ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shehbaz Sharif: ಆರ್ಥಿಕತೆ ಹಾಗೂ ಅಭಿವೃದ್ದಿಯಲ್ಲಿ ಭಾರತವನ್ನು ಸೋಲಿಸದಿದ್ದರೆ.... ಸವಾಲೆಸೆದ ಪಾಕ್‌ ಪಿಎಂ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ ಪಾಕಿಸ್ತಾನವು ಪ್ರಗತಿಯಲ್ಲಿ ಭಾರತವನ್ನು ಮೀರಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ ಎಂದು ಘೋಷಿಸಿದ್ದಾರೆ. ರ್‍ಯಾಲಿಯಲ್ಲಿ ಭಾಗವಹಿಸಿದ್ದ ಅವರು ಅತೀ ಉತ್ಸುಕರಾಗಿದ್ದರು. ವೇದಿಕೆಯ ಮೇಜು ಬಡಿಯುತ್ತಾ ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಮೀರಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಓಪನ್‌ ಚಾಲೆಂಜ್‌ ಹಾಕಿದ ಪಾಕ್‌ ಪ್ರಧಾನಿ

ಶೆಹಬಾಜ್ ಷರೀಫ್‌

Profile Vishakha Bhat Feb 25, 2025 4:26 PM

ನವದೆಹಲಿ: ಪಾಕಿಸ್ತಾನದ ಪ್ರಧಾನಿ(Pakistan PM) ಶೆಹಬಾಜ್ ಷರೀಫ್‌(Shehbaz Sharif) ವಿವಾದತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಎಲ್ಲಡೆ ವೈರಲ್‌ ಆಗುತ್ತಿದೆ. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು ಪಾಕಿಸ್ತಾನವು ಪ್ರಗತಿಯಲ್ಲಿ ಭಾರತವನ್ನು ಮೀರಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ ಎಂದು ಘೋಷಿಸಿದ್ದಾರೆ. ಡೇರಾ ಘಾಜಿ ಖಾನ್‌ನಲ್ಲಿ ನೆರೆದಿದ್ದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಅವರು ,ಪಾಕಿಸ್ತಾನವನ್ನು ಪ್ರಸ್ತುತ ಸವಾಲುಗಳಿಂದ ಹೊರತಂದು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ರ್‍ಯಾಲಿಯಲ್ಲಿ ಭಾಗವಹಿಸಿದ್ದ ಅವರು ಅತೀ ಉತ್ಸುಕರಾಗಿದ್ದರು. ವೇದಿಕೆಯ ಮೇಜು ಬಡಿಯುತ್ತಾ ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಮೀರಿಸುತ್ತಿದೆ. ನಾವು ಪಾಕಿಸ್ತಾನವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ ಮತ್ತು ಭಾರತಕ್ಕಿಂತ ಮುಂದೆ ಸಾಗುತ್ತೇವೆ. ಪಾಕಿಸ್ತಾನವನ್ನು ಸುಧಾರಿಸಲು ನಾವು ಹಗಲಿರುಳು ಶ್ರಮಿಸುತ್ತೇವೆ. ಪಾಕಿಸ್ತಾನ ಭಾರತಕ್ಕಿಂತ ದೊಡ್ಡ ರಾಷ್ಟ್ರವಾಗುವ ದಿನ ದೂರವಿಲ್ಲ ಎಂದು ಅವರು ಹೇಳಿದ್ದಾರೆ.



ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ ಎಂದು ಜನರಿಗೆ ಭರವಸೆ ನೀಡಿದ ಷರೀಫ್, "ಪಾಕಿಸ್ತಾನದ ಪರಿಸ್ಥಿತಿ ಸುಧಾರಿಸಲು ನಾವು ಹಗಲಿರುಳು ಕೆಲಸ ಮಾಡುತ್ತೇವೆ. ದೇವರು ಯಾವಾಗಲೂ ಪಾಕಿಸ್ತಾನವನ್ನು ಆಶೀರ್ವದಿಸಿದ್ದಾನೆ ಎಂದು ಹೇಳಿದ್ದಾರೆ. ತಮ್ಮ ನಾಯಕತ್ವದಲ್ಲಿ ಪಾಕಿಸ್ತಾನ ಸಾಲಗಳ ಮೇಲೆ ಅವಲಂಬಿತವಾಗುವ ಬದಲು ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವತ್ತ ಗಮನಹರಿಸುತ್ತದೆ. ಇದರೊಂದಿಗೆ ದೇಶದ ಇತ್ತೀಚಿನ ಹಣದುಬ್ಬರ ಇಳಿಕೆಯತ್ತ ಗಮನಸೆಳೆದ ಅವರು, ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಶೇ.40ರಷ್ಟಿದ್ದ ಹಣದುಬ್ಬರ ಇಂದು ಕೇವಲ ಶೇ. 2ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಶೆಹಬಾಜ್ ಷರೀಫ್‌, ತಮ್ಮ ಹಿರಿಯ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಪ್ರಮಾಣ ಮಾಡುತ್ತಾ, ನಾನು ನವಾಜ್ ಷರೀಫ್ ಅವರ ಅಭಿಮಾನಿ, ಅವರ ಅನುಯಾಯಿ. ಇಂದು, ಅವರ ಜೀವನದ ಮೇಲೆ ಪ್ರಮಾಣ ಮಾಡುತ್ತೇನೆ, ನನಗೆ ಶಕ್ತಿ ಮತ್ತು ಇಚ್ಛಾಶಕ್ತಿ ಇರುವವರೆಗೂ, ನಾವೆಲ್ಲರೂ ಒಟ್ಟಾಗಿ ಪಾಕಿಸ್ತಾನವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಮತ್ತು ಭಾರತವನ್ನು ಸೋಲಿಸಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Ceasefire Violation: ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

ಸದ್ಯ ಶೆಹಬಾಜ್ ಷರೀಫ್‌ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವರು ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಎಕ್ಸ್‌ನಲ್ಲಿ ಹಲವಾರು ಬಳಕೆದಾರರು ಪಾಕಿಸ್ತಾನಿ ಪ್ರಧಾನಿಯನ್ನು ಅಪಹಾಸ್ಯ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶೆಹಬಾಜ್ ಷರೀಫ್‌ ಕಾಶ್ಮೀರ ಸಮಸ್ಯೆಯ ಕುರಿತು ಮಾತಾನಾಡಿದ್ದು, ಭಾರತದ ಜೊತೆ ಶಾಂತಿಯುತವಾಗಿ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದರು.