ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಅಪ್ಪು ಪರಂಪರೆ ಇನ್ನೂ ಜೀವಂತʼ: ಪುನೀತ್‌ ರಾಜ್‌ಕುಮಾರ್‌ಗೆ ದಿನೇಶ್‌ ಕಾರ್ತಿಕ್‌ ಸೆಲ್ಯೂಟ್‌!

Dinesh Karthik praised on Puneeth Rajkumar: ಕನ್ನಡ ಸಿನಿಮಾ ನಟ ಹಾಗೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯೆ ದೈವ ದಿವಂಗತ ಪುನೀತ್‌ ರಾಜ್‌ಕುಮಾರ್‌ರೆ ಸೋಮವಾರ (ಮಾರ್ಚ್‌ 17) 50ನೇ ಹುಟ್ಟು ಹಬ್ಬ. ಈ ವಿಶೇಷ ದಿನದ ಹಿನ್ನೆಯಲ್ಲಿ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಹಾಗೂ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌, ಪುನೀತ್‌ ರಾಜ್‌ಕುಮಾರ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಪರಂಪರೆ ಇನ್ನೂ ಜೀವಂತ: ದಿನೇಶ್‌ ಕಾರ್ತಿಕ್‌!

ಪುನೀತ್‌ ರಾಜ್‌ಕುಮಾರ್‌ಗೆ ದಿನೇಶ್‌ ಕಾರ್ತಿಕ್‌ ಮೆಚ್ಚುಗೆ.

Profile Ramesh Kote Mar 17, 2025 8:12 PM

ಬೆಂಗಳೂರು: ಕನ್ನಡ ಸಿನಿಮಾ ನಟ ಹಾಗೂ ಕೋಟ್ಯಂತರ ಸಿನಿ ರಸಿಕರ ಆರಾಧ್ಯ ದೈವ ದಿವಂಗತ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ 50ನೇ ಹುಟ್ಟು ಹಬ್ಬವನ್ನುಅಭಿಮಾನಿಗಳು ಮಾರ್ಚ್‌ 17 ರಂದು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮೆಂಟರ್‌ ಹಾಗೂ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik), ಪುನೀತ್‌ ರಾಜ್‌ಕುಮಾರ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ಪರಂಪರೆ ಜೀವಂತವಾಗಿ ಉಳಿದಿದೆ ಹಾಗೂ ಅವರ ಉಪಸ್ಥಿತಿ ಎಲ್ಲಾ ಕಡೆ ಕಾಣುತ್ತಿದೆ ಎಂದು ವಿಶೇಷ ಪದಗಳಿಂದ ಆರ್‌ಸಿಬಿ ಬ್ಯಾಟಿಂಗ್‌ ಕೋಚ್‌ ಹೊಗಳಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ದಿನೇಶ್‌ ಕಾರ್ತಿಕ್‌, ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ವಿಶೇಷ ಪದಗಳಿಂದ ಬಣ್ಣಿಸಿದ್ದಾರೆ. "ನಾನು ಚೆನ್ನೈನಿಂದ ಬಂದಿದ್ದೇನೆ. ನಾನು ಸಿನಿಮಾ ಪ್ರಿಯ. ನಮ್ಮಲ್ಲಿ ದೊಡ್ಡ ಸಿನಿಮಾ ಸ್ಟಾರ್‌ಗಳಿದ್ದಾರೆ. ರಜನಿ, ಕಮಲ್‌, ವಿಜಯ್‌, ಅಜಿತ್‌, ಧನುಷ್‌, ವಿಜಯ್‌ ಸೇತುಪತಿ ಅವರಂಥ ಸ್ಟಾರ್‌ಗಳು ನಮ್ಮಲ್ಲಿ ಇದ್ದಾರೆ. ಆದರೆ, ಮೂರು ವರ್ಷಗಳ ಕಾಲ ಆರ್‌ಸಿಬಿ ಪರ ಆಡುವಾಗ ಮೂರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಮಯ ಕಳೆದುಕೊಂಡಿದ್ದೇನೆ. ಈ ಅವಧಿಯಲ್ಲಿ ನನಗೆ ಒಂದು ಹೆಸರು ಮನವರಿಕೆಯಾಗಿತ್ತು, ಬೆಂಗಳೂರು ನಗರವೇ ಆ ಹೆಸರನ್ನು ಇಷ್ಟಪಡುತ್ತದೆ, ಆ ಹೆಸರೇ ಡಾ. ಪುನೀತ್‌ ರಾಜ್‌ಕುಮಾರ್‌."

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

"ಕೆಲವೊಬ್ಬರು ನಮ್ಮನ್ನು ಬಹುಬೇಗ ಅಗಲಿದ್ದಾರೆ ಆದರೆ, ಅವರ ಉಪಸ್ಥಿತಿ ಎಲ್ಲಾ ಕಡೆ ಇದೆ. ದೊಡ್ಡ ಪೋಸ್ಟರ್‌ಗಳು, ಅವರ ಹೆಸರಿನಲ್ಲಿನ ರಸ್ತೆಗಳು ಸೇರಿದಂತೆ ಅಂಗಡಿಗಳಿಗೂ ಅವರ ಹೆಸರನ್ನು ಇಡಲಾಗಿದೆ. ಇದನ್ನು ಗಮನಿಸಿದರೆ, ಪುನೀತ್‌ ರಾಜ್‌ಕುಮಾರ್‌ ಅವರ ಪರಂಪರೆ ನಗರದ ಎಲ್ಲಾ ಮೂಲೆ-ಮೂಲೆಗಳಲ್ಲಿಯೂ ಇನ್ನೂ ಜೀವಂತವಾಗಿ ಉಳಿದಿದೆ. ಅವರ ಹುಟ್ಟು ಹಬ್ಬದ ನಿಮಿತ್ತ ನಾನು ದಿಗ್ಗಜನಿಗೆ ದೊಡ್ಡ ಸೆಲ್ಯೂಟ್‌ ಹೊಡೆಯಲು ಬಯಸುತ್ತೇನೆ. ಅವರ ಸಾಕಷ್ಟು ಪ್ರೇರಣೆ ಹಾಗೂ ಸ್ಪೂರ್ತಿ ಮುಂದುವರಿಯುತ್ತಿದೆ. ಅವರ ಮ್ಯಾಜಿಕ್‌ ಅನ್ನು ತೆರೆ ಮೇಲೆ ಅನುಭವಿಸುವ ಸಮಯ ಬಂದಾಗಿದೆ, ವಿಶೇಷವಾಗಿ ಅವರ ಸಿನಿಮಾವೊಂದನ್ನು ಎಲ್ಲರೂ ವೀಕ್ಷಿಸುತ್ತಿದ್ದಾರೆ. ನಾನು ಅವರ ಯಾವ ಸಿನಿಮಾದಿಂದ ಆರಂಭಿಸಲಿ ಎಂಬುದನ್ನು ನೀವು ಸಲಹೆ ನೀಡಿ. ಕೆಳಗಡೆ ಕಾಮೆಂಟ್‌ನಲ್ಲಿ ತಿಳಿಸಿ. ಆ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ, ಮತ್ತೊಮ್ಮೆ ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ದಿನೇಶ್‌ ಕಾರ್ತಿಕ್‌ ಭಾವುಕರಾಗಿದ್ದಾರೆ.

ದಿನೇಶ್‌ ಕಾರ್ತಿಕ್‌ಗೆ ಅಭಿಮಾನಿಗಳು ಮೆಚ್ಚುಗೆ

ಪುನೀತ್‌ ರಾಜ್‌ಕುಮಾರ್‌ ಅವರನ್ನು ವಿಶೇಷ ಪದಗಳಿಂದ ಗುಣಗಾನ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ. ನಿಮ್ಮ ಮೇಲಿನ ಗೌರವ ಹೆಚ್ಚಿದೆ ಎಂದು ಅಭಿಮಾನಿಗಳು ಕಾರ್ತಿಕ್‌ ಅವರನ್ನು ಹೊಗಳಿಸಿದ್ದಾರೆ. ಮತ್ತೊಬ್ಬ ಅಭಿಯಾನಿಯೊಬ್ಬ, ಜಾಕಿ, ಮಿಲನ, ಅರಸು, ಅಪ್ಪು, ಅಭಿ, ಬಿಂದಾಸ್‌, ರಾಜ್‌ ಸಿನಿಮಾಗಳನ್ನು ವೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

2025ರ ಐಪಿಎಲ್‌ ಟೂರ್ನಿಗೆ ದಿನಗಣನೆ

ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿ ಆರಂಭವಾಗಲಿದೆ. ಈಗಾಗಲೇ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿರುವ ದಿನೇಶ್‌ ಕಾರ್ತಿಕ್‌, ಆರ್‌ಸಿಬಿ ತಂಡಕ್ಕೆ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.