ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

AUS vs SA ಪಂದ್ಯ ಮಳೆಗೆ ಬಲಿ, ಇಂಗ್ಲೆಂಡ್‌-ಆಫ್ಘನ್‌ ಸೆಮಿಫೈನಲ್‌ ಹಾದಿ ಹೇಗೆ? ಇಲ್ಲಿದೆ ಲೆಕ್ಕಾಚಾರ!

SA vs AUS Match abandoned due to rain: ರಾವಲ್ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ಮಳೆಯಿಂದ ರದ್ದಾಯಿತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಗಿದೆ. ಈ ಹಿನ್ನೆಲೆಯಲ್ಲಿ ಬಿ ಗುಂಪಿನ ಸೆಮಿಫೈನಲ್‌ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

ಆಸೀಸ್‌ vs ಆಫ್ರಿಕಾ ಪಂದ್ಯ ಮಳೆಗೆ ಬಲಿ, ಬಿ ಗುಂಪಿನ ಸೆಮೀಸ್‌ ಲೆಕ್ಕಾಚಾರ!

ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ಪಂದ್ಯ ಮಳೆಗೆ ಬಲಿ.

Profile Ramesh Kote Feb 25, 2025 8:14 PM

ರಾವಲ್ಪಿಂಡಿ: ಮಂಗಳವಾರ ಇಲ್ಲಿನ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯ ಮಳೆಯ ಕಾರಣ ಟಾಸ್‌ ಕಾಣದೆ ರದ್ದಾಯಿತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಂಡಿವೆ. ಅಂದ ಹಾಗೆ ಈ ಪಂದ್ಯವನ್ನು ಗೆದ್ದು ಸೆಮೀಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದ ಎರಡೂ ತಂಡಗಳಿಗೆ ಮಳೆ ಭಾರಿ ನಿರಾಶೆಯನ್ನು ಮೂಡಿಸಿತು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರತ್ಯೇಕವಾಗಿ ತಮ್ಮ-ತಮ್ಮ ಮೊದಲನೇ ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದವು.

ಟೂರ್ನಿಯ ಲೀಗ್‌ ಹಂತದ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ತಲಾ ಒಂದೊಂದು ಅಂಕವನ್ನು ಹಂಚಲಾಗಿದೆ. ಇದೀಗ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಬಿ ಗುಂಪಿನಲ್ಲಿ ತಲಾ ಮೂರು ಅಂಕಗಳನ್ನು ಹೊಂದಿದ್ದು, ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿವೆ. ಅಂದ ಹಾಗೆ ಎ ಗುಂಪಿನಲ್ಲಿ ತಮ್ಮ-ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಆದರೆ, ಬಿ ಗುಂಪಿನಲ್ಲಿ ಇನ್ನು ನಿರ್ಧಾರವಾಗಿಲ್ಲ.

ಹೆಬ್ಬೆರಳಿನ ಗಾಯ; ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಇಂಗ್ಲೆಂಡ್‌ ವೇಗಿ

ಬಿ ಗುಂಪಿನ ತಂಡಗಳ ಸೆಮಿಫೈನಲ್‌ ಲೆಕ್ಕಾಚಾರ

ಮಂಗಳವಾರದ ಪಂದ್ಯ ಮಳೆಗೆ ಬಲಿಯಾದ ಕಾರಣ ದಕ್ಷಿಣ ಆಫ್ರಿಕಾ ತಂಡ ಬಿ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರೆ, ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದೆ. ತಮ್ಮ-ತಮ್ಮ ಮೊದಲನೇ ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಬುಧವಾರ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಸೋತ ತಂಡ ಅಧಿಕೃತವಾಗಿ ನಾಕ್‌ಔಟ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬೀಳಲಿದೆ.



ತಮ್ಮ ಕೊನೆಯ ಲೀಗ್‌ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಗೆದ್ದರೆ, ಈ ಎರಡೂ ತಲಾ 5 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಆ ಮೂಲಕ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ತಾನ ತಂಡಗಳ ಪಂದ್ಯದ ಫಲಿತಾಂಶ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಹಾಗೂ ಈ ತಂಡಗಳು ಟೂರ್ನಿಯಿಂದ ಎಲಿಮಿನೇಟ್‌ ಆಗಲಿವೆ. ಫೆಬ್ರವರಿ 28 ರಂದು ಅಫ್ಘಾನಿಸ್ತಾನ ವಿರುದ್ದ ಆಸ್ಟ್ರೇಲಿಯಾ ಕಾದಾಟ ನಡೆಸಿದರೆ, ಮಾರ್ಚ್‌ ಒಂದರಂದು ಕರಾಚಿಯ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ದ ದಕ್ಷಿಣ ಆಫ್ರಿಕಾ ಸೆಣಸಲಿದೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮತ್ತೊಂದು ವಿವಾದ; ಐಸಿಸಿ ವಿರುದ್ಧವೇ ಪಿಸಿಬಿ ಆಕ್ರೋಶ!

ಇಂಗ್ಲೆಂಡ್‌ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯ ಗೆದ್ದ ತಂಡ, ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿಯೂ ಜಯಿಸಿದರೆ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಆದರೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕೂಡ ತಮ್ಮ-ತಮ್ಮ ಕೊನೆಯ ಲೀಗ್‌ ಪಂದ್ಯಗಳಲ್ಲಿಯೂ ಸೋಲಬೇಕಾಗುತ್ತದೆ. ಆಗ ಅಫಘಾನಿಸ್ತಾನ ಮತ್ತು ಇಂಗ್ಲೆಂಡ್‌ ನಡುವಣ ಪಂದ್ಯದ ಗೆದ್ದ ತಂಡ ಸೆಮೀಸ್‌ಗೆ ಪ್ರವೇಶ ಮಾಡಲಿದೆ ಹಾಗೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಉತ್ತಮ ನೆಟ್‌ ರನ್‌ರೇಟ್‌ ಇರುವ ತಂಡ ನಾಕ್‌ಔಟ್‌ಗೆ ತಲುಪಲಿದೆ.