ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಹೆಬ್ಬೆರಳಿನ ಗಾಯ; ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಇಂಗ್ಲೆಂಡ್‌ ವೇಗಿ

ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ಉಳಿದಿರುವ ಎರಡು ಲೀಗ್‌ ಪಂದ್ಯದಲ್ಲಿ ಗೆಲ್ಲಲೇ ಬೇಕು. ಕಳೆದ ಆಸೀಸ್‌ ವಿರುದ್ಧದ ಪಂದ್ಯದಲ್ಲಿ 350 ಪ್ಲಸ್‌ ರನ್‌ ಬಾರಿಸಿದರೂ ಪಂದ್ಯವನ್ನು ಗೆಲ್ಲಲಾಗದ ಇಂಗ್ಲೆಂಡ್‌ಗೆ ಇದೀಗ ಪ್ರಮುಖ ವೇಗಿ ತಂಡದಿಂದ ಹೊರಬಿದ್ದಿರುವುದು ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ.

Brydon Carse: ಆಫ್ಘನ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಗಾಯದ ಪೆಟ್ಟು

Profile Abhilash BC Feb 25, 2025 3:29 PM

ಕರಾಚಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಇಂಗ್ಲೆಂಡ್‌ ತಂಡಕ್ಕೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಅಫಘಾನಿಸ್ತಾನ ವಿರುದ್ಧದ ಮಸ್ಟ್‌ ವಿನ್‌ ಪಂದ್ಯಕ್ಕೂ ಮುನ್ನವೇ ತಂಡದ ಸ್ಟಾರ್‌ ವೇಗಿ ಬ್ರೈಡನ್ ಕಾರ್ಸ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಸ್ಪಿನ್ನರ್‌ ರೆಹಾನ್ ಅಹ್ಮದ್ ಬದಲಿ ಆಟಗಾರನಾಗಿ ತಂಡ ಸೇರಿದ್ದಾರೆ.

'ಇಂಗ್ಲೆಂಡ್ ಬೌಲಿಂಗ್ ಆಲ್‌ರೌಂಡರ್ ಬ್ರೈಡನ್ ಕಾರ್ಸ್ ಎಡಗಾಲಿನ ಹೆಬ್ಬೆರಳಿನ ಗಾಯದಿಂದಾಗಿ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಸ್ಪಿನ್ನರ್ ರೆಹಾನ್ ಅಹ್ಮದ್ ತಂಡಕ್ಕೆ ಬಂದಿರುವುದು ಸ್ಪಿನ್ ದಾಳಿಯನ್ನು ಬಲಪಡಿಸಿದೆ. ಈಗಾಗಲೇ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆದಿಲ್ ರಶೀದ್ ಅವರಿಗೆ ಬೆಂಬಲ ಸಿಕ್ಕಂತಾಗಿದೆ' ಎಂದು ಇಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.



ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ಉಳಿದಿರುವ ಎರಡು ಲೀಗ್‌ ಪಂದ್ಯದಲ್ಲಿ ಗೆಲ್ಲಲೇ ಬೇಕು. ಕಳೆದ ಆಸೀಸ್‌ ವಿರುದ್ಧದ ಪಂದ್ಯದಲ್ಲಿ 350 ಪ್ಲಸ್‌ ರನ್‌ ಬಾರಿಸಿದರೂ ಪಂದ್ಯವನ್ನು ಗೆಲ್ಲಲಾಗದ ಇಂಗ್ಲೆಂಡ್‌ಗೆ ಇದೀಗ ಪ್ರಮುಖ ವೇಗಿ ತಂಡದಿಂದ ಹೊರಬಿದ್ದಿರುವುದು ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ. ತಂಡ ಸೇರಿರುವ ರೆಹಾನ್ ಅಹ್ಮದ್ ಇಂಗ್ಲೆಂಡ್ ಪರ ಐದು ಏಕದಿನ ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ.

ಇಂಗ್ಲೆಂಡ್‌ ಪರಿಷ್ಕೃತ ತಂಡ

ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್, ರೆಹಾನ್ ಅಹ್ಮದ್.