IND vs BAN: ಕಳಪೆ ಕೀಪಿಂಗ್ ನಡೆಸಿದ ರಾಹುಲ್ ವಿರುದ್ಧ ಕೊಹ್ಲಿ ಆಕ್ರೋಶ; ವಿಡಿಯೊ ವೈರಲ್
ರವೀಂದ್ರ ಜಡೇಜಾ ಅವರ 5ನೇ ಓವರ್‌ನಲ್ಲಿ ಹೃದೋಯ್ ಮುಂದೆ ಬಂದು ಬಾರಿಸುವ ಯತ್ನದಲ್ಲಿ ವಿಫಲರಾದರು. ಈ ವೇಳೆ ಚೆಂಡು ಕೀಪರ್ ರಾಹುಲ್ ಬಳಿ ಸಾಗಿತು. ಸುಲಭವಾಗಿ ಹಿಡಿದು ಸ್ಟಂಪ್ಡ್ ಮಾಡುವ ಅವಕಾಶ ರಾಹುಲ್‌ಗೆ ಸಿಕ್ಕರೂ ಕಳಪೆ ಕೀಪಿಂಗ್ ಮೂಲಕ ಈ ಅವಕಾಶವನ್ನು ರಾಹುಲ್ ಕೈಚೆಲ್ಲಿದರು. ಇದರಿಂದ ಕೋಪಗೊಂಡ ಕೊಹ್ಲಿ, ಬೈಯುತ್ತಾ ತಮ್ಮ ಆಕ್ರೋಶ ಹೊರಹಾಕಿದರು.


ದುಬೈ: ಬಾಂಗ್ಲಾದೇಶ ವಿರುದ್ಧ ಭಾರತ(IND Vs BAN) ತಂಡ ಗೆದ್ದರೂ ಕೂಡ ಈ ಪಂದ್ಯದಲ್ಲಿ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿ ಕಳಪೆ ಫೀಲ್ಡಿಂಗ್ ಮೂಲಕ ಟೀಕೆಗೆ ಗುರಿಯಾಗಿದೆ. ಭಾರತವನ್ನು ಕಾಡಿದ ತೌಹಿದ್ ಹೃದೋಯ್ ಅವರ ಸುಲಭ ಸ್ಟಂಪ್ ಮಿಸ್ ಮಾಡಿದ ಕೀಪರ್ ಕೆ.ಎಲ್ ರಾಹುಲ್(KL Rahul's Poor Wicketkeeping) ವಿರುದ್ಧ ಸಹ ಆಟಗಾರ ವಿರಾಟ್ ಕೊಹ್ಲಿ(Virat Kohli) ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ವಿಡಿಯೊವೊಂದು ವೈರಲ್ ಆಗಿದೆ.
ರವೀಂದ್ರ ಜಡೇಜಾ ಅವರ 5ನೇ ಓವರ್‌ನಲ್ಲಿ ಹೃದೋಯ್ ಮುಂದೆ ಬಂದು ಬಾರಿಸುವ ಯತ್ನದಲ್ಲಿ ವಿಫಲರಾದರು. ಈ ವೇಳೆ ಚೆಂಡು ಕೀಪರ್ ರಾಹುಲ್ ಬಳಿ ಸಾಗಿತು. ಸುಲಭವಾಗಿ ಹಿಡಿದು ಸ್ಟಂಪ್ಡ್ ಮಾಡುವ ಅವಕಾಶ ರಾಹುಲ್‌ಗೆ ಸಿಕ್ಕರೂ ಕಳಪೆ ಕೀಪಿಂಗ್ ಮೂಲಕ ಈ ಅವಕಾಶವನ್ನು ರಾಹುಲ್ ಕೈಚೆಲ್ಲಿದರು. ಇದರಿಂದ ಕೋಪಗೊಂಡ ಕೊಹ್ಲಿ, ಬೈಯುತ್ತಾ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಹೃದೋಯ್ 25 ರನ್ ಬಾರಿಸಿದ್ದರು. ಈ ಜೀವದಾನದ ಲಾಭವೆತ್ತಿದ ಹೃದೋಯ್, ಕೊನೆಯ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿ ಭರ್ತಿ 100 ರನ್ ಬಾರಿಸಿದರು. ಒಂದೊಮ್ಮೆ ರಾಹುಲ್ ಅವರು ಸ್ಟಂಪ್ಡ್ ಮಾಡುತ್ತಿದ್ದರೆ ಬಾಂಗ್ಲಾ ಅಲ್ಪ ಮೊತ್ತಕ್ಕೆ ಆಲ್‌ಲೌಟ್ ಆಗುತ್ತಿತ್ತು. ಕೊಹ್ಲಿಯ ಆಕ್ರೋಶ ಕಂಡು ಕಾಮೆಂಟ್ರಿ ಮಾಡುತ್ತಿದ್ದ ಹರ್ಷ ಭೋಗ್ಲೆ ಅವರು ಇದು ಭಾರತ ತಂಡ ಮೂರನೇ ಫೀಲ್ಡಿಂಗ್ ಎಡವಟ್ಟು ಇದರಿಂದ ಕೊಹ್ಲಿ ಬೇಸರಗೊಂಡಂತೆ ಕಾಣುತ್ತಿದೆ ಎಂದರು.
Virat kohli angry on KL Rahul keeping#ViratKohli𓃵 #ICCChampionsTrophy2025 #BCCI #RohitSharma𓃵 #BabarAzam𓃵 #CT25 #Jaspritbumrah𓃵 #PakistanCricket #Trump #PakvsNz #INDvsPAK #PAKvNZ #NZvsPAK #NZvPAK #ShubmanGill #Dhoni #Bangladesh #IndvsBan #INDvBAN #BANvIND #BANvsIND pic.twitter.com/FnxQqnFB8t
— SOHAIB (@S0HAIB_7) February 20, 2025
ರೋಹಿತ್ ಶರ್ಮ ಅವರು ಕೂಡ ಈ ಪಂದ್ಯದಲ್ಲಿ ಸಲಭ ಕ್ಯಾಚೊಂದನ್ನು ಕೈ ಬಿಟ್ಟ ಕಾರಣ, ಅಕ್ಷರ್ ಪಟೇಲ್ ಅವರ ಹ್ಯಾಟ್ರಿಕ್ ವಿಕೆರಟ್ ಸಾಧನೆ ಮಿಸ್ ಆಯಿತು. ಒಂದೊಮ್ಮೆ ಕ್ಯಾಚ್ ಹಿಡಿಯುತ್ತಿದ್ದರೆ ಅಕ್ಷರ್ ಚಾಂಪಿಯನ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೊದಲನೇ ಹಾಗೂ ಒಟ್ಟಾರೆ 2ನೇ ಬೌಲರ್ ಎನ್ನುವ ದಾಖಲೆ ನಿರ್ಮಿಸುತ್ತಿದ್ದರು.
ವಿರಾಟ್ ಕೊಹ್ಲಿ(Virat Kohli) ಬ್ಯಾಟಿಂಗ್ ವೈಫಲ್ಯ ಕಂಡರೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ದಾಖಲೆಯೊಂದನ್ನು ಬರೆದರು. ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಪಡೆದ (ವಿಕೆಟ್ ಕೀಪರ್ ಹೊರತುಪಡಿಸಿ) ಆಟಗಾರರ ಪಟ್ಟಿಯಲ್ಲಿ ಮೊ.ಅಜರುದ್ದೀನ್ ದಾಖಲೆ ಸರಿಗಟ್ಟಿದರು. ಉಭಯ ಆಟಗಾರರು 156 ಕ್ಯಾಚ್ ಪಡೆದಿದ್ದಾರೆ. ಕೊಹ್ಲಿ ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಒಂದು ಕ್ಯಾಚ್ ಪಡೆದರೆ ಅಜರುದ್ದೀನ್ ಅವರನ್ನು ಹಿಂದಿಕ್ಕಲಿದ್ದಾರೆ. ಅತ್ಯಧಿಕ ಕ್ಯಾಚ್ ಪಡೆದ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ (218) ಹೆಸರಿನಲ್ಲಿದೆ. ದ್ವಿತೀಯ ಸ್ಥಾನದಲ್ಲಿ ರಿಕಿ ಪಾಂಟಿಂಗ್ (160) ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೆ ಐವರು ಸ್ಪಿನ್ನರ್‌ಗಳೇಕೆ? ಟೀಕಾಕಾರರಿಗೆ ರೋಹಿತ್ ಶರ್ಮಾ ತಿರುಗೇಟು!
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 229 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಬೀಸಿದ ಭಾರತ ಶುಭಮನ್ ಗಿಲ್ ಶತಕದ ಬಲದಿಂದ 46.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 231 ರನ್‌ಗಳನ್ನು ಗಳಿಸಿ ಗೆಲುವಿನ ದಡ ಸೇರಿತು. ಗಿಲ್ ಶತಕದ ಜೊತೆಗೆ ನಾಯಕ ರೋಹಿತ್ ಶರ್ಮಾ (41 ರನ್) ಹಾಗೂ ಕೆಎಲ್ ರಾಹುಲ್ (41*) ಅವರ ನಿರ್ಣಾಯಕ ರನ್‌ಗಳು ಕೂಡ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.