Kshetrapathi: ಮಹಾಶಿವರಾತ್ರಿಗೆ ಕಲರ್ಸ್ ಕನ್ನಡದಲ್ಲಿ ಬರ್ತಾ ಇದ್ದಾನೆ ʻಕ್ಷೇತ್ರಪತಿʼ!
ಶ್ರೀಕಾಂತ ಕಟಗಿ ನಿರ್ದೇಶನದ ಕ್ಷೇತ್ರಪತಿ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಸಿನಿಮಾ,ಯಾರೆಲ್ಲ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿದ್ದೀರೋ ಅಂತವರಿಗೆ ಇದೀಗ ಕಲರ್ಸ್ ಕನ್ನಡ ಗುಡ್ ನ್ಯೂಸ್ ಒಂದನ್ನು ನೀಡಿದೆ. ಫೆಬ್ರವರಿ 26 ಶಿವರಾತ್ರಿಯಂದು ಮಧ್ಯಾಹ್ನ ಎರಡು ಗಂಟೆಗೆ ಈ ಸಿನಿಮಾ ಪ್ರಸಾರವಾಗಲಿದ್ದು, ಚಿತ್ರರಸಿಕರು ನೋಡಿ ಆನಂದಿಸಲೇ ಬೇಕಾದ ಸಿನಿಮಾ ಕ್ಷೇತ್ರಪತಿ.


ಬೆಂಗಳೂರು: ರೈತರನ್ನು, ಕೇಂದ್ರವಾಗಿಟ್ಟುಕೊಂಡು ಹಲವು ಸಿನಿಮಾ ಗಳು ತೆರೆಕಂಡಿವೆ. ಆದರೆ ರೈತ ಪರ ಸಿನಿಮಾವಾಗಿ ಬಹಳಷ್ಟು ಹತ್ತಿರವಾದ ಚಿತ್ರ ಎಂದರೆ ಅದು ಕ್ಷೇತ್ರಪತಿ (Kshetrapathi) ಯಾರೆಲ್ಲ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿದ್ದೀರೋ ಅಂತವರಿಗೆ ಇದೀಗ ಕಲರ್ಸ್ ಕನ್ನಡ ಗುಡ್ ನ್ಯೂಸ್ ಒಂದನ್ನು ನೀಡಿದೆ. ಫೆಬ್ರವರಿ 26 ಶಿವರಾತ್ರಿಯಂದು ಮಧ್ಯಾಹ್ನ ಎರಡು ಗಂಟೆಗೆ ಈ ಸಿನಿಮಾ ಪ್ರಸಾರವಾಗಲಿದ್ದು, ಚಿತ್ರ ರಸಿಕರು ನೋಡಿ ಆನಂದಿಸಲೇ ಬೇಕಾದ ಸಿನಿಮಾ ಕ್ಷೇತ್ರಪತಿ. ಶ್ರೀಕಾಂತ ಕಟಗಿ ನಿರ್ದೇಶನದ ಈ ಸಿನಿಮಾ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದು ನಮ್ಮ ಮಣ್ಣಿನ ಹೆಮ್ಮೆಯ ಚಿತ್ರ ಎಂದು ಕನ್ನಡ ಚಿತ್ರ ರಸಿಕರು ಹೆಮ್ಮೆಯಿಂದ ಬೀಗಬಹುದಾದ ಚಿತ್ರ ಕ್ಷೇತ್ರಪತಿ.
ಉತ್ತರ ಕರ್ನಾಟಕ ಶೈಲಿಯ ಈ ಈ ಚಿತ್ರ ದೇಶದ ಬೆನ್ನೆಲುಬು ಎನ್ನುವ ರೈತನ ಇಂದಿನ ಸ್ಥಿತಿಗತಿ ಹೇಗಿದೆ? ಎನ್ನುವುದರ ಕಥಾ ಹಂದರವನ್ನು ಒಳಗೊಂಡ ಸಿನಿಮಾ. ಇದು ನಟ ನವೀನ್ ಶಂಕರ್ ಗೆ ಹೊಸ ಇಮೇಜ್ ಗಳಿಸಿ ಕೊಟ್ಟ ಚಿತ್ರ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್ ಶಂಕರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ನವೀನ್ ಶಂಕರ್ ಖಡಕ್ ಆಗೇ ಡೈಲಾಗ್ ಹೊಡೆದಿದ್ದಾರೆ. ಒಂದು ಗಂಭೀರ ಮತ್ತು ಜನಪರ ಅಂಶಗಳನ್ನು ಮನರಂಜನಾತ್ಮಕವಾಗಿ ಬೆರೆಸಿ ಜನರ ಮನ ಗೆದ್ದಿದೆ. ಕೆ ಜಿ ಎಫ್ ಖ್ಯಾತಿಯ ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್ ತಾರಾಗಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದೆ.
ಶ್ರೀಕಾಂತ ಕಟಗಿ ನಿರ್ದೇಶನದ ಕ್ಷೇತ್ರಪತಿ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಸಿನಿಮಾ. ರೈತ ನಮ್ಮ ದೇಶದ ಬೆನ್ನೆಲು ಲಿವರ್, ಕಿಡ್ನಿ, ಜಠರ ಎಂದೆಲ್ಲ ಹೇಳಿ ನಮ್ಮನ್ನು ಉಬ್ಬಿಸಿ ಬಿಟ್ಟಿದ್ದಾರೆ. ಆದರೆ ನಮ ಗೇನು ಬೇಕು ಎಂದು ಈವರೆಗೆ ಯಾರಾದ್ರೂ ನಮ್ಮನ್ನು ಕೇಳಿ ದ್ದರೇನು?' ಎನ್ನುವುದು ಚಿತ್ರದ ನಾಯಕ ಬಸವ ಕೇಳುವ ಪ್ರಶ್ನೆ, ಕಥಾನಾಯಕ ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ, ಅಮೇರಿಕಾದಲ್ಲಿ ಬದುಕು ಕಟ್ಟಿಕೊಳ್ಳುವ ಮಹದಾಸೆ ಹೊಂದಿರುವ ಜಾಣ ತರುಣ. ತಂದೆಯ ಸಾವಿನಿಂದ ಬಸವ ಹಳ್ಳಿಗೆ ಬರುವಂತಾಗುತ್ತದೆ. ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟು, ಬ್ಯಾಂಕ್ ಸಾಲದ ಶೂಲಕ್ಕೆ ಅಂಜಿ, ಬಸವನ ತಂದೆ ಉರುಳು ಹಾಕಿಕೊಂಡಿದ್ದಾನೆ. ಅಪ್ಪನ ಸಂಸ್ಕಾರಕ್ಕೆ ಬರುವ ಬಸವ ಊರಿನಲ್ಲಿಯೇ ಉಳಿಯಲು ನಿಶ್ಚಯಿಸುತ್ತಾನೆ.
ಇದನ್ನು ಓದಿ: Karunada Kanmani Movie: ನಟ ಚರಣ್ ರಾಜ್ ನಿರ್ದೇಶನದ ನೂತನ ಚಿತ್ರ ʼಕರುನಾಡ ಕಣ್ಮಣಿʼ ಶೂಟಿಂಗ್ ಮಾರ್ಚ್‌ನಲ್ಲಿ ಆರಂಭ
ಇಂಜಿನಿಯರಿಂಗ್ ಬಿಟ್ಟು ಕೃಷಿಯಲ್ಲಿಯೇ ತೊಡಗುತ್ತೇನೆ ಅನ್ನುವ ಕಥಾನಾಯಕನ ನಿರ್ಧಾರವನ್ನು ಮಲತಾಯಿಯೂ ವಿರೋಧಿಸುತ್ತಾಳೆ. ಅಪ್ಪನ ಸಾವಿಗೆ ಬಂದಿರುವ ಪರಿಹಾರ ಧನ ಬಳಸಿಕೊಂಡು ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕೆಲಸ ಹಿಡಿದು ತಂಗಿಯ ಮದುವೆ ಮಾಡಿದ ನಂತರ ಏನಾದರೂ ಮಾಡಿಕೋ ಎನ್ನುವುದು ತಾಯಿಯ ಒತ್ತಾಯ. ಬಸವ ಯಾರ ಮಾತಿಗೂ ಕಿವಿಗೊಡದೆ ಕಾಲೇಜು ತೊರೆದು ಮಣ್ಣಿನ ಅಂಗಳಕ್ಕೆ ಇಳಿಯುತ್ತಾನೆ. ಅಲ್ಲಿಂದ ಕತೆ ಪ್ರತಿಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತ ಭರಪೂರ ಮನರಂಜನೆ ನೀಡುತ್ತಾ ಸಾಗುತ್ತದೆ. ಉತ್ತರ ಕರ್ನಾಟಕದ ಜವಾರಿ ಭಾಷೆಯ ಸಿನೆಮಾ ಯಾವ ಹಂತದಲ್ಲೂ ಕುಸಿಯದೆ, ತೀವ್ರತೆ ಕಳೆದು ಕೊಳ್ಳದೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಕ್ಷೇತ್ರಪತಿ ಸಿನಿಮಾ ಸಾಮಾನ್ಯ ಜನರ ಬದುಕಿಗೆ ಬಹಳಷ್ಟು ಹತ್ತಿರವಾಗುವಂತಹ ಚಿತ್ರ ಇದಾಗಿದೆ.