ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ಬೆಂಗಳೂರನ್ನು ಜಕಾರ್ತಾಗೆ ಹೋಲಿಸಿ ಲೇವಡಿ ಮಾಡಿದ ಟ್ವೀಟ್ ವೈರಲ್; ಏನಿದು ವಿವಾದ?

ಬೆಂಗಳೂರಿನ ನಗರ ಮೂಲಸೌಕರ್ಯವನ್ನು ಇಂಡೋನೇಷ್ಯಾದ ಜಕಾರ್ತಾಗೆ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಇದು ಈಗ ವೈರಲ್(Viral Video) ಆಗಿದೆ. ಜಕಾರ್ತಾದಲ್ಲಿ ಬಸ್ ಮತ್ತು ಸೈಕಲ್‍ಗಳಿಗಾಗಿ ಮೀಸಲಾದ ಲೇನ್‍ಗಳಿವೆ. ಬೆಂಗಳೂರಿನಲ್ಲಿ ಅದನ್ನು ಏಕೆ ನಿರ್ಮಿಸಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಲಾಗಿದೆ.

ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಪ್ರಶ್ನಿಸಿದ ನೆಟ್ಟಿಗರು!

bangalore viral post

Profile pavithra Feb 25, 2025 4:21 PM

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ನಗರ ಮೂಲಸೌಕರ್ಯವನ್ನು ಇಂಡೋನೇಷ್ಯಾದ ಜಕಾರ್ತಾಗೆ ಹೋಲಿಸಿ ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್(Viral News)ಆಗಿದೆ. ಜಕಾರ್ತಾದ ಇತ್ತೀಚಿನ ಹಾಗೂ 1971ರಲ್ಲಿ ಜಕಾರ್ತಾ ಹೇಗಿತ್ತು ಎಂಬ ಫೋಟೊವೊಂದನ್ನು ನೆಟ್ಟಿಗರು ಹಂಚಿಕೊಂಡಿದ್ದರು. ಬೆಂಗಳೂರಿಗಿಂತ ಎರಡು ಪಟ್ಟು ಜನನಿಬಿಡ ನಗರವಾಗಿದ್ದರೂ, ಜಕಾರ್ತಾ ದಶಕಗಳಲ್ಲಿ ತನ್ನ ನಗರ ಸಾರಿಗೆ ಯೋಜನೆಯನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ತಿಳಿಸಿದ್ದಾರೆ. ಇನ್ನು ಬಸ್ ಮತ್ತು ಸೈಕಲ್‍ಗಳಿಗಾಗಿ ಮೀಸಲಾದ ಲೇನ್‍ಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಬೆಂಗಳೂರು ತನ್ನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗದೆ ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ.

"ಬೆಂಗಳೂರಿಗಿಂತ ಎರಡು ಪಟ್ಟು ಜನನಿಬಿಡ ನಗರವಾದ ಜಕಾರ್ತಾದಲ್ಲಿ ಬಸ್ ಮತ್ತು ಸೈಕಲ್‍ಗಳಿಗಾಗಿ ಮೀಸಲಾದ ಲೇನ್‍ಗಳಿವೆ. ನಾವ್ಯಾಕೆ ಆ ರೀತಿ ನಿರ್ಮಿಸಲು ಸಾಧ್ಯವಿಲ್ಲ? ಇನ್ನು ಜಕಾರ್ತಾ ಆ ಯೋಜನೆಗಳಿಗೆ ನಾವು ಖರ್ಚು ಮಾಡುತ್ತಿರುವ 1 ಲಕ್ಷ ಕೋಟಿ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಮಾಡಿದೆ" ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.



ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರಿನ ಕಳಪೆ ನಗರ ಯೋಜನೆಯ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿ ಅನೇಕ ನೆಟ್ಟಿಗರು ಈ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನ ಈಗಿನ ಕೆಲವು ಪ್ರದೇಶಗಳು 1970 ರ ದಶಕದ ಜಕಾರ್ತಾಕ್ಕಿಂತ ತೀರಾ ಕಳಪೆಯಾಗಿದೆ ಎಂದು ಹಲವರು ಲೇವಡಿ ಮಾಡಿದ್ದಾರೆ."1971ರ ಜಕಾರ್ತಾ ಭಾರತದ ಇತರ ನಗರಕ್ಕಿಂತ ಉತ್ತಮವಾಗಿದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Anand Mahindra: ಟ್ರಾಫಿಕ್‌ನಿಂದ ಜಾಮ್‌ನಿಂದ ಬೇಸತ್ತು ಬೆಂಗಳೂರಿಗೆ ಗುಡ್‌ಬೈ ಹೇಳಿದ ಉದ್ಯಮಿ ಆನಂದ್ ಮಹೀಂದ್ರ

ಬೆಂಗಳೂರಿನ ಟ್ರಾಫಿಕ್‌, ಮೂಲಭೂತ ಸೌಕರ್ಯದ ಕೊರತೆಯ ಕುರಿತು ಈಗಾಗಲೇ ಸಾಕಷ್ಟು ಜನ ತಗಾದೆ ತೆಗೆದಿದ್ದಾರೆ. ಇತ್ತೀಚೆಗೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಉದ್ಯಮಿ, ಆನಂದ್ ಮಹೀಂದ್ರ ಅವರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್‌ನಿಂದಾಗುವ ಅನುಕೂಲಗಳಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಜತೆಗೆ ಗುಡ್‌ ಬೈ ಬೆಂಗಳೂರು ಎಂದು ಹೇಳಿದ್ದಾರೆ. ಅದು ಅಲ್ಲದೇ, ಟ್ರಾಫಿಕ್‌ ಕಾರಣದಿಂದ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್‌ ಕಾರು ಜಾಸ್ತಿ ಮುಂದಕ್ಕೆ ಚಲಿಸದೆ ಶೋ ರೂಮ್‌ನಲ್ಲಿ ಇರುವಂತೆ ಇದೆಯಂತೆ.

ಸಮಾವೇಶದಲ್ಲಿ ಪಾಲ್ಗೊಂಡು ಬೆಂಗಳೂರಿನಿಂದ ಹೊರಟ ಅವರು, ಗುಡ್ ಬೈ ಬೆಂಗಳೂರು...ನನ್ನ ಮಹೀಂದ್ರ ಬಿಇ-6 ಕಾರಿನ ವೇಗಕ್ಕೆ ಥ್ಯಾಂಕ್ಸ್‌. ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದರ ಅನುಕೂಲವೆಂದರೆ ವಾಹನಗಳು ಶೋರೂಂನಲ್ಲಿ ಇರುವಂತೆ ಇರುತ್ತವೆ. ಅಲ್ಲದೆ ಟ್ರಾಫಿಕ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬರೂ ಪಕ್ಕದ ಕಾರು, ಮಾಡೆಲ್‌ ನೋಡಲು ಮತ್ತು ಪರೀಕ್ಷಿಸಲು ಸಾಕಷ್ಟು ಸಮಯವಿರುತ್ತದೆ ಎಂದು ಅವರು ಹೇಳಿದ್ದಾರೆ.