ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿದ ಚಾಲಕನ ಬಂಧನ
Drunk Audi Driver: ಜುಲೈ 9 ರಂದು ಬೆಳಗಿನ ಜಾವ 1:45 ರ ಸುಮಾರಿಗೆ ವಸಂತ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಚಾಲಕ ಮದ್ಯ ಸೇವಿಸಿರುವುದು ದೃಢಪಟ್ಟಿಎ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ನವದೆಹಲಿ: ದೆಹಲಿಯ ವಸಂತ್ ವಿಹಾರ್‌ನ ಫುಟ್‌ಪಾತ್‌ನಲ್ಲಿ ಕುಡಿದ ಮತ್ತಿನಲ್ಲಿ ಆಡಿ ಕಾರು ಚಲಾಯಿಸಿ 5 ಜನರ ಸಾವಿಗೆ ಕಾರಣವಾಗಿದ್ದ ಚಾಲಕನನ್ನು ಬಂಧಿಸಲಾಗಿದೆ. ಬಂಧಿತ ಚಾಲಕನನ್ನು ದ್ವಾರಕಾ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಉತ್ಸವ್ ಶೇಖರ್ (40) ಎಂದು ಗುರುತಿಸಲಾಗಿದೆ. ಬಲಿಯಾದವರನ್ನು ರಾಜಸ್ಥಾನದ ನಿವಾಸಿಗಳಾದ ಲಾಧಿ (40), ಆಕೆಯ ಎಂಟು ವರ್ಷದ ಮಗಳು ಬಿಮ್ಲಾ, ಪತಿ ಸಬಾಮಿ ಅಲಿಯಾಸ್ ಚಿರ್ಮಾ (45), ರಾಮ್ ಚಂದರ್ (45) ಮತ್ತು ಅವರ ಪತ್ನಿ ನಾರಾಯಣಿ (35) ಎಂದು ಗುರುತಿಸಲಾಗಿದೆ.
ಜುಲೈ 9 ರಂದು ಬೆಳಗಿನ ಜಾವ 1:45 ರ ಸುಮಾರಿಗೆ ವಸಂತ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಚಾಲಕ ಮದ್ಯ ಸೇವಿಸಿರುವುದು ದೃಢಪಟ್ಟಿಎ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಆರಂಭಿಕ ತನಿಖೆಯ ಪ್ರಕಾರ, ಶಿವಾ ಕ್ಯಾಂಪ್ ಹೊರಗೆ ನಿದ್ರಿಸುತ್ತಿದ್ದಾಗ ಬಿಳಿ ಆಡಿ ಕಾರು ಬಲಿಪಶುಗಳ ಮೇಲೆ ಹರಿದಿದೆ. ನಂತರ ಕಾರು ಸ್ವಲ್ಪ ದೂರ ಚಲಿಸಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಮೇ ತಿಂಗಳಲ್ಲಿ, 19 ವರ್ಷದ ಯುವಕನೊಬ್ಬ ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಪಶ್ಚಿಮ ದೆಹಲಿಯಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿಯ ಕೊಳೆಗೇರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಏಪ್ರಿಲ್‌ನಲ್ಲಿ ನಗರದ ಪಹರ್‌ಗಂಜ್ ಪ್ರದೇಶದಲ್ಲಿ ನಿರ್ಲಕ್ಷ್ಯದ ಚಾಲನೆಯ ಮತ್ತೊಂದು ಪ್ರಕರಣದಲ್ಲಿ, ಎರಡು ವರ್ಷದ ಬಾಲಕಿಯೊಬ್ಬಳು ತನ್ನ 15 ವರ್ಷದ ನೆರೆಹೊರೆಯವನು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು.