ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

PAK vs NZ: ಪಾಕಿಸ್ತಾನ ಟಿ20ಐ ತಂಡದಿಂದ ಬಾಬರ್‌ ಆಝಮ್‌, ಮೊಹಮ್ಮದ್‌ ರಿಝ್ವಾನ್‌ ಔಟ್‌!

ನ್ಯೂಜಿಲೆಂಡ್‌ ಪ್ರವಾಸದ ಟಿ20ಐ ಸರಣಿಯ ಪಾಕಿಸ್ತಾನ ತಂಡದಲ್ಲಿ ಬಾಬರ್‌ ಆಝಮ್‌ ಹಾಗೂ ಮೊಹಮ್ಮದ್‌ ರಿಝ್ವಾನ್‌ ತಮ್ಮ-ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಈ ಇಬ್ಬರೂ ಏಕದಿನ ತಂಡದಲ್ಲಿ ಮುಂದುವರಿದಿದ್ದಾರೆ. ಟಿ20ಐ ತಂಡವನ್ನು ಸಲ್ಮಾನ್‌ ಅಘಾ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಏಕದಿನ ತಂಡವನ್ನು ನಿರೀಕ್ಷಿತವಾಗಿ ಮೊಹಮ್ಮದ್‌ ರಿಝ್ವಾನ್‌ ಅವರೇ ನಿರ್ವಹಿಸಲಿದ್ದಾರೆ.

ಪಾಕ್‌ ಟಿ20ಐ ತಂಡದಿಂದ ಹೊರಬಿದ್ದ ಬಾಬರ್‌ ಆಝಮ್‌!

ಪಾಕಿಸ್ತಾನ ಒಡಿಐ, ಟಿ20 ತಂಡಗಳ ಪ್ರಕಟ.

Profile Ramesh Kote Mar 4, 2025 5:53 PM

ನವದೆಹಲಿ: ನ್ಯೂಜಿಲೆಂಡ್‌ ಪ್ರವಾಸದ ಟಿ20ಐ ಹಾಗೂ ಒಡಿಐ ಸರಣಿಗಳಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಬವಿಸಿದ್ದ ಬಾಬರ್‌ ಆಝಮ್‌ ಮತ್ತು ಮೊಹಮ್ಮದ್‌ ರಿಝ್ವಾನ್‌ ಅವರನ್ನು ಟಿ20ಐ ತಂಡದಿಂದ ಕೈ ಬಿಡಲಾಗಿದೆ. ಪಾಕಿಸ್ತಾನ ಟಿ20 ತಂಡಕ್ಕೆ ಸಲ್ಮಾನ್‌ ಅಘಾ ಅವರನ್ನು ನಾಯಕ ಹಾಗೂ ಶದಾಬ್‌ ಖಾನ್‌ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಶದಾಬ್‌ ಖಾನ್‌ ರಾಷ್ಟ್ರೀಯ ತಂಡದಲ್ಲಿ ಆಡಿರಲಿಲ್ಲ.

2025ರ ಸೆಪ್ಟಂಬರ್‌ನಲ್ಲಿ ನಡೆಯುವ ಟಿ20 ಏಷ್ಯಾ ಕಪ್‌ ಹಾಗೂ 2026ರಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗಳ ನಿಮಿತ್ತ ಪಾಕಿಸ್ತಾನ ಟಿ20 ತಂಡಕ್ಕೆ ನಾಯಕನನ್ನಾಗಿ ಸಲ್ಮಾನ್‌ ಅಘಾ ಹಾಗೂ ಶದಾಬ್‌ ಖಾನ್‌ಗೆ ಕ್ರಮವಾಗಿ ನಾಯಕತ್ವ ಮತ್ತು ಉಪ ನಾಯಕತ್ವವನ್ನು ನೀಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ಭಾರತ vs ಪಾಕಿಸ್ತಾನ ನಡುವೆ ಇನ್ನೂ 3 ಪಂದ್ಯಗಳಿವೆ! ಹೇಗೆ ಗೊತ್ತೆ?

ಅಬ್ದುಲ್‌ ಸಮದ್‌, ಹಸನ್‌ ನವಾಝ್‌ ಹಾಗೂ ಮೊಹಮ್ಮದ್‌ ಅಲಿ ಸೇರಿ ಹೊಸ ಮುಖಗಳಿಗೆ ತಂಡದಲ್ಲಿ ಸ್ಥಾನವನ್ನುನ ಕಲ್ಪಿಸಲಾಗಿದೆ. ಚಾಂಪಿಯನ್ಸ್‌ ಕಪ್‌ ಟೂರ್ನಿಯ ಪಂದ್ಯದಲ್ಲಿ ಸಮದ್‌ 115 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್‌ ಗಳಿಸಿದ್ದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು 142.47ರ ಸ್ಟ್ರೈಕ್‌ ರೇಟ್‌ನಲ್ಲಿ 312 ರನ್‌ಗಳನ್ನು ಕಲೆ ಹಾಕಿದ್ದರು.

ಪಾಕಿಸ್ತಾನ ಏಕದಿನ ತಂಡಕ್ಕೆ ರಿಝ್ವಾನ್‌ ನಾಯಕ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ವೈಫಲ್ಯ ಅನುಭವಿಸಿದರೂ ಮೊಹಮ್ಮದ್‌ ರಿಝ್ವಾನ್‌ ಅವರನ್ನು ಏಕದಿನ ತಂಡಕ್ಕೆ ನಾಯಕನನ್ನಾಗಿ ಉಳಿಸಿಕೊಳ್ಳಲಾಗಿದೆ. ಬಲ ಪಾದದ ಗಾಯದಿಂದ ಗುಣಮುಖರಾಗುತ್ತಿರುವ ಸೈಮ್‌ ಆಯುಬ್‌ ಅವರನ್ನು ಎರಡು ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ ಟೌನ್‌ ಟೆಸ್ಟ್‌ನಲ್ಲಿ ಸೈಯಮ್‌ ಆಯುಬ್‌ ಗಾಯಕ್ಕೆ ತುತ್ತಾಗಿದ್ದರು.

ಮಾರ್ಚ್‌ 16 ರಂದು ಆರಂಭವಾಗುವ ಟಿ20 ಸರಣಿಯ ಮೊದಲನೇ ಪಂದ್ಯ ಕ್ರೈಸ್ಟ್‌ಚರ್ಚ್‌, ಡುನೆಡಿನ್‌, ಆಂಕ್ಲೆಂಡ್‌, ಮೌಂಟ್‌ಮೌಂಗಾನುಯಿ ಹಾಗೂ ವೆಲ್ಲಿಂಗ್ಟನ್‌ ಕ್ರಮವಾಗಿ ಇನ್ನುಳಿದ ಪಂದ್ಯಗಳು ನಡೆಯಲಿವೆ. ಇನ್ನೂ ಏಕದಿನ ಸರಣಿಯ ಪಂದ್ಯಗಳು ಕ್ರಮವಾಗಿ ಮಾರ್ಚ್‌ 29, ಏಪ್ರಿಲ್‌ 2 ಹಾಗೂ ಏಪ್ರಿಲ್‌ 5 ರಂದು ನಡೆಯಲಿವೆ. ಈ ಮೂರೂ ಪಂದ್ಯಗಳು ಕ್ರಮವಾಗಿ ಕ್ರಮವಾಗಿ ನೇಪಿಯರ್‌, ಹ್ಯಾಮಿಲ್ಟನ್‌ ಹಾಗೂ ಮೌಂಟ್‌ ಮೌಗಾನುಯಿನಲ್ಲಿ ನಡೆಯಲಿವೆ.



ನ್ಯೂಜಿಲೆಂಡ್‌ ಪ್ರವಾಸದ ಪಾಕಿಸ್ತಾನ ತಂಡಗಳು

ಪಾಕಿಸ್ತಾನ ಟಿ20ಐ ತಂಡ: ಸಲ್ಮಾನ್‌ ಅಘಾ (ನಾಯಕ), ಶದಾಬ್‌ ಖಾನ್‌ (ಉಪ ನಾಯಕ), ಅಬ್ದುಲ್‌ ಸಮದ್‌, ಅಬ್ರಾರ್‌ ಅಹ್ಮದ್‌, ಹ್ಯಾರಿ ರೌಫ್‌, ಹಸನ್‌ ನವಾಝ್‌, ಜಹಂದಾದ್‌ ಖಾನ್‌, ಖುಷ್ದಿಲ್‌ ಶಾ, ಮೊಹಮ್ಮದ್‌ ಅಬ್ಬಾಸ್‌ ಅಫ್ರಿದಿ, ಮೊಹಮ್ಮದ್‌ ಅಲಿ, ಮೊಹಮ್ಮದ್‌ ಹ್ಯಾರಿಸ್‌, ಮೊಹಮ್ಮದ್‌ ಇರ್ಫಾನ್‌ ಖಾನ್‌ಮ ಒಮಿರ್‌ ಬಿನ್‌ ಯೂಸಪ್‌, ಶಾಹೀನ್‌ ಶಾ ಅಫ್ರಿದಿ, ಸೂಫಿಯನ್‌ ಮಾಕಿಮ್‌ ಹಾಗೂ ಉಸ್ಮಾನ್‌ ಖಾನ್‌

ಪಾಕಿಸ್ತಾನ ಒಡಿಐ ತಂಡ: ಮೊಹಮ್ಮದ್‌ ರಿಝ್ವಾನ್‌ (ನಾಯಕ), ಸಲ್ಮಾನ್‌ ಅಘಾ (ಉಪ ನಾಯಕ), ಅಬ್ದುಲ್‌ ಶಫಿಕ್‌, ಅಬ್ರಾರ್‌ ಅಹ್ಮದ್‌, ಆಕಿಫ್‌ ಜಾವೇದ್‌, ಬಾಬರ್‌ ಆಝಮ್‌, ಫಾಹೀಮ್‌ ಅಶ್ರಫ್‌, ಇಮಾಮ್‌ ಉಲ್‌ ಹಕ್‌, ಖುಷ್ದಿಲ್‌ ಶಾ, ಮೊಹಮ್ಮದ್‌ ಅಲಿ, ಮೊಹಮ್ಮದ್‌ ವಸೀಮ್‌, ಮುಹಮ್ಮದ್‌ ಇರ್ಫಾನ್‌ ಖಾನ್‌, ನಸೀಮ್‌ ಶಾ, ಸೂಫಿಯನ್‌ ಮಾಕಿಮ್‌, ತಯಬ್ ತಾಹಿರ್‌