ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇಲ್ಲಿ ಉಗುಳಿದರೆ ಜೋಕೆ !

ಸಿಂಗಾಪುರಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ 7 ವರ್ಷಗಳ ಮೊದಲು (ಸ್ವಾತಂತ್ರ್ಯ ಸಿಕ್ಕಿದ್ದು 1965 ಆಗಸ್ಟ್ 9), ಅಂದರೆ 1958ರಲ್ಲಿ ಸಿಂಗಾಪುರ ಪ್ರಪ್ರಥಮ ಅಭಿಯಾನವನ್ನು ಆರಂಭಿಸಿತು. ಅದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ( Anti-Spitting Campaign) ವಿರುದ್ಧ.

ಇಲ್ಲಿ ಉಗುಳಿದರೆ ಜೋಕೆ !

ಸಂಪಾದಕರ ಸದ್ಯಶೋಧನೆ

ಸಿಂಗಾಪುರದಲ್ಲಿ ಏನನ್ನಾದರೂ ತಿಂದು ಜೀರ್ಣಿಸಿಕೊಳ್ಳಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ (Spitting), ಬಚಾವ್ ಆಗುವುದು ಸಾಧ್ಯವೇ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗು ಳುವುದನ್ನು ಪೊಲೀಸರು ಕಂಡರೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಮೇಲೆ ಕೇಸು ಜಡಿ ಯುತ್ತಾರೆ, ಸಾವಿರಾರು ಡಾಲರ್ ದಂಡ ಕಕ್ಕಿಸುತ್ತಾರೆ. ಕೋರ್ಟ್ ಮುಂದೆ ನಿಲ್ಲಿಸಿ ಮಾನ ಕಳೆಯು ತ್ತಾರೆ. ಅಷ್ಟೇ ಅಲ್ಲ, ನ್ಯಾಯಾಧೀಶರ ಆದೇಶ ಪಡೆದು ಛಡಿಯೇಟು ಕೊಡುತ್ತಾರೆ.

ಈ ವಿಷಯದಲ್ಲಿ ಮಾತ್ರ ಆ ದೇಶ ರಾಜಿ ಮಾಡಿಕೊಂಡಿಲ್ಲ. ಉಗುಳುವುದನ್ನು ಸಹಿಸಿಕೊಂಡಿಲ್ಲ. ಜನರ ಸಾರ್ವಜನಿಕ ವರ್ತನೆಗಳನ್ನು ಬದಲಿಸಲು, ಸುಧಾರಿಸಲು ಸಿಂಗಾಪುರ ಕಾಲಕಾಲಕ್ಕೆ ರಾಷ್ಟ್ರೀ ಯ ಅಭಿಯಾನ ( Campaign)ವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 1958ರಿಂದ 1982 ರವರೆಗಿನ 26 ವರ್ಷಗಳಲ್ಲಿ 66 ರಾಷ್ಟ್ರೀಯ ಅಭಿಯಾನಗಳನ್ನು ಅದು ಹಮ್ಮಿಕೊಂಡಿದ್ದು ಗಮನಾರ್ಹ.

ಇದನ್ನೂ ಓದಿ: Vishweshwar Bhat Column: ಪರಿಪೂರ್ಣತೆಗೊಂದು ನೆಪ

ಸಿಂಗಾಪುರಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ 7 ವರ್ಷಗಳ ಮೊದಲು (ಸ್ವಾತಂತ್ರ್ಯ ಸಿಕ್ಕಿದ್ದು 1965 ಆಗಸ್ಟ್ 9), ಅಂದರೆ 1958ರಲ್ಲಿ ಸಿಂಗಾಪುರ ಪ್ರಪ್ರಥಮ ಅಭಿಯಾನವನ್ನು ಆರಂಭಿಸಿತು. ಅದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ( Anti-Spitting Campaign) ವಿರುದ್ಧ. ಸಿಂಗಾಪುರದ ಸಿಟಿ ಕೌನ್ಸಿಲ್ ಚುನಾವಣೆಯಲ್ಲಿ ಪೀಪಲ್ಸ್ ಆಕ್ಷನ್ ಪಾರ್ಟಿ ಗೆದ್ದ ನಂತರ, ಉಗುಳು ವುದರ ವಿರುದ್ಧ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿತು.

‘ಪ್ರಜೆಗಳಿಗೆ ಸಾರ್ವಜನಿಕ ವರ್ತನೆಯನ್ನು ಹೇಳಿಕೊಡದಿದ್ದರೆ, ಅವರಲ್ಲಿ ಗುಣಾತ್ಮಕ ಪರಿವರ್ತನೆ ಯನ್ನು ತರಲು ಸಾಧ್ಯವಿಲ್ಲ’ ಎಂಬುದನ್ನು ಅರಿತು ಆ ಅಭಿಯಾನವನ್ನು ವ್ಯಾಪಕವಾಗಿ ಹಮ್ಮಿ ಕೊಳ್ಳಲಾಯಿತು. ಆ ದಿನಗಳಲ್ಲಿ ಸಾರ್ವಜನಿಕರು ಮನಬಂದಂತೆ ಎಲ್ಲೆಡೆ ಎಂಜಲು ಉಗುಳು ತ್ತಿದ್ದರು.

ಯಾರಿಗಾದರೂ ಉಗುಳಬಾರದೆಂದು ಹೇಳಿದರೆ ಅದು ಜಗಳಕ್ಕೆ ಕಾರಣವಾಗುತ್ತಿತ್ತು. ಉಗುಳುವುದಕ್ಕೆ ಕಡಿವಾಣ ಹಾಕದೇ ದೇಶವನ್ನು ಸುಂದರ ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮನಗಂಡ ಸ್ಥಳೀಯ ಆಡಳಿತ, ಈ ಅಸಹ್ಯ ವರ್ತನೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿತು. ಆ ದಿನಗಳಲ್ಲಿ, ಸಿಟಿ ಕೌನ್ಸಿಲ್ ಕಟ್ಟಡದ ಮುಂದೆ ದೊಡ್ಡ ಪೋಸ್ಟರನ್ನು ಅಂಟಿಸ ಲಾಗಿತ್ತು. ‌

ಸೇತುವೆ, ಟೆಲಿಗ್ರಾಫ್ ಕಂಬ, ಮರಗಳ ಮೇಲೆಯೂ ಈ ಪೋಸ್ಟರುಗಳನ್ನು ಅಂಟಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆ ಪ್ರಯುಕ್ತ ಆರೋಗ್ಯ ಮತ್ತು ಜಲ ಇಲಾಖೆಯ ನೂರು ಸಿಬ್ಬಂದಿ ಮನೆಮನೆಗೆ ಹೋಗಿ, ಕರಪತ್ರಗಳನ್ನು ಹಂಚಿ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಆರಂಭಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು, ಕೆಮ್ಮುವುದು ಅಸಹನೀಯ ಮತ್ತು ಅಸಹ್ಯಕರ ವರ್ತನೆ ಎಂಬ ಬಗ್ಗೆ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಅಂದು ಆರಂಭವಾದ ಆ ಅಭಿಯಾನ ಇಡೀ ದೇಶವನ್ನು ಸ್ವಚ್ಛವಾಗಿ ಕಾಪಾಡುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸಿದೆ. ಸಿಂಗಾಪುರಕ್ಕೆ ಮೊದಲ ಸಲ ಭೇಟಿ ನೀಡಿದ ಪ್ರವಾಸಿಗರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೂ, ಅವರಿಗೆ ಸಾವಿರ ಡಾಲರ್ ದಂಡ ಹಾಕಲಾಗುತ್ತದೆ. ಎರಡನೇ ಸಲ ಆ ತಪ್ಪನ್ನು ಮಾಡಿದರೆ, 2000 ಡಾಲರ್ ಪೀಕಿಸುತ್ತಾರೆ. ಅಲ್ಲಿನ ರಸ್ತೆ ಅಥವಾ ಪಾದಚಾರಿ ಹಾದಿ ಮೇಲೆ ಉಗುಳುವುದನ್ನೂ ಅಪರಾಧ ಎಂದೇ ಭಾವಿಸಲಾಗಿದೆ.

ಕಳೆದ ವರ್ಷ ಭಾರತದಿಂದ ತೆರಳಿದ ನಾಲ್ವರು ಪ್ರವಾಸಿಗರು ಸಾರ್ವಜನಿಕ ಸ್ಥಳಗಳಲ್ಲಿ ಎಲೆ ಅಡಕೆ ಜಗಿದು ಉಗುಳಿದ್ದರು. ಅವರ ಆ ವರ್ತನೆ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿತ್ತು. ಅವರು ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಹಾಗೆ ಮಾಡಿದ್ದರು. ಅವರು ವಿಮಾನ ನಿಲ್ದಾಣ ತಲುಪು ತ್ತಿದ್ದಂತೆ ಪೊಲೀಸರು ಅವರ ಸ್ವಾಗತಕ್ಕೆ ನಿಂತಿದ್ದರು. ನಾಲ್ವರು 4000 ಡಾಲರ್ (ಎರಡೂವರೆ ಲಕ್ಷ ರುಪಾಯಿ) ದಂಡ ತೆತ್ತ ಬಳಿಕವೇ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಲಾಯಿತು. ಇಲ್ಲದಿದ್ದರೆ ಅಲ್ಲೇ ಕಂಬಿ ಎಣಿಸಬೇಕಿತ್ತು.