ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಸಚಿನ್‌ ತೆಂಡೂಲ್ಕರ್‌ ಅಲ್ಲ! ಒಡಿಐ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಆರಿಸಿದ ರಿಕಿ ಪಾಂಟಿಂಗ್!

Ricky Ponting on Greatest ODI Player: ಪಾಕಿಸ್ತಾನ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದ ವಿರಾಟ್‌ ಕೊಹ್ಲಿಯನ್ನು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ಗುಣಗಾನ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರನನ್ನು ಹೆಸರಿಸಿದ ರಿಕಿ ಪಾಂಟಿಂಗ್‌!

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ರಿಕಿ ಪಾಂಟಿಂಗ್‌.

Profile Ramesh Kote Feb 25, 2025 5:33 PM

ನವದೆಹಲಿ: ಪಾಕಿಸ್ತಾನ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy 2025) ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ತಂಡವನ್ನು ವಿರಾಟ್‌ ಕೊಹ್ಲಿಯನ್ನು (virat Kohli) ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತದ ಮಾಜಿ ನಾಯಕ ತಮ್ಮ ಏಕದಿನ ಕ್ರಿಕೆಟ್‌ನ 51 ಶತಕ ಹಾಗೂ ಒಟ್ಟಾರೆ 82ನೇ ಶತಕ ಇದಾಗಿದೆ. ಆ ಮೂಲಕ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ 100 ಶತಕಗಳ ದಾಖಲೆಯನ್ನು ಮುರಿಯುವತ್ತ ವಿರಾಟ್‌ ಕೊಹ್ಲಿ ಸಾಗುತ್ತಿದ್ದಾರೆ. ಇದನ್ನು ಪರಿಗಣಿಸಿದ ಪಾಂಟಿಂಗ್‌, ವಿರಾಟ್‌ ಕೊಹ್ಲಿಯನ್ನು ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 18426 ರನ್‌ಗಳನ್ನು ಸಿಡಿಸಿದ್ದಾರೆ ಹಾಗೂ 49 ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್‌ ತೆಂಡೂಲ್ಕರ್‌ ಕೂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌, ಸಚಿನ್‌ ತೆಂಡೂಲ್ಕರ್‌ ಅವರನ್ನು ಕಡೆಗಣಿಸಿ ವಿರಾಟ್‌ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಒಡಿಐ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Shubman Gill: ಭಾರತದ ಭವಿಷ್ಯದ ವಿರಾಟ್‌ ಕೊಹ್ಲಿಯನ್ನು ಹೆಸರಿಸಿದ ಮೊಹಮ್ಮದ್‌ ಹಫೀಝ್‌!

ಏಕದಿನ ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಕಲೆ ಹಾಕಿರುವ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ಒಡಿಐ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಐಸಿಸಿ ರಿವ್ಯೂವ್‌ನಲ್ಲಿ ಭಾಗವಹಿಸಿದ್ದ ರಿಕಿ ಪಾಂಟಿಂಗ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೇಷ್ಠ ಆಟಗಾರ ಯಾರೆಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ, ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿರುವ ಸಚಿನ್‌ ತೆಂಡೂಲ್ಕರ್‌ ಮತ್ತು ಕುಮಾರ ಸಂಗಕ್ಕಾರ ಅವರನ್ನು ಪಾಂಟಿಂಗ್‌ ಕಡೆಗಣಿಸಿ ಅಚ್ಚರಿ ಮೂಡಿಸಿದ್ದಾರೆ.

ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ರಿಕಿ ಪಾಂಟಿಂಗ್‌

"ದೀರ್ಘಾವಧಿಯಿಂದ ವಿರಾಟ್‌ ಕೊಹ್ಲಿ ಚಾಂಪಿಯನ್‌ ಆಟಗಾರ. ಅವರು ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಅದರಲ್ಲಿಯೂ 50 ಓವರ್‌ಗಳ ಸ್ವರೂಪದಲ್ಲಿ ಅಸಾಧಾರಣ ಆಟಗಾರರಾಗಿದ್ದಾರೆ. ವಿರಾಟ್‌ ಕೊಹ್ಲಿಗಿಂತ ಅತ್ಯುತ್ತಮ 50 ಓವರ್‌ಗಳ ಆಟಗಾರನನ್ನು ನಾನು ಎಂದಿಗೂ ನೋಡಿಯೇ ಇಲ್ಲ. ಅವರು ಈಗಾಗಗಲೇ ನನ್ನನ್ನು ಹಿಂದಿಕ್ಕಿದ್ದಾರೆ. ಇದೀಗ ಅವರ ಮುಂದೆ ಇನ್ನೂ ಇಬ್ಬರು ಆಟಗಾರರಿದ್ದಾರೆ. ವಿರಾಟ್‌ ಕೊಹ್ಲಿ ತನಗೆ ತಾನು ಹೆಚ್ಚಿನ ಸಮಯವನ್ನು ನೀಡಿದರೆ, ಅವರು ಖಂಡಿತವಾಗಿಯೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಬಹುದು," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ.

Virat Kohli: ಕ್ಯಾಚ್‌ ಮೂಲಕ ದಾಖಲೆ ಬರೆದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್‌ನಲ್ಲಿ 14085 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಅತಿ ಹೆಚ್ಚು ಒಡಿಐ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿಲು ಕೊಹ್ಲಿಗೆ ಇನ್ನೂ 4,341 ರನ್‌ಗಳನ್ನು ಗಳಿಸಬೇಕಾಗಿದೆ. ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಅವಕಾಶವಿದೆ ಎಂದು ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಇದರ ಬಗ್ಗೆ ಯೋಚಿಸಿದಾಗ ಮೋಜು ಎನಿಸುತ್ತದೆ. ದೀರ್ಘಾವಧಿಯಿಂದ ವಿರಾಟ್‌ ಕೊಹ್ಲಿ ಎಷ್ಟೊಂದು ಒಳ್ಳೆಯ ಆಟಗಾರ ಎಂದು ನಮಗೆ ತಿಳಿದಿದೆ. ಸಚಿನ್‌ ತೆಂಡೂಲ್ಕರ್‌ರನ್ನು ಹಿಂದಿಕ್ಕಲು ಅವರಿಗೆ 4000 ರನ್‌ಗಳ ಅಗತ್ಯವಿದೆ. ಸಚಿನ್‌ ಎಂಥಾ ಅದ್ಭುತ ಆಟಗಾರ ಎಂಬುದನ್ನು ಇದು ತೋರಿಸುತ್ತದೆ. ಆದರೆ, ವಿರಾಟ್‌ ಕೊಹ್ಲಿಯಂತಹ ಆಟಗಾರರನ್ನು ನೀವು ನಿಲ್ಲಿಸಲು ಸಾಧ್ಯವಿಲ್ಲ. ಅವರಿಗೆ ರನ್‌ ಗಳಿಸುವ ಹಸಿವು ಇನ್ನೂ ಇದೆ," ಎಂದು ಆಸೀಸ್‌ ಮಾಜಿ ನಾಯಕ ತಿಳಿಸಿದ್ದಾರೆ.