IND vs BAN: ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ದಕ್ಕೆ ಅಕ್ಷರ್ ಪಟೇಲ್ ಹೇಳಿದ್ದಿದು!
Axar patel on Rohit Sharma Catch Drop: ಗುರುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರು ಹ್ಯಾಟ್ರಿಕ್ ವಿಕೆಟ್ ಅವಕಾಶವನ್ನು ಕಳೆದುಕೊಂಡಿದ್ದರು.

ರೋಹಿತ್ ಶರ್ಮಾ ಕ್ಯಾಚ್ ಡ್ರಾಪ್ ಬಗ್ಗೆ ಅಕ್ಷರ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.

ದುಬೈ: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಸ್ಲಿಪ್‌ನಲ್ಲಿ ಸುಲಭವಾದ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು. ಆ ಮೂಲಕ ಅಕ್ಷರ್ ಪಟೇಲ್ ತಮ್ಮ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಸ್ಪಿನ್ ಆಲ್‌ರೌಂಡರ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್ ಪಂದ್ಯದಲ್ಲಿ ಇದೆಲ್ಲವೂ ಸಾಮಾನ್ಯ. ಮೊದಲಿಗೆ ರೋಹಿತ್ ಶರ್ಮಾ ಕ್ಯಾಚ್ ಪಡೆದುಕೊಂಡಿದ್ದರೆಂದು ಭಾವಿಸಿದ್ದೆ. ಆದರೆ, ಅವರು ಕ್ಯಾಚ್ ಅನ್ನು ಕೈ ಚೆಲ್ಲಿದ್ದರು ಎಂದು ಅಕ್ಷರ್ ತಿಳಿಸಿದ್ದಾರೆ.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಆರಂಭಿಕ ಎರಡು ವಿಕೆಟ್‌ಗಳನ್ನು ಕಿತ್ತು ಬಾಂಗ್ಲಾಗೆ ಶಾಕ್ ನೀಡಿದ್ದರು. ನಂತರ ಎಂಟನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಅರ್ಷದೀಪ್ ಸಿಂಗ್, ತಂಝಿದ್ ಹಸನ್ ಮತ್ತು ಮುಷ್ಫಿಕರ್ ರಹೀಮ್ ಅವರ ವಿಕೆಟ್‌ಗಳನ್ನು ಕಿತ್ತಿದ್ದರು. ಆ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆಯಲು ಅಕ್ಷರ್ ಪಟೇಲ್‌ಗೆ ಅವಕಾಶವಿತ್ತು.
IND vs BAN: ಶುಭಮನ್ ಗಿಲ್ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!
ಹ್ಯಾಟ್ರಿಕ್ ಬಾಲ್‌ನಲ್ಲಿ ಜಾಕರ್ ಅಲಿ ಬ್ಯಾಟ್‌ನಲ್ಲಿ ಎಡ್ಜ್ ಮಾಡಿಕೊಂಡಿದ್ದರು ಹಾಗೂ ಚೆಂಡು ಮೊದಲನೇ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಕಡೆ ಹೋಗುತ್ತಿತ್ತು. ಆದರೆ, ಟೀಮ್ ಇಂಡಿಯಾ ನಾಯಕ ಸುಲಭವಾಗಿ ಹಿಡಿಯಬಹುದಾದ ಕ್ಯಾಚ್ ಅನ್ನು ಕೈ ಚೆಲ್ಲಿದರು. ಆ ಮೂಲಕ ಅಕ್ಷರ್ ಪಟೇಲ್ ಹ್ಯಾಟ್ರಿಕ್ ವಿಕೆಡ್ ಪಡೆಯಲು ಸಾಧ್ಯವಾಗಿರಲಿಲ್ಲ. ಈ ವೇಳೆ ಕ್ಯಾಚ್ ಕೈಚೆಲ್ಲಿದ್ದರಿಂದ ರೋಹಿತ್ ಶರ್ಮಾ ನೆಲಕ್ಕೆ ಕೈನಲ್ಲಿ ಗುದ್ದುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಹಾಗೂ ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿದ್ದರು.
Axar Patel reacts to Rohit Sharma’s dropped catch during his hat-trick attempt! 😬🏏🤯#AxarPatel #RohitSharma #INDvBAN #ChampionsTrophy2025
— Mursaleen wafai (@MursaleenWafai) February 20, 2025
pic.twitter.com/y9QnKQjhhY
ರೋಹಿತ್ ಶರ್ಮಾ ಕ್ಯಾಚ್ ಡ್ರಾಪ್ ಮಾಡಿದ ಬಗ್ಗೆ ಅಕ್ಷರ್ ಪಟೇಲ್ ಪ್ರತಿಕ್ರಿಯೆ
ಇನಿಂಗ್ಸ್ ವಿರಾಮದ ವೇಳೆ ಮಾತನಾಡಿದ ಅಕ್ಷರ್ ಪಟೇಲ್, "ಈ ತರಹದ ಸಂಗತಿಗಳು ನಡೆಯುತ್ತವೆ. ತಂಝಿದ್ ಹಸನ್ ಔಟ್ ಆಗಿರುವುದು ನನಗೆ ಗೊತ್ತಿರಲಿಲ್ಲ ಆದರೆ, ಕೆಎಲ್ ರಾಹುಲ್ ಅಪೀಲ್ ಮಾಡಿದ್ದರು ಮತ್ತು ಇದು ಔಟ್ ಆಗಿತ್ತು. ನಂತರ ನಾನು ಎರಡನೇ ವಿಕೆಟ್ ಪಡೆದುಕೊಂಡೆ. ನಂತರ ಮೂರನೇ ವಿಕೆಟ್‌ಗೆ ಹೋದಾಗ, ಬ್ಯಾಟ್‌ಗೆ ಚೆಂಡು ತಗುಲಿತ್ತು. ಈ ವೇಳೆ ನಾನು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದೇನೆಂದು ಭಾವಿಸಿದ್ದೆ. ಇದು ಅತ್ಯಂತ ಘಟನಾತ್ಮಕ ಅಂತ್ಯವಾಗಿತ್ತು. ನಾನು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದೇನೆಂದು ಸಂಭ್ರಮಿಸುತ್ತಿದ್ದೆ ಹಾಗೂ ರೋಹಿತ್ ಶರ್ಮಾ ಕ್ಯಾಚ್ ಡ್ರಾಪ್ ಮಾಡಿದ್ದನ್ನು ಗಮನಿಸಿದೆ. ಇದಕ್ಕೆ ನಾನು ಪ್ರತಿಕ್ರಿಯೆ ನೀಡಿದೆ, ಹಿಂದಕ್ಕೆ ಮರಳಿದ್ದೆ. ಇದು ಆಟದ ಒಂದು ಭಾಗವಾಗಿದೆ. ಬ್ಯಾಟ್ ಮಾಡಲು ಇಲ್ಲಿ ಸುಲಭವಾಗಿತ್ತು ಮತ್ತು ಈ ಗುರಿಯನ್ನು ನಾವು ಸುಲಭವಾಗಿ ಚೇಸ್ ಮಾಡುತ್ತೇವೆ. ಇದು ನಿಧಾನಗತಿಯ ವಿಕೆಟ್ ಆಗಿದ್ದು, ಚೆಂಡು ಒಮ್ಮೆ ಹಳೆಯದಾದರೆ ಇಲ್ಲಿನ ವಿಕೆಟ್‌ನಲ್ಲಿ ಸುಲಭವಾಗಿ ಬ್ಯಾಟ್ ಮಾಡಬಹುದು. ಎರಡನೇ ಇನಿಂಗ್ಸ್‌ನಲ್ಲಿಯೂ ಕಂಡೀಷನ್ಸ್ ನಿಧಾನಗತಿಯಿಂದ ಇರಲಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ಕೊಡುಗೆ ನೀಡುವುದು ನನ್ನ ಕೆಲಸ. ತಂಡ ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ನನಗೆ ತುಂಬಾ ಸಂತೋಷವಿದೆ," ಎಂದು ಹೇಳಿದ್ದಾರೆ.
IND vs BAN: 11000 ಒಡಿಐ ರನ್ ಪೂರ್ಣಗೊಳಿಸಿ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ!
ಜೀವದಾನ ಪಡದು ಜಾಕಿರ್ ಅಲಿ ಅರ್ಧಶತಕ
ರೋಹಿತ್ ಶರ್ಮಾ ಅವರಿಂದ ಜೀವದಾನ ಪಡೆದಿದ್ದ ಜಾಕಿರ್ ಅಲಿ ನಿರ್ಣಾಯಕ ಅರ್ಧಶತಕವನ್ನು ಸಿಡಿಸಿದರು ಹಾಗೂ ತೌಹಿದ್ ಹೃದಯ್ ಅವರ ಜೊತೆ 154 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ ಕಮ್‌ಬ್ಯಾಕ್ ಮಾಡಲು ಜಾಕಿರ್ ಅಲಿ ಸಹಾಯ ಮಾಡಿದ್ದರು. ಅಂತಿಮವಾಗಿ ಬಾಂಗ್ಲಾ 228 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಗಳಿಸಿ ಗೆಲುವು ಪಡೆದಿತ್ತು.