದ್ ಆಗುತ್ತದೆ.
IND vs BAN: ʻಅಕ್ಷರ್ ಪಟೇಲ್‌ಗೆ ಹ್ಯಾಟ್ರಿಕ್ ಮಿಸ್ʼ-ಸುಲಭ ಕ್ಯಾಚ್ ಕೈಚೆಲ್ಲಿ ಕ್ಷಮೆ ಕೇಳಿದ ರೋಹಿತ್ ಶರ್ಮಾ!
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ
ಪಾಕಿಸ್ತಾನ: ಬಾಬರ್ ಆಝಮ್, ಫಖಾರ್ ಝಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹಿಮ್ ಅಶ್ರಫ್, ಖುಷ್ದಿಲ್ ಶಾ, ಸಲ್ಮಾನ್ ಅಲಿ ಅಘಾ (ಉಪನಾಯಕ), ಮೊಹಮ್ಮದ್ ರಿಝ್ವಾನ್ (ನಾಯಕ), ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ