ಜಸ್‌ಪ್ರೀತ್ ಬುಮ್ರಾ ಅಲ್ಲವೇ ಅಲ್ಲ! ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಆರಿಸಿದ ಸಂಜಯ್ ಬಾಂಗರ್
Sanjay Bangar backs Shubman Gill: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಅಂದ ಹಾಗೆ ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ಸ್ಥಾನವನ್ನು ಶುಭಮನ್ ಗಿಲ್ ತುಂಬಲಿದ್ದಾರೆಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಆರಿಸಿದ ಸಂಜಯ್ ಬಾಂಗರ್!

ನವದೆಹಲಿ: ರೋಹಿತ್ ಶರ್ಮಾ ಬಳಿಕ ಭಾರತ ತಂಡದ ಮುಂದಿನ ನಾಯಕ ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಇನ್ನೂ ಎಷ್ಟು ದಿನಗಳ ಕಾಲ ರೋಹಿತ್ ನಾಯಕನಾಗಿ ಮುಂದುವರಿಯಲಿದ್ದಾರೆಂದು ಗೊತ್ತಿಲ್ಲ. ಇದೀಗ ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಮಾಜಿ ಬ್ಯಾಟಿಂಗ್ ಸಂಜಯ್ ಬಾಂಗರ್ ಆರಿಸಿದ್ದಾರೆ. ಆದರೆ, ಅವರು ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಿ ಅಚ್ಚರಿ ಮೂಡಿಸಿದ್ದಾರೆ.
ಅಂದ ಹಾಗೆ ಭಾರತ ಟೆಸ್ಟ್ ತಂಡಕ್ಕೆ ಮುಂದಿನ ನಾಯಕನನ್ನಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಆರಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯ ಏನೆಂಬುದು ಗೌಪ್ಯವಾಗಿದೆ. ಭಾರತ ತಂಡದ ಮಾಜಿ ಬ್ಯಾಟಿಂಗ್ ಸಂಜಯ್ ಬಾಂಗರ್ ಅವರು, ದೀರ್ಘಾವಧಿ ಭಾರತ ತಂಡಕ್ಕೆ ನಾಯಕನ್ನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
IND vs NZ: ರೋಹಿತ್ ಶರ್ಮಾ ಔಟ್? ಕಿವೀಸ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ನಿರೀಕ್ಷೆ!
ಜಿಯೋ ಹಾಟ್‌ಸ್ಟಾರ್ ಸಂಭಾಷಣೆಯಲ್ಲಿ ಮಾತನಾಡಿದ ಸಂಜಯ್ ಬಾಂಗರ್, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ದೀರ್ಘಾವಧಿಗೆ ಭಾರತ ತಂಡದ ನಾಯಕನಾಗಿ ದೊಡ್ಡ ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆ ಇದೆ. ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಅವರ ದಾಖಲೆ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ದ 46 ರನ್ ಗಳಿಸಿದ ಗಿಲ್ ಬ್ಯಾಟಿಂಗ್ ಅದ್ಭುತವಾಗಿತ್ತು ಎಂದು ಅವರು ಹೊಗಳಿದ್ದಾರೆ.
ಶುಭಮನ್ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸಂಜಯ್ ಬಾಂಗರ್
"ಮುಂದಿನ ವರ್ಷಗಳಲ್ಲಿ ಭಾರತ ತಂಡದ ನಾಯಕನಾಗಿ ಶುಭಮನ್ ಗಿಲ್ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆಂಬುದು ಸ್ಪಷ್ಟವಾಗಿದೆ. ಅವರ ಅಡಿಪಾಯ ನಿಜಕ್ಕೂ ಶಕ್ತಿಯುತವಾಗಿದೆ. ಕಳೆದ ಒಂದು ಅಥವಾ ಒಂದೂವರೆ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅವರು ತೋರಿದ ಅಸಾಧಾರಣ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಅವರ ಏಕದಿನ ಕ್ರಿಕೆಟ್‌ನ ಅಂಕಿಅಂಶಗಳು ಅತ್ಯುತ್ತಮವಾಗಿವೆ," ಎಂದು ಸಂಜಯ್ ಬಾಂಗರ್ ತಿಳಿಸಿದ್ದಾರೆ.
Champions Trophy: ಮ್ಯಾಚ್ ವಿನ್ನಿಂಗ್ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!
"ಅವರು ಹೊಡೆದಿದ್ದ ಸ್ಟ್ರೈಟ್ ಡ್ರೈವ್ ಮತ್ತು ಆನ್ ಡ್ರೈವ್ ಅನ್ನು ನೀವು ನೋಡಬಹುದು. ಇದು ನಿಜಕ್ಕೂ ಕಠಿಣವಾಗಿದೆ. ಮಿಡ್ ಆಫ್ ಹಾಗೂ ಮಿಡ್ ಆನ್ ಫೀಲ್ಡರ್‌ಗಳು ಇದ್ದರೂ ಅವರು ಚೆಂಡನ್ನು ಬಲವಾಗಿ ಹೊಡೆದಿದ್ದಾರೆ. ಈ ರೀತಿ ನೀವು ಚೆಂಡನ್ನು ಬಲವಾಗಿ ಹೊಡೆಯುವುದು ಅಷ್ಟೊಂದು ಸುಲಭವಲ್ಲ. ಇಲ್ಲಿ ಚೆಂಡಿಗೆ ಟೈಮ್ ಮಾಡುವುದು ತುಂಬಾ ಮುಖ್ಯವಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.
ಭರ್ಜರಿ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್
ಏಕದಿನ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎರಡು ಪಂದ್ಯಗಳಿಂದ 147 ರನ್‌ಗಳನ್ನು ಕಲೆ ಹಾಕಿದ್ದಾರೆ. ಬಾಂಗ್ಲಾದೇಶ ವಿರುದ್ಧ ಭರ್ಜರಿ ಶತಕವನ್ನು ಸಿಡಿಸಿದ್ದರು. ಅಂದ ಹಾಗೆ ಕಳೆದ ಐದು ಏಕದಿನ ಇನಿಂಗ್ಸ್‌ಗಳಿಂದ ಎರಡು ಶತಕಗಳಿಂದ 406 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಬಾಬರ್ ಆಝಮ್ ಅವರನ್ನು ಶುಭಮನ್ ಗಿಲ್ ಹಿಂದಿಕ್ಕಿದ್ದರು.