ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Preity Zinta: 18 ಕೋಟಿ ರೂ. ಸಾಲದ ಬಗ್ಗೆ ಪ್ರೀತಿ ಜಿಂಟಾ ವಿರುದ್ಧ ಕೇರಳ ಕಾಂಗ್ರೆಸ್‌ ಆರೋಪ; ನಾಚಿಕೆಯಾಗಬೇಕು ಎಂದ ನಟಿ

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಅವರು ಕೇರಳ ಕಾಂಗ್ರೆಸ್‌ ಮೇಲೆ ಗರಂ ಆಗಿದ್ದು, ತಮ್ಮ ಮೇಲೆ ಮೇಲೆ ಕೇರಳ ಕಾಂಗ್ರೆಸ್‌ ಹೊರೆಸಿದ್ದ18 ಕೋಟಿ ರೂ. ಸಾಲದ ಬಗ್ಗೆ ತಿರುಗೇಟು ನೀಡಿದ್ದಾರೆ. ಈ ಮಟ್ಟದ ಸುಳ್ಳು ಹೇಳುತ್ತಾ, ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಪ್ರೀತಿ ಜಿಂಟಾ ವಿರುದ್ಧ ಸಾಲದ ಆರೋಪ; ಕಾಂಗ್ರೆಸ್‌ಗೆ ನಟಿ ತಿರುಗೇಟು

ಪ್ರೀತಾ ಜಿಂಟಾ.

Profile Vishakha Bhat Feb 25, 2025 5:12 PM

ನವದೆಹಲಿ: ಬಾಲಿವುಡ್‌ ನಟಿ ಪ್ರೀತಿ ಜಿಂಟಾ (Preity Zinta) ಕಾಂಗ್ರೆಸ್‌ ವಿರುದ್ಧ ಗರಂ ಆಗಿದ್ದಾರೆ. ʼʼಸಾಲದ ವಿಚಾರವಾಗಿ ಕೇರಳ ಕಾಂಗ್ರೆಸ್​ (Kerala Congress) ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ನಾಚಿಕೆ ಆಗಬೇಕುʼʼ ಎಂದು ಕಿಡಿಕಾರಿದ್ದಾರೆ. ಪ್ರೀತಿ ಜಿಂಟಾ ಮುಂಬೈಯ ನ್ಯೂ ಇಂಡಿಯಾ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ 18 ಕೋಟಿ ರೂ. ಸಾಲ ಪಡೆದಿದ್ದರು. ಆದರೆ ಅದನ್ನು ಮನ್ನಾ ಮಾಡಲಾಗಿದೆ ಎಂದು ಕೇರಳ ಕಾಂಗ್ರೆಸ್‌ ಕೇರಳ ಘಟಕ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಿ ಜಿಂಟಾ, ಪಕ್ಷ ಹಾಗೂ ಪಕ್ಷದ ನಾಯಕರು ಈ ಮಟ್ಟದ ಸುಳ್ಳು ಹೇಳುತ್ತಾ, ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.

122 ಕೋಟಿ ರೂ. ಹಗರಣದಲ್ಲಿ ಆರ್‌ಬಿಐ ಮುಂಬೈಯ ನ್ಯೂ ಇಂಡಿಯಾ ಕೋ-ಆಪರೇಟಿವ್‌ ಬ್ಯಾಂಕ್‌ ಅನ್ನು 6 ತಿಂಗಳು ಬ್ಯಾನ್‌ ಮಾಡಿತ್ತು. ಪ್ರೀತಿ ಜಿಂಟಾ ನ್ಯೂ ಇಂಡಿಯಾ ಕೋ-ಆಪರೇಟೀವ್ ಬ್ಯಾಂಕ್‌ನಿಂದ 18 ಕೋಟಿ ರೂ. ಸಾಲವನ್ನು ಪಡೆದಿದ್ದಾರೆ. ಪ್ರತಿಯಾಗಿ ಪ್ರೀತಿ ಜಿಂಟಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಬಿಜೆಪಿಗೆ ನಿರ್ವಹಿಸಲು ನೀಡಿದ್ದಾರೆ. ಇದಕ್ಕೆ ಬಿಜೆಪಿ ಪ್ರೀತಿ ಜಿಂಟಾ ಸಾಲವನ್ನು ಮನ್ನಾ ಮಾಡಿದೆ ಎಂದು ಕೇರಳ ಕಾಂಗ್ರೆಸ್ ಎಕ್ಸ್‌ ಮೂಲಕ ಹೇಳಿದೆ. ಇದರ ಪರಿಣಾಮ ನ್ಯೂ ಇಂಡಿಯಾ ಕಾರ್ಪೋರೇಟ್ ಬ್ಯಾಂಕ್ ಬಾಗಿಲು ಮುಚ್ಚಿದೆ ಎಂದು ಪ್ರೀತಿ ಜಿಂಟಾ ಮೇಲೆ ಕೇರಳ ಕಾಂಗ್ರೆಸ್‌ ಆರೋಪ ಮಾಡಿತ್ತು.



ಇದೀಗ ಈ ಪೋಸ್ಟ್‌ಗೆ ಪ್ರೀತಿ ಜಿಂಟಾ ಖಾರವಾಗಿ ಉತ್ತರಿಸಿದ್ದು, ʼʼಈ ರೀತಿ ಸುಳ್ಳು ಹೇಳಲು ನಿಮಗೆ ನಾಚಿಕೆಯಾಗಬೇಕು. ನನ್ನ ಸಾಲವನ್ನು ಯಾರೂ ಕೂಡ ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಹಾಗೂ ನಾಯಕರು ಈ ರೀತಿ ಸುಳ್ಳು ಹೇಳಿಕೆ, ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ. ಈ ರೀತಿ ನನ್ನ ಫೋಟೊ ಹಾಗೂ ಹೆಸರು ಬಳಸಿ ಈ ರೀತಿ ಸುಳ್ಳು ಹೇಳುತ್ತಿರುವುದನ್ನು ನಿಜಕ್ಕೂ ದುರದೃಷ್ಟಕರ. 10 ವರ್ಷಗಳ ಹಿಂದೆ ನಾನು ಸಾಲ ತೆಗೆದುಕೊಂಡಿದ್ದೆ. ಅದನ್ನೂ ಬಡ್ಡಿ ಸಮೇತ ತೀರಿಸಿದ್ದೇನೆ. ಈ ಮಾಹಿತಿ ಹಾಗೂ ಸ್ಪಷ್ಟನೆ ನಿಮಗೆ ಸಾಕು ಎನಿಸುತ್ತದೆ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪಾಗಿ ಹೇಳುವುದನ್ನು ಬಿಡಿʼʼ ಎಂದು ಪ್ರೀತಿ ಜಿಂಟಾ ಪ್ರತಿಕ್ರಿಯಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Shashi Tharoor: ಸಚಿವ ಪಿಯೂಷ್‌ ಗೋಯಲ್‌ ಜೊತೆ ಶಶಿ ತರೂರ್‌ ಸೆಲ್ಫಿ; "ಕೈ" ಕೊಡ್ತಾರಾ ಸಂಸದ?

ಪ್ರೀತಿ ಜಿಂಟಾ ಈ ಪೋಸ್ಟ್‌ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ತಪ್ಪೊಪ್ಪಿಕೊಂಡಿದೆ. ʼʼನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೇವೆʼʼ ಎಂದು ಕೇರಳ ಕಾಂಗ್ರೆಸ್ ತಿಳಿಸಿದೆ.