ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ಆಟೋದಲ್ಲೇ ದಿನವಿಡೀ ಟೌನ್‌ ಟ್ರಿಪ್‌ ಹೊಡೆಯೋ ಸಾಕು ನಾಯಿ- ಈ ವಿಡಿಯೊಗೆ ನೆಟ್ಟಿಗರು ಫಿದಾ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಮುದ್ದಿನ ನಾಯಿ ಮರಿಯ ಜೊತೆಗೆ ನಿತ್ಯ ಕೆಲಸಕ್ಕೆ ತೆರಳುತ್ತಿದ್ದು ಪ್ರಯಾಣಿನ ಜೊತೆ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತೆ. ಸದ್ಯ ನಾಯಿ ಮತ್ತು ಮಾಲೀಕನ ಈ ಬಾಂಧವ್ಯಕ್ಕೆ ನೆಟ್ಟಿಗರು ಮನಸೋತ್ತಿದ್ದು ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಆಟೋ ಚಾಲಕನ ಜೊತೆ ನಿತ್ಯ ಬೆಂಗಳೂರು ಸುತ್ತುವ ಮುದ್ದಿನ ಸಾಕು ನಾಯಿ!

Profile Pushpa Kumari Feb 25, 2025 3:32 PM

ಬೆಂಗಳೂರು: ನಿಯತ್ತಿಗೆ ಇನ್ನೊಂದು ಹೆಸರು ಎಂದಾಗ ನೆನಪು ಆಗುವುದೇ ಸಾಕು ಪ್ರಾಣಿ ನಾಯಿ. ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಪ್ರೀತಿ ಯನ್ನು ಬಯಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಯಾದ ನಾಯಿ ಅತೀ ಬೇಗನೆ ಹತ್ತಿರವಾಗುತ್ತದೆ. ಅದರಲ್ಲೂ ತನ್ನ ಮಾಲಿಕನನ್ನು ಒಮ್ಮೆ ಹಚ್ಚಿಕೊಂಡರೆ ಕೊನೆ ತನಕವು ಆತನ ಜೊತೆಗಿರಲು ಬಯಸುತ್ತದೆ. ಇದೀಗ ಅಂತವುದೇ ಒಂದು ಹೃದಯಸ್ವರ್ಶಿ ದೃಶ್ಯ ನೆಟ್ಟಿಗರ ಮನ ಗೆದ್ದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಮುದ್ದಿನ ನಾಯಿ ಮರಿಯ ಜೊತೆಗೆ ನಿತ್ಯ ಕೆಲಸಕ್ಕೆ ತೆರಳುತ್ತಿದ್ದು ಪ್ರಯಾಣಿನ ಜೊತೆ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತೆ. ಸದ್ಯ ನಾಯಿ ಮತ್ತು ಮಾಲೀಕನ ಈ ಬಾಂಧವ್ಯಕ್ಕೆ ನೆಟ್ಟಿಗರು ಮನಸೋತಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್(Viral News) ಆಗುತ್ತಿದೆ.

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ನಿತ್ಯ ಕೆಲಸಕ್ಕೆ ತೆರಳುವಾಗ ನಾಯಿಯನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿ ಬೆಂಗಳೂರು ಪೂರ್ತಿ ಸುತ್ತುತ್ತಾರಂತೆ. ಆಟೋ ಚಾಲಕನ ಜೊತೆ ಎಲ್ಲಾ ಕಡೆ ಬಾಡಿಗೆ ತೆರಳುವಾಗಲೂ ಈ ನಾಯಿ ಸಾಥ್ ನೀಡುತ್ತದೆ. ಈ ಮೂಲಕ ಆಟೋ ಚಾಲಕನ ಶ್ವಾನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಾಯಿ ಮರಿ ಹುಟ್ಟಿದ ಕೆಲವೇ ದಿನಕ್ಕೆ ಆಟೋ ಚಾಲಕನಿಗೆ ಸಿಕ್ಕಿದ್ದು ಬಹಳ ಪ್ರೀತಿಯಿಂದ ಇವರು ಸಾಕಿ ಸಲಹಿದ್ದಾರೆ. ತನ್ನ ಮುದ್ದಿನ ನಾಯಿಯನ್ನು ಮನೆಯಲ್ಲಿಯೇ ಇರಿಸಿ ಆಟೋ ಸೇವೆ ನೀಡಲು ಹೋಗುವುದು ಈತನಿಗೆ ಇಷ್ಟವಿಲ್ಲ. ಹಾಗಾಗಿ ಸಾಕಿದ ನಾಯಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ.



ಆಟೋ ಚಾಲಕನ ಡ್ರೈವಿಂಗ್ ಸೀಟ್ ಪಕ್ಕದಲ್ಲಿ ನಾಯಿಗೆ ಪ್ರತ್ಯೇಕ ವಾಗಿ ಜಾಗ ಮಾಡಿ ಕೊಟ್ಟಿದ್ದಾನೆ. ಹೀಗಾಗಿ ಮಾಲೀಕ ಎಲ್ಲೆಲ್ಲಾ ಬಾಡಿಗೆ ತೆರಳುತ್ತಾನೆ, ಅಲ್ಲೆಲ್ಲ ಮುದ್ದು ನಾಯಿ ಜಾಕಿ ಕೂಡ ನಿತ್ಯ ಸಂಚಾರ ಮಾಡುತ್ತೆ. ನಾಯಿಯನ್ನು ನೋಡಿ ಪ್ರಯಾಣಿಕರು ಪ್ರೀತಿ ಯಿಂದ ಮಾತನಾಡಿಸುತ್ತಾರೆ. ಹಾಗಾಗಿ ಗ್ರಾಹಕರು ಕೂಡ ತಿಂಡಿ , ತಿನಿಸು, ಬಿಸ್ಕತ್ ಎಲ್ಲ ನೀಡುತ್ತಾರೆ. ಅದರ ಜೊತೆಗೆ ಸೆಲ್ಫಿ ಮತ್ತು ವಿಡಿಯೊ ಕೂಡ ಪಡೆಯುತ್ತಿದ್ದಾರೆ. ಹಾಗಾಗಿ ಆಟೋ ಚಾಲಕ ಮತ್ತು ಆತನ ಮುದ್ದು ನಾಯಿ ಜಾಕಿ ಸಿಲಿಕಾನ್ ಸಿಟಿಯಲ್ಲಿ ಬಹಳಷ್ಟು ಫೇಮಸ್ ಆಗುತ್ತಿದೆ.

ಇದನ್ನು ಓದಿ: Viral Video: ಗುಂಡಿನ ಮತ್ತಿನಲ್ಲಿ ಈ ವರ ಹಸೆಮಣೆಯಲ್ಲಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೊ

ಇದೀಗ @damyanthi ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ದೃಶ್ಯ ಹಂಚಿಕೊಳ್ಳಲಾಗಿದ್ದು ನಮ್ಮ ಬೆಂಗಳೂರಿನ ಪೀಕ್ ಮೂಮೆಂಟ್ ಎಂದು ಶೀರ್ಷಿಕೆ ಬರೆದು ಈ ದೃಶ್ಯ ಪೋಸ್ಟ್ ಮಾಡಲಾಗಿದ್ದು 35,000 ಕ್ಕೂ ಅಧಿಕ ವೀವ್ಸ್ ಗಳಿಸಿದೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ ಬಗೆ ಯಲ್ಲಿ ಕಮೆಂಟ್ ಹಾಕಿದ್ದು ಬಳಕೆದಾರ ರೊಬ್ಬರು ನಿಸ್ವಾರ್ಥ ಪ್ರೀತಿಗೆ ಈ ದೃಶ್ಯ ಅದ್ಭುತ ಉದಾಹರಣೆ ಎಂದಿದ್ದಾರೆ. ಇನ್ನೊಬ್ಬ ಬಳಕೆ ದಾರರು ನಾಯಿ ಮತ್ತು ಚಾಲಕನ ಬಾಂಧವ್ಯ ನಿಜಕ್ಕೂ ಹೃದಯ ಸ್ಪರ್ಶಿಸುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ.