Champions Trophy: ಸ್ಪಿನ್ ಎದುರು ವಿರಾಟ್ ಕೊಹ್ಲಿಯ ವೈಫಲ್ಯಕ್ಕೆ ಕಾರಣ ತಿಳಿಸಿದ ಹರ್ಭಜನ್ ಸಿಂಗ್!
Harbhajan Singh on Virat Kohli's Failure: ಬಾಂಗ್ಲಾದೇಶ ವಿರುದ್ಧ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸ್ಪಿನ್ ಎದುರು ವೈಫಲ್ಯ ಅನುಭವಿಸಿದರು. ಈ ಹಿಂದೆಯೂ ಕೊಹ್ಲಿ ಸ್ಪಿನ್ನರ್‌ಗಳ ಎದುರು ವಿಫಲರಾಗಿದ್ದರು. ಇದಕ್ಕೆ ಕಾರಣವೇನೆಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ-ಹರ್ಭಜನ್ ಸಿಂಗ್

ದುಬೈ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ದದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ 38 ಎಸೆತಗಳಲ್ಲಿ 22 ರನ್‌ಗಳನ್ನು ಗಳಿಸಿ ಸ್ಪಿನ್ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಎದುರು ಮುಕ್ತವಾಗಿ ಬ್ಯಾಟ್ ಮಾಡಬೇಕೆಂದು ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ. ಕೊಹ್ಲಿ ವಿಫಲರಾದರೂ ಶುಭಮನ್ ಗಿಲ್ ಶತಕದ ಬಲದಿಂದ ಟೀಮ್ ಇಂಡಿಯಾ 6 ವಿಕೆಟ್‌ಗಳೀಮದ ಗೆಲುವು ಪಡೆದಿತ್ತು. ಆ ಮೂಲಕ ಈ ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಗುರುವಾರ ವಿರಾಟ್ ಕೊಹ್ಲಿ ಅಲ್ಪ ಇನಿಂಗ್ಸ್‌ನಲ್ಲಿ 10 ಡಾಟ್ ಎಸೆತಗಳನ್ನು ಆಡಿದ್ದರು. ಆದರೆ, ಅವರು ರಿಷದ್ ಹುಸೇನ್ ಎಸೆತದಲ್ಲಿ ಪಾಯಿಂಟ್‌ನಲ್ಲಿ ಕ್ಯಾಚ್ ಕೊಟ್ಟಿದ್ದರು. ಶುಭಮನ್ ಗಿಲ್ ಅಚರ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಸ್ಪಿನ್ನರ್‌ಗಳ ಎದುರು ಸ್ಟ್ರೈಕ್ ರೊಟೇಟ್ ಮಾಡುವಲ್ಲಿ ವಿಫಲರಾಗಿದ್ದರು. ಇದರಿಂದ ಹತಾಶರಾಗಿದ್ದ ಅವರುಮ ರಿಷದ್ ಹುಸೇನ್ ಎಸೆದಿದ್ದ ಆಫ್ ಸ್ಟಂಪ್ ಹೊರಗಡೆಯ ಎಸೆತದಲ್ಲಿ ಸ್ಕೈರ್ ಕಟ್ ಹೊಡೆಯಲು ಪ್ರಯತ್ನಿಸಿ ಕ್ಯಾಚ್ ಕೊಟ್ಟಿದ್ದರು.
IND vs BAN: ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ದಕ್ಕೆ ಅಕ್ಷರ್ ಪಟೇಲ್ ಹೇಳಿದ್ದಿದು!
ಇಂಡಿಯಾ ಟುಡೇ ಜೊತೆ ಮಾತನಾಡಿದ ಹರ್ಭಜನ್ ಸಿಂಗ್, "ಸ್ಲೋವರ್ ಬೌಲರ್‌ಗಳು ಹಾಗೂ ಲೆಗ್ ಸ್ಪಿನ್ನರ್‌ಗಳು ವಿರಾಟ್ ಕೊಹ್ಲಿಗೆ ಸ್ವಲ್ಪ ಅನಾನುಕೂಲ ಮಾಡಿದ್ದಾರೆಂದು ನಾನು ಬಲವಾಗಿ ನಂಬುತ್ತೇನೆ. ಕೊಹ್ಲಿ ತಾವು ಆಡಿದ್ದ ಡಾಟ್ ಎಸೆತಗಳನ್ನು ಸಿಂಗಲ್ ರನ್‌ಗೆ ಪರಿವರ್ತಿಸಬೇಕಾಗಿತ್ತು. ನೀವು ಫಾರ್ಮ್‌ನಲ್ಲಿ ಇಲ್ಲವಾದರೆ, ಕ್ರೀಸ್‌ನಲ್ಲಿ ನೀವು ಸ್ವಲ್ಪ ಸಮಯವನ್ನು ಕಳೆಯಬೇಕಾಗುತ್ತದೆ. ಆ ಮೂಲಕ ನೀವು ಕ್ರೀಸ್‌ನಲ್ಲಿ ನೆಲೆಯನ್ನು ಕಂಡುಕೊಳ್ಳಬೇಕಾಗುತ್ತದೆ. ವಿರಾಟ್ ಕೊಹ್ಲಿಗೆ ಆಗುತ್ತಿರುವುದು ಕೂಡ ಇದೇ ಸಮಸ್ಯೆ. ಒಮ್ಮೆ ನೀವು ಫಾರ್ಮ್ ಕಳೆದುಕೊಂಡರೆ, ನೀವು ಎಷ್ಟೇ ದೊಡ್ಡ ಆಟಗಾರ ಆಗಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ನೀವು ಏನು ಮಾಡುತ್ತೀರಿ? ಹಾಗೂ ನಿಮ್ಮ ಉದ್ದೇಶ ಏನೆಂಬುದರ ಮೇಲೆ ಇದೆಲ್ಲವೂ ನಿರ್ಧಾರವಾಗುತ್ತದೆ," ಎಂದು ತಿಳಿಸಿದ್ದಾರೆ.
"ಅವರು ಕ್ರೀಸ್‌ನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಹಿನ್ನಡೆ ಅನುಭವಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಅವರು ತಾನು ವಿರಾಟ್ ಕೊಹ್ಲಿಎಂದು ತಿಳಿದು ತನ್ನನ್ನು ತಾನೇ ಬೆಂಬಲಿಸಬೇಕಾಗುತ್ತದೆ. ತಾನು ಯಾರಿಗೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು. ಅವರು ಚಾಂಪಿಯನ್ ಆಟಗಾರ. ಇವತ್ತೇ ನಿವೃತ್ತಿ ಘೋಷಿಸಿದರೂ ಅವರು ದಂತಕತೆಯಾಗುತಾರೆ. ಅವರು ಭಾರತ ಕ್ರಿಕೆಟ್‌ನಲ್ಲಿ ಅಂಥಾ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಆಟವನ್ನು ಅವರು ಆನಂದಿಸಬೇಕಾದ ಅಗತ್ಯವಿದೆ. ಮನಸಿನಲ್ಲಿರುವ ಎಲ್ಲಾ ಸಂಗತಿಗಳನ್ನು ಹೊರಹಾಕಿ, ಅವರು ಮುಕ್ತವಾಗಿ ಬ್ಯಾಟ್ ಬೀಸಬೇಕಾಗಿದೆ," ಎಂದು ಸ್ಪಿನ್ ದಿಗ್ಗಜ ಸಲಹೆ ನೀಡಿದ್ದಾರೆ.
IND vs BAN: ಕಳಪೆ ಕೀಪಿಂಗ್ ನಡೆಸಿದ ರಾಹುಲ್ ವಿರುದ್ಧ ಕೊಹ್ಲಿ ಆಕ್ರೋಶ; ವಿಡಿಯೊ ವೈರಲ್
ವಿರಾಟ್ ಕೊಹ್ಲಿ ಇತ್ತೀಚೆಗೆ ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್ ರೇಟ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಸ್ಪಿನ್ನರ್‌ಗಳ ಎದುರು ಅವರು ಮಕಾಡೆ ಮಲಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಗಿದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಬಾರಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದರು. ಅವರು ಈ ಸರಣಿಯಲ್ಲಿ ಆಡಿದ್ದ 10 ಇನಿಂಗ್ಸ್‌ಗಳಿಂದ 184 ರನ್‌ಗಳಿಗೆ ಸೀಮಿತರಾಗಿದ್ದರು. ಇಂಗ್ಲೆಂಡ್ ವಿರುದ್ದ ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಕೊಹ್ಲಿ, ರಣಜಿ ಟ್ರೋಫಿ ಪಂದ್ಯದಲ್ಲಿಯೂ ವಿಫರಾಗಿದ್ದರು.