Tumkur News: ತುಮಕೂರಿನಲ್ಲಿ ಮಾ.1 & 6 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ, ವರ್ಧಂತಿ ಮಹೋತ್ಸವ
Tumkur News: ತುಮಕೂರು ನಗರದ ಚಿಕ್ಕಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (ದೊಡ್ಡರಾಯರ ಮಠ) ಮಾ.1 ರಂದು ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಗಳ 404 ನೇ ವರ್ಷದ ಪಟ್ಟಾಭಿಷೇಕ ಹಾಗೂ ಮಾ.6 ರಂದು ಗುರುವಾರ 430ನೇ ವರ್ಷದ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ಇಡೀ ಜಿಲ್ಲೆಯಲ್ಲಿ ಅತೀ ಪುರಾತನವಾದ ಸುಮಾರು 500 ವರ್ಷ ಇತಿಹಾಸವುಳ್ಳ ಶ್ರೀ ವಿಜಯೀಂದ್ರತೀರ್ಥ ಪ್ರತಿಷ್ಠಾಪಿತ ಮುಖ್ಯಪ್ರಾಣದೇವರು ಇರುವ ನಗರದ (Tumkur News) ಚಿಕ್ಕಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (ದೊಡ್ಡರಾಯರ ಮಠ) ಮಾ.1 ರಂದು ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಗಳ 404 ನೇ ವರ್ಷದ ಪಟ್ಟಾಭಿಷೇಕ ಹಾಗೂ ಮಾ.6 ರಂದು ಗುರುವಾರ 430ನೇ ವರ್ಷದ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಅಂಗವಾಗಿ ರಾಘವೇಂದ್ರ ಸ್ವಾಮಿಗೆ ವಿಶೇಷ ಫಲ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಶ್ರೀ ರಾಘವೇಂದ್ರ ಸ್ತೋತ್ರ ಪಾರಾಯಣ, ರಥೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಸಹಸ್ರಾರು ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.
ಮಾ. 1 ರಿಂದ 6 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಮರುತಾಚಾರ್ಯರಿಂದ ಶ್ರೀ ರಾಘವೇಂದ್ರ ವಿಜಯದ ಬಗ್ಗೆ ಪ್ರವಚನ ಏರ್ಪಡಿಸಲಾಗಿದೆ. ಭಕ್ತರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೊಡ್ಡರಾಯರ ಮಠದ ಗುರುರಾಜ ಆಚಾರ್ಯ ತಿಳಿಸಿದ್ದಾರೆ.
ಶ್ರೀಹರಿ ಗುರುಗಳ ಸನ್ನಿಧಾನದಲ್ಲಿ 430ನೇ ವರ್ಧಂತಿ
ತುಮಕೂರು: ನಗರದ ಹನುಮಂತಪುರದಲ್ಲಿರುವ ಶ್ರೀಹರಿ ಗುರುಗಳ ಸನ್ನಿಧಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾ.1 ರಂದು ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಯ 404 ನೇ ವರ್ಷದ ಪಟ್ಟಾಭಿಷೇಕ ಹಾಗೂ ಮಾ.6 ರಂದು ಗುರುವಾರ 430 ನೇ ವರ್ಷದ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಅಂಗವಾಗಿ ರಾಘವೇಂದ್ರ ಸ್ವಾಮಿಗೆ ಪ್ರಾತಃ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಸ್ತ್ರ ಸಮರ್ಪಣೆ, ಅಲಂಕಾರ ಪೂಜೆ, ಗುರುಪಾದ ಪ್ರಕ್ಷಾಲನ ಮಹಾಪೂಜೆ, ರಥೋತ್ಸವ, ಅಷ್ಟಾವಧಾನ, ತೊಟ್ಟಿಲು ಸೇವಾ, ಮಂತ್ರಾಕ್ಷತೆ ಹಾಗೂ ತೀರ್ಥ ಪ್ರೋಕ್ಷಣೆ ಹಮ್ಮಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ | Hampi Utsav 2025: ಹಂಪಿ ಉತ್ಸವಕ್ಕೆ ದಿನಗಣನೆ; ಫೆ.28 ರಂದು ಸಿಎಂ ಸಿದ್ದರಾಮಯ್ಯ ಚಾಲನೆ
ಮಹೋತ್ಸವದ ಪ್ರಯುಕ್ತ ಸಂಜೆ 6:30ಕ್ಕೆ ವ್ಯಾಸಮುನಿ ಆಚಾರ್ಯ ದಿದ್ದಿಗಿ ಅವರಿಂದ ರಾಘವೇಂದ್ರ ಸ್ವಾಮಿಗಳ ಕುರಿತಾದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಠದ ಮುಖ್ಯಸ್ಥರು ಮನವಿ ಮಾಡಿದ್ದಾರೆ.