ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ranji Trophy: ರಣಜಿಯಲ್ಲಿ ದಾಖಲೆ ಬರೆದ ಹರ್ಷ್ ದುಬೆ

Harsh Dubey: ಫೈನಲ್‌ ಪಂದ್ಯದಲ್ಲಿ ಕೇರಳ ತಂಡ ಸೋಲಿನ ಭೀತಿಗೆ ಸಿಲುಕಿದೆ. ವಿದರ್ಭ ನೀಡಿದ ಮೊದಲ ಇನಿಂಗ್ಸ್‌ 379 ರನ್‌ ಬೆನ್ನಟ್ಟಿದ ಕೇರಳ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 342 ರನ್‌ಗೆ ಆಲೌಟ್‌ ಆಗುವ ಮೂಲಕ 37ರನ್‌ ಹಿನ್ನಡೆ ಅನುಭವಿಸಿದೆ.

ರಣಜಿಯಲ್ಲಿ ದಾಖಲೆ ಬರೆದ ಹರ್ಷ್ ದುಬೆ

Profile Abhilash BC Feb 28, 2025 5:52 PM

ನಾಗ್ಪುರ: ವಿದರ್ಭ ತಂಡದ ಆಲ್‌ರೌಂಡರ್ ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆ(Harsh Dubey) ರಣಜಿ ಟ್ರೋಫಿಯಲ್ಲಿ(Ranji Trophy) ನೂತನ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ. ಕೇರಳ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ ಕೀಳುವ ಮೂಲಕ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಬಿಹಾರ ತಂಡದ ಅಶುತೋಷ್ ಅಮಾನ್ ಹೆಸರಿನಲ್ಲಿತ್ತು. ಅವರು 2018-19ನೇ ಆವೃತ್ತಿಯಲ್ಲಿ 68 ವಿಕೆಟ್‌ ಕಿತ್ತಿದ್ದರು. ಹರ್ಷ್ ದುಬೆ 69* ವಿಕೆಟ್‌ ಕಿತ್ತು ಅಗ್ರಸ್ಥಾನಕ್ಕೇರಿದ್ದಾರೆ.

ಸೋಲಿನ ಭೀತಿಯಲ್ಲಿ ಕೇರಳ

ಫೈನಲ್‌ ಪಂದ್ಯದಲ್ಲಿ ಕೇರಳ ತಂಡ ಸೋಲಿನ ಭೀತಿಗೆ ಸಿಲುಕಿದೆ. ವಿದರ್ಭ ನೀಡಿದ ಮೊದಲ ಇನಿಂಗ್ಸ್‌ 379 ರನ್‌ ಬೆನ್ನಟ್ಟಿದ ಕೇರಳ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 342 ರನ್‌ಗೆ ಆಲೌಟ್‌ ಆಗುವ ಮೂಲಕ 37ರನ್‌ ಹಿನ್ನಡೆ ಅನುಭವಿಸಿದೆ.

3 ವಿಕೆಟ್‌ಗಳಿಗೆ 131 ರನ್ ಗಳಿಸಿದ್ದಲ್ಲಿಂದ ಮೂರನೇ ದಿನವಾದ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿದ ಕೇರಳ ಇಂದು ದಿನದಾಟದ ಅತ್ಯಂಕ್ಕೆ ಆಲೌಟ್‌ ಆಯಿತು. 66 ರನ್‌ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕೇರಳ ತಂಡವನ್ನು ಪ್ರತಿನಿಧಿಸುತ್ತಿರುವ ನಾಗಪುರ ಮೂಲದ ಆದಿತ್ಯ ಸರವಟೆ 79 ರನ್‌ ಬಾರಿಸಿದರೆ, 7 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ನಾಯಕ ಸಚಿನ್ ಬೇಬಿ 98 ರನ್‌ ಬಾರಿಸಿ ಕೇವಲ 2 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಆರ್‌ಸಿಬಿಯ ಮಾಜಿ ಆಟಗಾರ ಮೊಹಮ್ಮದ್ ಅಜರುದ್ಧೀನ್(34), ಜಲಜ್ ಸಕ್ಸೇನಾ(28) ಕೆಲ ಕ್ರಮಾಂಕದಲ್ಲಿ ಸಣ್ಣ ಬ್ಯಾಟಿಂಗ್‌ ಹೋರಾಟ ಸಂಘಟಿಸಿ ತಂಡ ಮೊತ್ತವನ್ನು 300ರ ಗಡಿ ದಾಟಿಸಿದರು.

ಇದನ್ನೂ ಓದಿ IPL 2025: ಏಳು ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ

ವಿದರ್ಭ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ದರ್ಶನ್ ನಾಯ್ಕಂಡೆ(52 ಕ್ಕೆ 3), ಹರ್ಷ್ ದುಬೆ(88 ಕ್ಕೆ 3) ಮತ್ತು ಪಾರ್ಥ್‌ ರೇಖಾಡೆ(65 ಕ್ಕೆ 3) ವಿಕೆಟ್‌ ಕಿತ್ತು ಕೇರಳದ ಕುಸಿತಕ್ಕೆ ಕಾರಣರಾದರು. ವಿದರ್ಭ ಪರ ಮೊದಲ ಇನಿಂಗ್ಸ್‌ನಲ್ಲಿ ದಾನಿಶ್ ಮಾಲೆವರ್ ಶತಕ(153) ಮತ್ತು ಕರುಣ್ ನಾಯರ್(86) ಅರ್ಧಶತಕ ಗಳಿಸಿದ್ದರು.

ರಣಜಿ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್‌ ಸಾಧನೆ

ಹರ್ಷ್‌ ದುಬೆ-69* ವಿಕೆಟ್‌(2024-25)

ಅಶುತೋಷ್ ಅಮನ್- 68 ವಿಕೆಟ್‌(2018-19)

ಜಯದೇವ್ ಉನದ್ಕತ್-67 ವಿಕೆಟ್‌(2019-20)

ಬಿಶನ್ ಸಿಂಗ್ ಬೇಡಿ-64 ವಿಕೆಟ್‌(1974-75)

ದೊಡ್ಡ ಗಣೇಶ್-62 ವಿಕೆಟ್‌(1998-99)

ಕನ್ವಾಲ್ಜಿತ್ ಸಿಂಗ್-62 ವಿಕೆಟ್(1999-00)