ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮನಸ್ಸೊಂದಿದ್ದರೆ ಮಾರ್ಗ- 83 ವರ್ಷದ ವೃದ್ಧನ ಹಾಟ್ ಏರ್ ಬಲೂನ್ ಸವಾರಿ ನೋಡಿದ್ರಾ...? ವಿಡಿಯೊ ವೈರಲ್

83 ವರ್ಷದ ವೃದ್ಧ ವ್ಯಕ್ತಿ ನೌಕಾಪಡೆಯ ಅನುಭವಿ ಮತ್ತು ಇನ್‌ಸ್ಟಾಗ್ರಾಮರ್‌ ಕೆನ್ನಿ ಹಾಟ್ ಏರ್ ಬಲೂನಿನಲ್ಲಿ ಸವಾರಿ ಮಾಡಿದ್ದಾನೆ. ಆತ ತನ್ನ ಹೊಸ ಸಾಹಸದ ವಿಡಿಯೊಗಳನ್ನು ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದು ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಅಜ್ಜನ ಈ ವಿಡಿಯೊ ನೋಡಿದ್ರೆ ನೀವು ಕೂಡ ಶಾಕ್‌ ಆಗ್ತೀರಿ!

Profile pavithra Mar 17, 2025 4:55 PM

ವಯಸ್ಸಾಗುತ್ತಿದ್ದಂತೆ ಆ ನೋವು, ಈ ನೋವು ಎಂದು ಕನಸುಗಳನ್ನೆಲ್ಲಾ ಬದಿಗೊತ್ತಿ ಬದುಕುತ್ತಾರೆ ಕೆಲವರು. ಅಂತೆಯೇ ಕೆಲವರು ಬದುಕಿನುದ್ದಕ್ಕೂ ತಾವು ಕಂಡಿದ್ದ ಆಸೆ, ಕನಸುಗಳ ಬೆನ್ಹತ್ತಿ ಹೋಗುವವರಿದ್ದಾರೆ. ಇಲ್ಲೊಬ್ಬ 83 ವರ್ಷದ ವೃದ್ಧ ಹಾಟ್ ಏರ್ ಬಲೂನಿನಲ್ಲಿ ಸವಾರಿ ಮಾಡಿ ಖುಷಿಪಟ್ಟಿದ್ದಾನೆ. ಆತ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿ ಬದುಕು ಸಾಗಿಸುತ್ತಿರುವ ಮತ್ತು ಇನ್‌ಸ್ಟಾಗ್ರಾಮರ್‌ ಕೆನ್ನಿ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಆತ ಹಾಟ್ ಏರ್ ಬಲೂನ್ ಸವಾರಿಯಲ್ಲಿ ಆಕಾಶಕ್ಕೆ ಜಿಗಿದಿದ್ದಾನೆ ಮತ್ತು ತನ್ನ ಹೊಸ ಸಾಹಸದ ವಿಡಿಯೊಗಳನ್ನು ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿ ಅದನ್ನು ಅದ್ಭುತವಾದ ಅನುಭವ ಎಂದು ಕರೆದಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕೆನ್ನಿ ಕೇರ್‌ ಟೇಕರ್‌ ಆದ ಕ್ಲೈನ್ ಆತನಿಗಾಗಿ ಈ ಸರ್ಪ್ರೈಸ್ ಸವಾರಿಯನ್ನು ಫ್ಲ್ಯಾನ್‌ ಮಾಡಿದ್ದಾಳಂತೆ. ಕೆನ್ನಿ ಹಂಚಿಕೊಂಡ ಇತ್ತೀಚಿನ ವಿಡಿಯೊಗಳಲ್ಲಿ, ಆತ ಉತ್ಸಾಹದಿಂದ ಬಲೂನ್ ಸವಾರಿಯನ್ನು ಮಾಡುವುದು ಮತ್ತು ಅದರ ಬಗ್ಗೆ ತನ್ನ ಅನುಭವವನ್ನು ಹಂಚಿಕೊಳ್ಳುವುದನ್ನು ಸೆರೆಹಿಡಿಯಲಾಗಿತ್ತು.

83 ವರ್ಷದ ವೃದ್ಧನ ಈ ಸಾಹಸದ ವಿಡಿಯೊ ಇಲ್ಲಿದೆ...

ಕೆನ್ನಿ ಹಾಟ್ ಏರ್ ಬಲೂನ್‍ನಲ್ಲಿ ಸವಾರಿ ಮಾಡಿದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೆ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ 13,000 ಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. ನೆಟ್ಟಿಗರು 83ನೇ ವರ್ಷ ವಯಸ್ಸಿನಲ್ಲಿ ಆತನ ಉತ್ಸಾಹ ಕಂಡು ಹೊಗಳಿದ್ದಾರೆ. ಕೆನ್ನಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಪರಿಚಿತ ವ್ಯಕ್ತಿ. ಆತ ಅಲೆಕ್ಸಾದೊಂದಿಗಿನ ತಮಾಷೆಯ ಮಾತುಕತೆ ನಡೆಸಿದ್ದಕ್ಕಾಗಿ ಕೆಲವು ವರ್ಷಗಳ ಹಿಂದೆ ವೈರಲ್ ಆಗಿದ್ದನು. ಈತ ಅಲೆಕ್ಸಾದೊಂದಿಗೆ ಮಾತನಾಡುವ ವಿಡಿಯೊ 2022 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿತ್ತು.

2022ರಲ್ಲಿ 80 ವರ್ಷದ ಕೆನ್ನಿ ಹಾಗೂ ಇನ್ನೊಬ್ಬ ವ್ಯಕ್ತಿ ಮೊದಲ ಬಾರಿಗೆ ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ ಬಳಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿತ್ತು. ಈ ವಿಡಿಯೊವನ್ನು ಕೆನ್ನಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ 16 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 2.8 ಮಿಲಿಯನ್ ಲೈಕ್‍ಗಳನ್ನು ಗಳಿಸಿತ್ತು.

ಈ ಸುದ್ದಿಯನ್ನೂ ಓದಿ:‌Viral Video: ಮುಂಬೈ ಲೋಕಲ್ ರೈಲಿನಲ್ಲಿ ಸ್ಕಾಟಿಷ್ ಸಂಗೀತಗಾರ ಮಾಡಿದ್ದೇನು ಗೊತ್ತಾ? ಈ ವಿಡಿಯೊ ವೈರಲ್

ಭುಂಡಾ ಮಹಾಯಜ್ಞದ ವೇಳೆ ಈ ವೃದ್ಧ ಮಾಡಿದ್ದೇನು?

ಸಾಧಿಸುವವನಿಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಹಿಮಾಚಲ ಪ್ರದೇಶದ ಸ್ಪೈಲ್ ಕಣಿವೆಯಲ್ಲಿ ವೃದ್ಧನೊಬ್ಬ ಹಗ್ಗದ ಮೂಲಕ ಸುಮಾರು 1 ಕಿ.ಮೀ. ದೂರ ಜಾರಿಕೊಂಡು ಹೋದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದು 40 ವರ್ಷಗಳ ನಂತರ 'ಭುಂಡಾ ಮಹಾಯಜ್ಞ'ದ ಸಮಯದಲ್ಲಿ ನಡೆದ ಆಚರಣೆಗಳಲ್ಲಿ ಒಂದು ಎನ್ನಲಾಗಿದೆ. 65 ವರ್ಷದ ಈತ ಹಳೆಯ 'ಹಗ್ಗ-ಜಾರುವಿಕೆ' ಸಂಪ್ರದಾಯವನ್ನು ಜೀವಂತವಾಗಿರಿಸುತ್ತ ಮರದ ತೆಪ್ಪದಲ್ಲಿ ಕಣಿವೆಯ ಮೂಲಕ ಸಂಚರಿಸಿದ್ದಾನೆ. ಬೇಡ ಜಾತಿಯ 'ಜೇಡಿ' ಸಮುದಾಯವನ್ನು ಪ್ರತಿನಿಧಿಸುವ ಸೂರತ್ ರಾಮ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಹಗ್ಗದ ಮೂಲಕ ಜಾರುವ ಮೂಲಕ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಪ್ರಯಾಣಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.