#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Pariksha Pe Charcha: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ: ಬಾಲಕಿಯ‌ ಪಟಪಟ ಹಿಂದಿ ಮಾತುಗಳಿಗೆ ಮೋದಿ ಫುಲ್‌ ಫಿದಾ!

ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಫೆ.10) ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಮೂಲಕ ಸಂವಾದ ನಡೆಸಿದರು. ಸಂವಾದದ ವೇಳೆ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಸ್ಪಷ್ಟವಾದ ಹಿಂದಿ ಮಾತು ಕೇಳಿ ಮೋದಿ ಅಚ್ಚರಿಗೊಂಡಿದ್ದಾರೆ.

ಕೇರಳದ ಬಾಲಕಿಯ ಪಟಪಟ ಹಿಂದಿ ಮಾತುಗಳಿಗೆ ಮೋದಿ ಫಿದಾ!

Pariksha Pe Charcha

Profile Deekshith Nair Feb 10, 2025 1:34 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಫೆ.10) ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೇ ಚರ್ಚಾ'(Pariksha Pe Charcha) ಕಾರ್ಯಕ್ರಮದ ಮೂಲಕ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಜೊತೆ ತಮ್ಮ ಶಾಲಾ ದಿನಗಳ ತಮಾಷೆಯ ನೆನಪುಗಳನ್ನು ಮೆಲುಕು ಹಾಕಿದರು. ಅಷ್ಟೇ ಅಲ್ಲದೆ ಮಕ್ಕಳಿಗೆ ಪರೀಕ್ಷೆಯ ಒತ್ತಡವನ್ನು ನಿಭಾಯಿಸುವ ಕುರಿತು ಸೂತ್ರಗಳನ್ನು ನೀಡಿದರು. ಈ ಮಧ್ಯೆ ಸಂವಾದದ ವೇಳೆ ಕೇರಳದ ವಿದ್ಯಾರ್ಥಿನಿಯೊಬ್ಬಳ ಸ್ಪಷ್ಟವಾದ ಹಿಂದಿ ಮಾತುಗಳನ್ನು ಕೇಳಿ ಮೋದಿ ಅಚ್ಚರಿಗೊಂಡಿದ್ದಾರೆ.

ಕೇಂದ್ರ ಸರ್ಕಾರದ ಬಹು ಮಹತ್ವದ ಕಾರ್ಯಕ್ರಮವಾದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದಾರೆ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಮೋದಿ ವಿವರವಾಗಿ ಉತ್ತರಿಸುವ ಮೂಲಕ ಅವರ ಗೊಂದಲಕ್ಕೆ ಪರಿಹಾರ ನೀಡಿದ್ದಾರೆ. ಪರೀಕ್ಷೆಯ ಒತ್ತಡದಿಂದ ವಿದ್ಯಾರ್ಥಿಗಳನ್ನು ಹೊರ ತರುವ ಪ್ರಯತ್ನ ಈ ಕಾರ್ಯಕ್ರಮದಲ್ಲಿ ನಡೆದಿದ್ದು, ಗಣಿತ ವಿಷಯವನ್ನು ಸುಲಭವಾಗಿ ಕಲಿಯಲು ಮೊದಿ ತಮ್ಮದೇ ಸೂತ್ರಗಳನ್ನು ನೀಡಿದ್ದಾರೆ. ಈ ಮಧ್ಯೆ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಹಿಂದಿ ಮಾತು ಕೇಳಿ ಮೋದಿ ಅಚ್ಚರಿಗೊಂಡಿದ್ದಾರೆ. ಹುಡುಗಿಯನ್ನು ಶ್ಲಾಘಿಸಿದ್ದಾರೆ. ವಿದ್ಯಾರ್ಥಿನಿ ತನಗೆ ಹಿಂದಿ ಮಾತನಾಡುವುದೆಂದರೆ ತುಂಬಾ ಇಷ್ಟ ಎಂದಿದ್ದು, ಕವಿತೆ ಬರೆದಿರುವುದಾಗಿಯೂ ಹೇಳಿದ್ದಾಳೆ. ಮೋದಿ ಬಾಲಕಿಯನ್ನು ಹೊಗಳಿದ್ದಾರೆ.



ಸಂವಾದದಲ್ಲಿ ಬಿಹಾರದ ವಿದ್ಯಾರ್ಥಿಯೊಬ್ಬರು ಪ್ರಧಾನಿ ಮೋದಿಯವರಿಗೆ ನಾಯಕತ್ವಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರಧಾನಿ ಮೋದಿ ತಮಾಷೆಯಾಗಿ, ಬಿಹಾರದ ವಿದ್ಯಾರ್ಥಿ ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳದೇ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೇ, ಬಿಹಾರದ ಜನರನ್ನು ಪ್ರತಿಭಾನ್ವಿತರು ಎಂದು ಮೋದಿ ಬಣ್ಣಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ನಾಯಕತ್ವದ ಬಗ್ಗೆ ಮೋದಿ ಚರ್ಚಿಸಿ ನಿಮ್ಮ ನಂಬಿಕೆ ಮತ್ತು ಆತ್ಮವಿಶ್ವಾಸವೇ ನಾಯಕತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ:Akkineni Family: ಅಕ್ಕಿನೇನಿ ನಾಗಾರ್ಜುನ ಕುಟುಂಬದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

ಇನ್ನು ತ್ರಿಪುರಾದ ವಿದ್ಯಾರ್ಥಿಯನ್ನು ಮಾತನಾಡಿಸಿರುವ ಪ್ರಧಾನಿ ಮೋದಿ, ನೀವು ಇಲ್ಲಿಗೆ ಹೇಗೆ ಬಂದಿರಿ ಎಂದು ಕೇಳಿದ್ದಾರೆ ಇಲ್ಲಿಗೆ ಬರಲು ಲಂಚ ಏನಾದರೂ ನೀಡಿದಿರಾ ಎಂದು ತಮಾಷೆಯಾಗಿ ಕೇಳಿ ಕಾಲೆಳಿದಿದ್ದಾರೆ. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಯು ತ್ರಿಪುರಾದಲ್ಲಿ ಲಂಚ ಕೆಲಸ ಮಾಡುವುದಿಲ್ಲ ಎಂದು ಉತ್ತರಿಸಿದ್ದಾರೆ. ವಿದ್ಯಾರ್ಥಿಯ ಮಾತಿಗೆ ಮೋದಿ ಫಿದಾ ಆಗಿದ್ದಾರೆ.